Aries Horoscope October 2023: ದ್ವಾದಶ ರಾಶಿಗಳಲ್ಲಿ ಮೊದಲ ರಾಶಿಯಾದ ಮೇಷ ರಾಶಿಯು ತನ್ನದೆ ಆದ ಸ್ಥಾನವನ್ನು ಹೊಂದಿದೆ. ಮೇಷ ರಾಶಿಯಲ್ಲಿ ಜನಿಸಿದವರು ಅಶ್ವಿನಿ, ಭರಣಿ, ಕೃತ್ತಿಕಾ ನಕ್ಷತ್ರದಲ್ಲಿ ಜನಿಸಿರುತ್ತಾರೆ. ಮೇಷ ರಾಶಿಯವರ ಅಕ್ಟೋಬರ್ ತಿಂಗಳಿನ ಮಾಸ ಭವಿಷ್ಯ ಗ್ರಹಗಳ ಚಲನೆ ಅದರ ಪರಿಣಾಮಗಳು ಹಾಗೂ ಉದ್ಯೋಗ ಶಿಕ್ಷಣ ಮದುವೆ ಕೌಟುಂಬಿಕ ವಿಚಾರ ಅಷ್ಟೆ ಅಲ್ಲದೆ ಪರಿಹಾರ ವಿಷಯಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ
ಮೇಷ ರಾಶಿಯವರ ಅಕ್ಟೋಬರ್ ತಿಂಗಳಿನ ಮಾಸ ಭವಿಷ್ಯ ಲಾಭ ನಷ್ಟದ ಲೆಕ್ಕಾಚಾರ ನೋಡುವುದಾದರೆ. ಮೇಷ ರಾಶಿಯವರ ನಕ್ಷತ್ರಗಳು ಅಶ್ವಿನಿ ನಕ್ಷತ್ರದ 4 ಚರಣ ಭರಣಿ ನಕ್ಷತ್ರದ ನಾಲ್ಕು ಚರಣ ಕೃತ್ತಿಕಾ ನಕ್ಷತ್ರದ ಒಂದು ಚರಣದಲ್ಲಿ ಜನಿಸಿರುತ್ತಾರೆ. ಮೇಷ ರಾಶಿಯ ಅದೃಷ್ಟ ದೇವತೆ ಶಿವ ಹಾಗೂ ಆಂಜನೇಯ ಪರಮಾತ್ಮ. ಮೇಷ ರಾಶಿಯವರ ಅದೃಷ್ಟದ ಬಣ್ಣ ಬಿಳಿ ಹಾಗೂ ಕೆಂಪು ಬಣ್ಣವಾಗಿದೆ.
ಮೇಷ ರಾಶಿಯವರ ಮಿತ್ರ ರಾಶಿಗಳು ಸಿಂಹ ತುಲಾ ಧನಸ್ಸು ರಾಶಿಯಾಗಿದೆ ಶತ್ರು ರಾಶಿಗಳು ಮಿಥುನ ಹಾಗೂ ಕನ್ಯಾ ರಾಶಿಯಾಗಿದೆ. ಮೇಷ ರಾಶಿಯವರ ವಿಶೇಷ ಗುಣವೆಂದರೆ ಧೈರ್ಯಶಾಲಿಗಳಾಗಿರುತ್ತಾರೆ ಎಂತಹ ಸಮಸ್ಯೆಗಳನ್ನು ಎದುರಿಸಿದರು ಅವರ ಧೈರ್ಯ ಕುಂದುವುದಿಲ್ಲ ಆದರೆ ಅವರಿಗೆ ಬೇಗನೆ ಕೋಪ ಬರುತ್ತದೆ ಇವರು ಕೋಪವನ್ನು ಕಡಿಮೆ ಮಾಡಿಕೊಳ್ಳಬೇಕು. ಅಕ್ಟೋಬರ್ 2 6 9 10 12 13 22 ನೇ ತಾರೀಖು ಮೇಷ ರಾಶಿಯವರಿಗೆ ಶುಭ ತರುವ ದಿನಗಳಾಗಿದೆ.
ಅಕ್ಟೋಬರ್ ತಿಂಗಳಿನಲ್ಲಿ ಮೇಷ ರಾಶಿಯವರ ಜವಾಬ್ದಾರಿ ಹೆಚ್ಚಾಗಿದ್ದು ಗೊಂದಲಗಳು ಪ್ರಶ್ನೆಗಳ ನಡುವೆ ಸವಾಲನ್ನು ಸ್ವೀಕರಿಸುವ ಮೇಷ ರಾಶಿಯವರ ಧೈರ್ಯ ಮೆಚ್ಚುವಂತದ್ದು ಮೇಷ ರಾಶಿಯವರು ಚಿಂತೆಯನ್ನು ಮಾಡುವುದನ್ನು ಬಿಟ್ಟು ಪರಿಹಾರವನ್ನು ಹುಡುಕುವ ಕಡೆ ಲಕ್ಷ ವಹಿಸಬೇಕು. ಎಂಥ ಸಂದರ್ಭದಲ್ಲಿಯೂ ಗೆಲ್ಲುವ ಸಾಮರ್ಥ್ಯ ಮೇಷ ರಾಶಿಯವರಿಗೆ ಇದೆ ಆದರೆ ಅದನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬೇಕು. ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಅವರ ಅಭಿಪ್ರಾಯವೆ ಅಂತಿಮವಾಗಿರಬೇಕು ಸಲಹೆಗಳನ್ನು ಬೇರೆಯವರು ಕೊಡಬಹುದು ಆದರೆ ರಿಸ್ಕ್ ತೆಗೆದುಕೊಂಡು ಸವಾಲುಗಳನ್ನು ಎದುರಿಸುವುದು ನಾವೆ ಆಗಿರುತ್ತೇವೆ. ಆದಾಯ ಬಂದರು ಲಾಭ ನಷ್ಟದ ಲೆಕ್ಕಾಚಾರ ಇರುತ್ತದೆ.
