2024 ರಲ್ಲಿ ಅಡಿಕೆ ಕೃಷಿ ಮಾಡಲು ಬಯಸುವ ಜನರು ಕೆಲವು ವಿಚಾರಗಳನ್ನು ತಿಳಿದಿರಬೇಕು. ಅಡಿಕೆ ಕೃಷಿ ಹೆಚ್ಚಿನ ಲಾಭದಾಯಕ ಕ್ಷೇತ್ರವಾಗಿದ್ದು ಅನೇಕ ರೈತರು ಈ, ಕೃಷಿಯಲ್ಲಿ ಲಕ್ಷಾಂತರ ರೂಪಾಯಿ ಲಾಭ ಗಳಿಕೆ ಮಾಡುತ್ತಿದ್ದಾರೆ.

ಅಡಿಕೆ ಕೃಷಿ (Arecanut Cultivation) ಮಾಡುವ ಮುನ್ನ ಅವುಗಳಲ್ಲಿ ಯಾವ ಯಾವ ಕ್ರಮ ಅನುಕರಣೆ ಮಾಡಿದರೆ ಹೆಚ್ಚಿನ ಲಾಭ ಸಿಗುತ್ತದೆ. ಅಡಿಕೆ ಸಸ್ಯವನ್ನು ಹೇಗೆ ನಾಟಿ ಮಾಡಿದರೆ ಉತ್ತಮ? ಅದಕ್ಕೆ, ಅಗತ್ಯ ಇರುವ ಇತರೆ ಪೋಷಕಾಂಶಗಳು ಯಾವುದು ಎನ್ನುವ ಇತ್ಯಾದಿ ವಿಚಾರಗಳನ್ನು ತಿಳಿಯೋಣ ಬನ್ನಿ:-

ಮೊದಲಿಗೆ ಅಡಿಕೆ ಸಸ್ಯಗಳ ಅಯ್ಕೆ ತುಂಬ ಮುಖ್ಯ. ಅಡಿಕೆ ಕೃಷಿ (Arecanut Cultivation) ಮಾಡುವ ಮುನ್ನ ಸಸ್ಯಗಳ ನಾಟಿ ಮಾಡುವುದು ಹೆಚ್ಚು ಮುಖ್ಯ. ಅದನ್ನು, ಖರೀದಿ ಮಾಡಬಹುದು ಇಲ್ಲವೇ ಸಸ್ಯವನ್ನು ರೈತರೇ ನಾಟಿ ಮಾಡಿದರೂ ಸಹ ಅವುಗಳ ಆಯ್ಕೆ ಮಾಡುವ ವಿಧಾನದ ಅರಿವು ಇರುವುದು ಉತ್ತಮ.

ಯಾವ ರೀತಿಯ, ಸಸ್ಯವನ್ನು ಎಲ್ಲಿ ನಾಟಿ ಮಾಡುತ್ತಿದ್ದೀರಿ ಎನ್ನುವುದು ತುಂಬ ಮುಖ್ಯ ಆಗುತ್ತದೆ. ಅಡಿಕೆ ಸಸ್ಯವನ್ನು ರೈತರೇ ಮಾಡಿಕೊಳ್ಳುವುದಾದರೆ ಬಿಸಿಲು ನೆರಳು, ಬೆಳಕು ಎಲ್ಲವೂ ಚೆನ್ನಾಗಿ ದೊರಕುವಂತೆ ನೋಡಿಕೊಳ್ಳಬೇಕು. ಅದಕ್ಕಾಗಿ, ಪ್ರತ್ಯೇಕವಾಗಿ ಮೇಲ್ಗಡೆ ಹಸಿರು ಹಾಸನ್ನು ಹಾಕಬೇಕು ಮತ್ತು ನಡುವೆ ಅಂತರ ಇರಬೇಕು. ಅಡಿಕೆ (Arecanut) ಸಸ್ಯವನ್ನು ಪೋಷಣೆ ಮಾಡುವಾಗ ಎರಡು ಸಾಲುಗಳ ಅಂತರ ಕಾಯುವುದು ತುಂಬ ಮುಖ್ಯ.

