ಪುನೀತ್ ರಾಜಕುಮಾರ್ ಅವರ ಸಾವಿನ ದುಃಖವನ್ನು ಇಡಿ ಕರ್ನಾಟಕದವರಿಗೆ ಸಹಿಸಲು ಇಂದಿಗೂ ಆಗುತ್ತಿಲ್ಲ ಹೀಗಿರುವಾಗ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ಕಷ್ಟವಾಗಿರುತ್ತದೆ. ಇದರ ಬೆನ್ನಲ್ಲೆ ಅಶ್ವಿನಿ ಅವರ ತಂದೆ ಸಾವನ್ನಪ್ಪಿದ್ದಾರೆ. ಅಶ್ವಿನಿ ಅವರ ತಂದೆಯವರು ಹೇಗೆ ಸಾವನ್ನಪ್ಪಿದರು ಹಾಗೂ ಇತರೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ
ಪ್ರತಿಯೊಂದು ಹೆಣ್ಣಿಗೂ ಆಕೆಯ ತಂದೆಯೆ ಅವಳ ಜೀವನದಲ್ಲಿ ಮೊದಲ ಹೀರೊ. ಮದುವೆ ನಂತರ ಗಂಡನಲ್ಲಿ ತಂದೆಯನ್ನು ನೋಡುತ್ತಾರೆ. ಗಂಡನು ಒಂದು ರೀತಿಯಲ್ಲಿ ಆ ಹೆಣ್ಣಿಗೆ ಹೀರೊ ಆಗಿರುತ್ತಾನೆ. ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ಅವರ ತಂದೆಯೆ ಮೊದಲ ಹೀರೊ ನಂತರ ಪುನೀತ್ ರಾಜಕುಮಾರ್ ಅವರನ್ನು ಮದುವೆಯಾಗಿ ದೊಡ್ಮನೆ ಕುಟುಂಬಕ್ಕೆ ಸೇರುತ್ತಾರೆ. ಅಶ್ವಿನಿ ಅವರು ತಮ್ಮ ಅಣ್ಣ, ತಮ್ಮ, ತಂದೆಯನ್ನು ಪುನೀತ್ ರಾಜಕುಮಾರ್ ಅವರಲ್ಲಿ ನೋಡುತ್ತಾರೆ.
ಪುನೀತ್ ರಾಜಕುಮಾರ್ ಅವರ ಕುಟುಂಬ ಸುಖಮಯ ಕುಟುಂಬವಾಗಿತ್ತು, ಇಬ್ಬರು ಮಕ್ಕಳು ಸಂತೋಷದಿಂದ ಇದ್ದರು ಅಲ್ಲದೆ ಅಪಾರ ಜನರ ಪ್ರೀತಿ ಅವರಿಗಿತ್ತು. 2021ನೆ ಅಕ್ಟೋಬರ್ 29ರಂದು ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ಜೀವವಾಗಿದ್ದ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಳ್ಳುವ ಸಮಯ ಬಂದೊದಗಿತು. ಅಶ್ವಿನಿ ಅವರು ಅದೆಷ್ಟು ಸಂಕಟವನ್ನು ಅನುಭವಿಸಿದರು ಅದು ಸಾಲದೆಂದು ಭಗವಂತ ಇನ್ನೊಂದು ಶಾಕ್ ಕೊಟ್ಟಿದ್ದಾನೆ.