Aries Horoscope October 2023
ವಿದ್ಯಾರ್ಥಿಗಳಿಗೆ ಅಕ್ಟೋಬರ್ ತಿಂಗಳು ಅನುಕೂಲಕರವಾದ ಸಮಯವಾಗಿದೆ. ಸಂತಾನ ವಿಷಯದಲ್ಲಿ ಮೇಷ ರಾಶಿಯ ಕೆಲವರಿಗೆ ಸಮಸ್ಯೆಗಳಾಗಿದೆ, ಮೇಷ ರಾಶಿಯವರು ಅಕ್ಟೋಬರ್ ತಿಂಗಳಿನಲ್ಲಿ ವಾದ ವಿವಾದದಿಂದ ದೂರ ಇರಬೇಕು, ಮಾನಸಿಕವಾಗಿ ಕೆಲವು ಸಲ ಕಿರಿಕಿರಿಯನ್ನು ಅನುಭವಿಸಬೇಕಾಗುತ್ತದೆ. ಮೇಷ ರಾಶಿಯವರಿಗೆ ಅಕ್ಟೋಬರ್ ತಿಂಗಳಿನಲ್ಲಿ ಒಬ್ಬರ ಮೇಲೆ ಇಟ್ಟಿರುವ ಒಳ್ಳೆಯ ಅಭಿಪ್ರಾಯ ಅವರಿಗೆ ಅದು ಕೆಟ್ಟ ರೀತಿಯಲ್ಲಿ ಕಾಣಬಹುದು. ಮೇಷ ರಾಶಿಯವರು ಜನರ ನಡುವೆ ಸೂಕ್ಷ್ಮವಾಗಿ ಸರಳವಾದ ನಡೆಯನ್ನು ಇಡಬೇಕಾಗುತ್ತದೆ. ಪಾಲುದಾರಿಕೆ ವ್ಯವಹಾರ ಮಾಡುವುದು ಸೂಕ್ತವಲ್ಲ ಸುಮ್ಮನೆ ದುಡ್ಡು ಖರ್ಚಾಗುತ್ತದೆ ಲೆಕ್ಕಾಚಾರದಲ್ಲಿ ಏರುಪೇರು ಕಂಡುಬರುತ್ತದೆ. ವಾದ ವಿವಾದಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ರಕ್ಷಣಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೆ ಅಕ್ಟೋಬರ್ ತಿಂಗಳಿನಲ್ಲಿ ಬಡ್ತಿ ಸಿಗುವ ಸಾಧ್ಯತೆ ಇದೆ.
ಮೇಷ ರಾಶಿಯ ವೈದ್ಯರಿಗೆ ಅಕ್ಟೋಬರ್ ತಿಂಗಳು ಉತ್ತಮವಾಗಿದೆ ವ್ಯಾಪಾರ ವ್ಯವಹಾರ ಮಾಡುತ್ತಿರುವವರು ಬಹಳ ಕಷ್ಟ ಪಟ್ಟಾಗ ಉತ್ತಮ ಫಲ ಸಿಗುತ್ತದೆ ಆದ್ದರಿಂದ ಹೆಚ್ಚಿನ ಸಮಯವನ್ನು ಕೆಲಸದಲ್ಲಿ ತೊಡಗಿಕೊಳ್ಳುವುದು ಉತ್ತಮ. ಮನೆಯಲ್ಲೆ ಕೆಲಸ ಮಾಡುತ್ತಿರುವವರಿಗೆ ಗೃಹಿಣಿಯರಿಗೆ ಸಾಧಾರಣವಾದ ಫಲ ಸಿಗಲಿದೆ. ಮೇಷ ರಾಶಿಯ ರಾಜಕಾರಣಿಗಳಿಗೆ ಓಡಾಟ ಹೆಚ್ಚಿರುತ್ತದೆ. ಮೇಷ ರಾಶಿಯ ಕಲಾವಿದರಿಗೆ ತನ್ನ ಕಲೆಗೆ ಬೆಲೆ ಸಿಗುತ್ತಿಲ್ಲವೆಂಬ ನೋವಿದೆ. ಮೇಷ ರಾಶಿಯವರ ಆರೋಗ್ಯ ವಿಚಾರ ನೋಡುವುದಾದರೆ ಬಿಪಿ ಶುಗರ್ ಇರುವವರು ಜಾಗರೂಕತೆಯಿಂದ ಇರಬೇಕು, ಮೇಷ ರಾಶಿಯವರ ಪತಿ ಅಥವಾ ಪತ್ನಿಯ ಆರೋಗ್ಯದ ಬಗ್ಗೆ ಗಮನ ಹರಿಸಬೇಕು.