ಒತ್ತೊತ್ತಾಗಿ ಹತ್ತಿರ ನೆಟ್ಟರೆ ಅವುಗಳು ಸಮೃದ್ಧವಾಗಿ ಬೆಳೆಯಲು ಸಾಧ್ಯವಿಲ್ಲ. ಹೆಚ್ಚಿನ ಜನರು ಸಸ್ಯಗಳನ್ನು ಪ್ಯಾಕೆಟ್’ನಲ್ಲಿ ಬೆಳೆಯುವರು. ಅದನ್ನು, ನಂತರ ಹಾಗೆ ತೋಟಕ್ಕೂ ಹಾಕಿ ಬಿಡುವರು ಅದು, ತಪ್ಪು. ಪ್ಯಾಕೆಟ್’ನಿಂದ ಗಿಡವನ್ನು ಹೊರಗೆ ತೆಗೆದು ಬೇರುಗಳಿಗೆ ಹಾನಿ ಆಗದಂತೆ ನಾಟಿ ಮಾಡಬೇಕು. ಈ, ಸಲಹೆ ಅನುಕರಣೆ ಮಾಡಿ ಅಡಿಕೆ ಸಸ್ಯ ನಾಟಿ ಮಾಡುವಾಗ ಡಿಗ್ಗರ್ ಮೆಷಿನ್’ನಿಂದ ಹೊಂಡ ತೋಡಿದರೆ ಮಣ್ಣಿನ ಫಲವತ್ತತೆ ನಾಶ ಆಗುತ್ತದೆ. ಶ್ರಮಿಕರನ್ನು ಕರೆಸಿ ಅಡಿಕೆ ಸಸ್ಯಕ್ಕೆ ಗುಂಡಿ ತೋಡುವುದು ಒಳ್ಳೆಯದು.

ಒಂದು ವರ್ಷದ ಅಡಿಕೆ ಸಸ್ಯ ನೆಡುವುದು ಒಳ್ಳೆಯದು. ಅಡಿಕೆ ಸಸ್ಯವನ್ನು ಗುಂಡಿಗೆ ಹಾಕುವಾಗ ಕಾಲಿನಲ್ಲಿಯೇ ಮಣ್ಣಿನ ಹದ ಮಾಡಿಕೊಳ್ಳಬೇಕು. 80% ರಷ್ಟು ಗುಂಡಿ ಮುಚ್ಚಿ ನಂತರ ಅದಕ್ಕೆ, ಕೆಲ ಸಾವಯವ ಮತ್ತು ಸ್ವಲ್ಪ ಪ್ರಮಾಣದಲ್ಲಿ ರಾಸಾಯನಿಕ ಸಿಂಪಡಣೆ ಮಾಡಬೇಕು.

ಗೊಬ್ಬರ ಹಾಕಿದ ಮೇಲೆ ಮತ್ತೆ ಅದರ, ಮೇಲೆ ಮಣ್ಣು ಹಾಕಿ ಮುಚ್ಚಬೇಕು. ಗಿಡಗಳಿಗೆ ಕೋಲನ್ನು ಸಪೋರ್ಟ್ ನೀಡಿ ಕಟ್ಟು ಹಾಕಿ ಬೆಳೆಸಬೇಕು. ನೀರಿನ ವ್ಯವಸ್ಥೆ ಹೆಚ್ಚಾಗಿ ಅಡಿಕೆ ಸಸ್ಯಗಳಿಗೆ ಪೋಷಣೆ ಮಾಡಲು ಬೇಕು ಮತ್ತು ಗಿಡಗಳಿಗೆ ಅಧಿಕ ನೀರು ಬೇಕು ಎನ್ನುವುದು ತಪ್ಪು ಪರಿಕಲ್ಪನೆ. ಆದರೆ, ಗಿಡಗಳಿಗೆ ಕೇವಲ ತಂಪು ಬೇಕಾಗಿರುವುದು ಅಧಿಕ ನೀರಿನ ಅಗತ್ಯ ಇರುವುದಿಲ್ಲ. ಅದರಿಂದ, ಮಳೆಗಾಲದ ನೀರು ಬೇರಿನಲ್ಲೇ ಉಳಿದು ಮಣ್ಣು ಸಡಿಲವಾಗಿ ಅಡಿಕೆ ಸಸ್ಯ ಹಾನಿಯಾಗದಂತೆ ಕಾಯುವ ಸಲುವಾಗಿ ಸಸ್ಯದ ಪಕ್ಕದಲ್ಲಿ ನೀರು ಹೋಗುವ ಮಾರ್ಗ ಕೂಡ ಮಾಡಬೇಕು. ಇದು, ಸಸಿಗಳನ್ನು ರಕ್ಷಣೆ ಮಾಡುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!