ಅಶ್ವಿನಿ ಪುನೀತ್ ರಾಜಕುಮಾರ್ ಅವರ ಜೀವನದ ಮೊದಲ ಹೀರೊ ಆಗಿದ್ದ ಅವರ ತಂದೆ ರೇವನಾಥ್ ಅವರನ್ನು ಕಳೆದುಕೊಂಡರು. ಪುನೀತ್ ರಾಜಕುಮಾರ್ ಅವರ ಸಾವಿನ ದುಃಖದಿಂದ, ವೇದನೆಯಿಂದ ಅಶ್ವಿನಿ ಅವರಿಗೆ ಹೊರಬರಲು ಸಾಧ್ಯವಾಗುತ್ತಿಲ್ಲ ಅದರ ಬೆನ್ನಲ್ಲೆ ಅವರ ತಂದೆಯನ್ನು ಕಳೆದುಕೊಂಡಿದ್ದು ವಿಪರ್ಯಾಸ. ಪುನೀತ್ ರಾಜಕುಮಾರ್ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಅದೇ ರೀತಿ ಅಶ್ವಿನಿ ಅವರ ತಂದೆ ರೇವನಾಥ್ ಅವರು 78ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ರೇವನಾಥ್ ಅವರು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಭಾಗಮನೆಯವರು. ರೇವನಾಥ್ ಅವರ ಬಗ್ಗೆ ಅಲ್ಲಿಯ ಜನರು ಒಳ್ಳೆಯ ಅಭಿಪ್ರಾಯವನ್ನು ಹೊಂದಿದ್ದಾರೆ.
ರೇವನಾಥ್ ಅವರು ಮಹಾನಗರಪಾಲಿಕೆಯಲ್ಲಿ ಎಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಬೆಂಗಳೂರಿಗೆ ಶಿಫ್ಟ್ ಆಗಿ ಬಹಳ ವರ್ಷಗಳಾಗಿದ್ದವು. ಅವರು ಆರೋಗ್ಯವಂತರಾಗಿದ್ದರು 20 ವರ್ಷಗಳ ಹಿಂದೆ ಒಮ್ಮೆ ಹೃದಯ ಸಮಸ್ಯೆ ಕಾಣಿಸಿಕೊಂಡು ಚಿಕಿತ್ಸೆ ಮಾಡಲಾಗಿತ್ತು. ನಿನ್ನೆ ಬೆಳಗ್ಗೆ ವಾಕಿಂಗ್ ಹೋಗುವ ಸಮಯದಲ್ಲಿ ಇದ್ದಕ್ಕಿದ್ದಂತೆ ಕುಸಿದು ಬೀಳುತ್ತಾರೆ ತಕ್ಷಣ ಅವರನ್ನು ಎಂಎಸ್ ರಾಮಯ್ಯ ಆಸ್ಪತ್ರೆಗೆ ದಾಖಲು ಮಾಡಲಾಯಿತು ಆದರೆ ಅವರನ್ನು ಉಳಿಸಿಕೊಳ್ಳಲು ಆಗಲಿಲ್ಲ.
ಪುನೀತ್ ರಾಜಕುಮಾರ್ ಅವರು ವಿಧಿವಶರಾದ ನಂತರ ರೇವನಾಥ್ ಅವರು ಅಶ್ವಿನಿ ಅವರಿಗೆ ಒಂಟಿತನದ ಸಮಸ್ಯೆ ಆಗಬಾರದೆಂದು ಅವರ ಜೊತೆ ಇದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಪುನೀತ್ ರಾಜಕುಮಾರ್ ಅವರು ಸಾವನ್ನಪ್ಪಿದ ನಂತರ ರೇವನಾಥ್ ಅವರು ಅಳಿಯನನ್ನು ಕಳೆದುಕೊಂಡ ದುಃಖದಿಂದ ಕುಗ್ಗಿಹೋಗಿದ್ದರು. ಸಾಮಾನ್ಯವಾಗಿ ಪ್ರತಿಯೊಬ್ಬ ತಂದೆ ತನ್ನ ಮಗಳ ಜೀವನ ಅದ್ಭುತವಾಗಿರಲಿ ಎಂದು ಬಯಸುತ್ತಾರೆ ಅದರಂತೆ ಅಶ್ವಿನಿ ಅವರ ತಂದೆಯ ಆಸೆಯಂತೆ ಮಗಳ ಜೀವನ ಸಂತೋಷವಾಗಿದೆ ಎನ್ನುವಷ್ಟರಲ್ಲಿ ಅಳಿಯನನ್ನು ಕಳೆದುಕೊಳ್ಳಬೇಕಾಯಿತು ಇದರಿಂದ ಅಶ್ವಿನಿ ಅವರಿಗೆ ಎಷ್ಟು ದುಃಖವಾಗಿದೆಯೊ ಅಷ್ಟೆ ದುಃಖ ಅವರ ತಂದೆಗೆ ಆಗಿರುತ್ತದೆ.