ಮೇಷ ರಾಶಿಯ ಕೆಲವರಿಗೆ ಅಕ್ಟೋಬರ್ ತಿಂಗಳಿನಲ್ಲಿ ಉದ್ಯೋಗದಲ್ಲಿ ವರ್ಗಾವಣೆಯಾಗುವ ಸಾಧ್ಯತೆ ಇದೆ. ಮೇಷ ರಾಶಿಯವರು ಉದ್ಯೋಗದ ವಿಚಾರದಲ್ಲಿ ಸ್ವಲ್ಪ ಎಚ್ಚರಿಕೆ ವಹಿಸಬೇಕು ವಿರುದ್ಧ ಲಿಂಗದವರಿಂದ ತೊಂದರೆಗಳಾಗುವ ಸಾಧ್ಯತೆ ಇರುತ್ತದೆ ಅಂದರೆ ಪುರುಷರಾಗಿದ್ದಲ್ಲಿ ಸ್ತ್ರೀಯರ ಬಗ್ಗೆ ಸ್ತ್ರೀಯರಾಗಿದ್ದಲ್ಲಿ ಪುರುಷ ಉದ್ಯೋಗಿಗಳ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಬೇಕು. ಮೇಷ ರಾಶಿಯ ಹಿರಿಯರ ಆರೋಗ್ಯದ ಬಗ್ಗೆ ಗಮನಹರಿಸಬೇಕು ಮನೆಯಲ್ಲಿ ಕಿರಿಕಿರಿ ವಾತಾವರಣವಿರುತ್ತದೆ ಅವುಗಳನ್ನು ತಾಳ್ಮೆಯಿಂದ ಎದುರಿಸುವ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು. ಅಕ್ಟೋಬರ್ ತಿಂಗಳಲ್ಲಿ ಮೇಷ ರಾಶಿಯ ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿ ವಹಿಸಬೇಕಾಗುತ್ತದೆ ಹಾಗೂ ಎಲ್ಲಾ ಕೆಲಸಗಳನ್ನು ಎಚ್ಚರಿಕೆಯಿಂದ ಮಾಡಬೇಕು.
ಮೇಷ ರಾಶಿಯವರು ಮೌಲ್ಯಯುತ ವಸ್ತುಗಳ ಬಗ್ಗೆ ಎಚ್ಚರಿಕೆ ವಹಿಸಬೇಕು ಕಳುವಾಗುವ ಸಾಧ್ಯತೆಗಳಿದೆ. ಮೇಷ ರಾಶಿಯವರು ಹಿತ ಶತ್ರುಗಳಿಂದ ಎಚ್ಚರಿಕೆಯಿಂದ ಇರಬೇಕು. ಮೇಷ ರಾಶಿಯ ಪ್ರೇಮಿಗಳಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ವೈಮನಸ್ಸು ಉಂಟಾಗುವ ಸಾಧ್ಯತೆ ಇದೆ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಹೊಂದಿಕೊಳ್ಳಲು ಸಮಯದ ಅವಶ್ಯಕತೆ ಇದೆ. ಮೇಷ ರಾಶಿಯವರು ಅಕ್ಟೋಬರ್ ತಿಂಗಳಲ್ಲಿ ಸತ್ಯನಾರಾಯಣ ಪೂಜೆಯನ್ನು ಮಾಡುವುದು ಒಳ್ಳೆಯದು, ವಿಷ್ಣು ಸಹಸ್ರನಾಮವನ್ನು ಪಠಿಸುವುದು, ಸೂರ್ಯನ ದೇವಾಲಯಕ್ಕೆ ಭೇಟಿ ನೀಡಿ ಗೋಧಿಯನ್ನು ದಾನ ಮಾಡುವುದರಿಂದ ಕಷ್ಟಗಳು ದೂರವಾಗಿ ಒಳ್ಳೆಯ ಫಲ ಸಿಗುತ್ತದೆ.
ಒಟ್ಟಿನಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ಮೇಷ ರಾಶಿಯವರಿಗೆ ಶುಭಫಲವಿದ್ದರೂ ಸವಾಲುಗಳು ಸಾಕಷ್ಟಿದ್ದು ತಾಳ್ಮೆಯಿಂದ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಈ ಮಾಹಿತಿಯನ್ನು ತಪ್ಪದೆ ಎಲ್ಲಾ ಮೇಷ ರಾಶಿಯವರಿಗೆ ತಿಳಿಸಿ ತಾಳ್ಮೆಯಿಂದ ಜೀವನದ ಕಷ್ಟಗಳನ್ನ ಎದುರಿಸಿ.
ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.