Arati dogra IAS Success Story: ಜೀವನದಲ್ಲಿ ಎಲ್ಲವು ಸರಿ ಇದೂ ಸಾಧನೆ ಮಾಡುವವರ ಸಂಖ್ಯೆ ಕಡಿಮೆ, ದೇವರು ದೇಹದ ಪ್ರತಿಯೊಂದು ಅಂಗಗಳನ್ನು ಸರಿಯಾಗಿ ಕೊಟ್ಟಿದ್ದರು ಸರಿಯಾದ ರೀತಿಯಲ್ಲಿ ನಡೆಯದೆ ದುಡಿದು ತಿನ್ನದೇ ಇವರವರ ಮದ್ಯೆ ಈ ಹೆಣ್ಣು ಮಗಳು ತಾನು ಹೇಗಿದ್ದರೇನು ಜೀವನದಲ್ಲಿ ಏನಾದರು ಸಾಧಿಸಬೇಕು ಅಪಹಾಸ್ಯ ಮಾಡುವವರ ಮಧ್ಯೆ ಬೇಲಿಯಬೇಕು ಎನ್ನುವ ಛಲದಿಂದ ಇದೀಗ ಈ ಯುವತಿ IAS ಅಧಿಕಾರಿಯಾಗಿದ್ದಾರೆ. ಅಷ್ಟಕ್ಕೂ ಇವರು ಯಾರು? ಇವರ ಬೆಳವಣಿಗೆಯ ಹಾದಿ ಹೇಗಿತ್ತು ಅನ್ನೋದನ್ನ ಮುಂದೆ ತಿಳಿಯೋಣ ಬನ್ನಿ..

ಸಮಾಜದಲ್ಲಿ ಎಷ್ಟೋ ಜನ ಗೇಲಿ ಮಾಡಿದರು ಸಹನೆ ಕಳೆದುಕೊಳ್ಳದ ಈಕೆ ಸಾಧನೆ ಕಡೆ ಹೆಚ್ಚು ಗಮನ ಕೊಡುತ್ತಿದ್ದರು, ಇವರ ಹೆಸರು ಆರತಿ ಡೋಗ್ರಾ ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ಜನಿಸಿದ ಆರತಿ ಡೋಗ್ರಾ ಕೇವಲ 3.5 ಅಡಿ ಎತ್ತರ ಇದ್ದಾರೆ. ಇವರು ಶಾಲೆಯ ಪ್ರಾಂಶುಪಾಲರಾದ ಕರ್ನಲ್ ರಾಜೇಂದ್ರ ಮತ್ತು ಕುಂಕುಮ್ ಡೋಗ್ರಾ ಅವರ ಪುತ್ರಿ. ಆರತಿ ಡೋಗ್ರಾ ಅವರ ಹೆತ್ತವರು ಆಕೆಯ ಜೀವನದ ಪ್ರತಿಯೊಂದು ಅಂಶದಲ್ಲೂ ಆಕೆಯನ್ನು ಬೆಂಬಲಿಸಿದರು.

ಆರತಿ ಡೋಗ್ರಾ ಅವರು ಜನಿಸಿದಾಗ, ಈ ಮಗು ಮುಂದೆ ಭವಿಷ್ಯದಲ್ಲಿ ಶಾಲೆಗೆ ಹೋಗಲು ಆಗೋದಿಲ್ಲ ಎಂಬುದಾಗಿ ವೈದ್ಯರು ತಿಳಿಸಿದ್ದರಂತೆ ಆದ್ರೆ, ಮುಂದೆ ಬೆಳಿತಾ ಇದನ್ನೆಲಾ ದಿಕ್ಕರಿಸಿ ಡೋಗ್ರಾ ಡೆಹ್ರಾಡೂನ್‌ನ ಪ್ರತಿಷ್ಠಿತ ಬಾಲಕಿಯರ ಶಾಲೆಯಲ್ಲಿ ಪ್ರವೇಶ ಪಡೆದರು ಮತ್ತು ಅರ್ಥಶಾಸ್ತ್ರದಲ್ಲಿ ಪದವಿ ಪಡೆದರು. ಲೇಡಿ ಶ್ರೀ ರಾಮ್ ಕಾಲೇಜು, ದೆಹಲಿ ವಿಶ್ವವಿದ್ಯಾಲಯ. ಬಾಲ್ಯದಿಂದಲೂ ದೈಹಿಕ ತಾರತಮ್ಯವನ್ನು ಎದುರಿಸಿದ ಆರತಿ ದೋಗ್ರಾ ತನ್ನ ಧೈರ್ಯವನ್ನು ಎಂದಿಗೂ ಬಿಟ್ಟುಕೊಡಲಿಲ್ಲ ಮತ್ತು ಮೊದಲ ಪ್ರಯತ್ನದಲ್ಲಿಯೇ IAS ಪರೀಕ್ಷೆಯಲ್ಲಿ ಉತ್ತೀರ್ಣರಾದರು.

ಜೀವನದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಮಹಿಳಾ ಐಎಎಸ್ ಅಧಿಕಾರಿ ಆರತಿ ಡೋಗ್ರಾ ಭಾರತದ ಅತ್ಯಂತ ಪ್ರತಿಷ್ಠಿತ ಪರೀಕ್ಷೆ UPSCಯಲ್ಲಿ ಉತ್ತೀರ್ಣರಾಗಿದ್ದಾರೆ. ಆರತಿ ದೋಗ್ರಾ 2005 ರಲ್ಲಿ ತನ್ನ ಮೊದಲ ಪ್ರಯತ್ನದಲ್ಲಿ AIR-56 ನೊಂದಿಗೆ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಅವರು ರಾಜಸ್ಥಾನ ಕೇಡರ್ 2006 ರ ಬ್ಯಾಚ್‌ನವರು ಮತ್ತು ಇಲ್ಲಿಂದಲೇ ಸಮರ್ಪಿತ ಸಾರ್ವಜನಿಕ ಸೇವಕರಾಗಿ ಅವರ ಪ್ರಯಾಣ ಪ್ರಾರಂಭವಾಯಿತು. ಅಂದಿನಿಂದ ಅವರು ರಾಜಸ್ಥಾನ ಸರ್ಕಾರದ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಆರತಿ ದೋಗ್ರಾ ಅವರು ರಾಜಸ್ಥಾನದ ಅಜ್ಮೀರ್‌ನ ಕಲೆಕ್ಟರ್ ಆಗಿದ್ದಾರೆ.

ಸಮಾಜದಲ್ಲಿ ಹೀಯಾಳಿಸಿದವರ ಮುಂದೆ ಛಲದಿಂದ ಸಾದಿಸಿ IAS ಅಧಿಕಾರಿಯಾದ ಈ ಯುವತಿಯ ಲೈಫ್ ಸ್ಟೋರಿ ನಿಜಕ್ಕೂ ಇಂದಿನ ಯುವ ಪೀಳಿಗೆಗೆ ಮಾದರಿ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ ಈ ಸ್ಟೋರಿ ಇಷ್ಟ ಆಗಿದ್ದರೆ ನಿಮ್ಮ ಆತ್ಮೀಯರಿಗೂ ಹಂಚಿಕೊಳ್ಳಿ ಇದರಿಂದ ಕೆಲವರಿಗೆ ಸ್ಪೂರ್ತಿಯಾಗಲಿದೆ.

By

Leave a Reply

Your email address will not be published. Required fields are marked *