ರೇವನಾಥ್ ಅವರು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಇದರಿಂದ ಹಾರ್ಟ್ ಪ್ರೆಶರ್ ಜಾಸ್ತಿಯಾಗಿ ಸಾವನ್ನಪ್ಪಿರಬಹುದು ಎಂದು ಹೇಳಬಹುದಾಗಿದೆ. ಅಶ್ವಿನಿ ಹಾಗೂ ಪುನೀತ್ ರಾಜಕುಮಾರ್ ಅವರು ಪ್ರೀತಿಸಿ ಮದುವೆಯಾಗಿದ್ದಾರೆ ಮೊದಲಿಗೆ ರೇವನಾಥ್ ಅವರು ಮದುವೆಗೆ ವಿರೋಧ ವ್ಯಕ್ತಪಡಿಸಿದರು. ಅಶ್ವಿನಿ ಅವರದು ಚಿಕ್ಕ ವಯಸ್ಸು ದೊಡ್ಮನೆ ಕುಟುಂಬ ಕರ್ನಾಟಕದಲ್ಲಿ ಪ್ರತಿಷ್ಠಿತ ಕುಟುಂಬವಾಗಿದ್ದು ಆ ಕುಟುಂಬದ ಜವಾಬ್ದಾರಿಯನ್ನು ತೆಗೆದುಕೊಳ್ಳುವ ಸಾಮರ್ಥ್ಯ ಅವಳಿಗಿದೆಯೆ, ಅವಳು ಅಲ್ಲಿ ಹೊಂದಾಣಿಕೆ ಆಗದೆ ಇರಬಹುದು ಎಂಬ ಕಾರಣಕ್ಕೆ ವಿರೋಧ ವ್ಯಕ್ತಪಡಿಸಿದರು.
ಜೊತೆಗೆ ಆ ಸಮಯದಲ್ಲಿ ಪುನೀತ್ ರಾಜಕುಮಾರ್ ಅವರ ಬಗ್ಗೆ ಇಲ್ಲಸಲ್ಲದ ವಿಷಯವನ್ನು ಹರಡಿಸಿದ್ದರು. ನಂತರ ಪುನೀತ್ ರಾಜಕುಮಾರ್ ಅವರೆ ಸ್ವತಃ ರೇವನಾಥ್ ಅವರ ಮನವೊಲಿಸಿದರು ನಾನು ನಿಮ್ಮ ಮಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಮಾತುಕೊಟ್ಟಿದ್ದರು ಅದರಂತೆ ಅಶ್ವಿನಿ ಅವರನ್ನು ನೋಡಿಕೊಳ್ಳುತ್ತಿದ್ದರು.
ಮೊದಲು ಗಂಡನನ್ನು ಕಳೆದುಕೊಂಡ ಅಶ್ವಿನಿ ಅವರು ಈಗ ತಂದೆಯನ್ನು ಕಳೆದುಕೊಂಡ ನೋವನ್ನು ಅನುಭವಿಸಬೇಕಾಗಿದೆ ಜೊತೆಗೆ ದೊಡ್ಮನೆಗೆ ತುಂಬಲಾರದ ನಷ್ಟವಾಗಿದೆ. ಪುನೀತ್ ರಾಜಕುಮಾರ್ ಅವರು ನೇತ್ರದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದರು ಅದರಂತೆ ರೇವನಾಥ್ ಅವರು ಕೂಡ ಅಳಿಯನಂತೆ ನೇತ್ರದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ಅವರ ತಂದೆಯ ಸಾವಿನ ದುಃಖವನ್ನು ಸಹಿಸಲು ಭಗವಂತ ಶಕ್ತಿ ಕೊಡಲಿ ಎಂದು ಆಶಿಸೋಣ.