ಅಪ್ಪು ಮಂತ್ರಾಲಯಕ್ಕೆ ಬಂದಾಗ ತೊಟ್ಟಿಲು ಅಲುಗಾಡಿದ ಹಿಂದಿನ ಸತ್ಯಾಂಶ ತಿಳಿಸಿದ ಪೀಠಾಧಿಪತಿಗಳು

0 2

ಮಾರ್ಚ್ 2 , 2020 ರಂದು ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ವರ್ಧಂತಿ ಉತ್ಸವ ಹಿನ್ನೆಲೆ ಶ್ರೀ ಮಠಕ್ಕೆ ಆಗಮಿಸಿದ್ದ ಪುನೀತ್ ಭಾವುಕರಾಗಿ ಮಾತನಾಡಿದ್ದರು. ತಮ್ಮ ನೆನಪುಗಳನ್ನ ಬಿಚ್ಚಿಟ್ಟಿದ್ದರು. ವೇದಿಕೆ ಮೇಲೆ ರಾಯರ ಹಾಡು ಹೇಳಿದ ಪುನೀತ್ ರಾಯರಿಗೆ ತಮ್ಮ ಭಕ್ತಿ ಸಮರ್ಪಿಸಿದ್ದರು. ಗುರು ವೈಭವೋತ್ಸವದ ಕೊನೆಯ ದಿನದ ಸಮಾರಂಭದಲ್ಲಿ ಪುನೀತ್ ರಾಜಕುಮಾರ್‌ರನ್ನ ಸನ್ಮಾನಿಸಲಾಗಿತ್ತು. ಆರಾಧನಾ ವೇಳೆ ಮಂತ್ರಾಲಯಕ್ಕೆ ಆಗಮಿಸಿ ಮೂರು ಹಾಡುಗಳನ್ನ ಹಾಡುವುದಾಗಿ ಪುನೀತ್ ಹೇಳಿದ್ದರು.

ಆ ಸಂದರ್ಭದಲ್ಲಿ ರಾಯರ ಮುಖವಾಡ ಅಲುಗಾಡಿತ್ತು ಮತ್ತು ಅದರ ಮುಂದಿಟ್ಟಿದ್ದ ವೀಣೆ ಕೆಳಗೆ ಬಿದ್ದಿತ್ತು. ಆದರೆ ಇದರ ಕುರಿತಾಗಿ ಮಂತ್ರಾಲಯ ಸಂಸ್ಥಾನದ ಪೀಠಾಧಿಪತಿಗಳು ಸ್ಪಷ್ಟನೆ ನೀಡಿದ್ದಾರೆ. ಪೀಠಾಧಿಪತಿಗಳು ಏನೆಂದು ಸ್ಪಷ್ಟನೆ ನೀಡಿದ್ದಾರೆ ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಸ್ಯಾಂಡಲ್ವುಡ್ ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ವಿಧಿವಶರಾಗಿದ್ದು ಚಿತ್ರರಂಗದಲ್ಲಿ ಶೂನ್ಯ ಆವರಿಸಿದೆ. ಇದರ ಮಧ್ಯೆ ಪುನೀತ್ ಅವರು ಮಂತ್ರಾಲಯಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ನಡೆದಿದ್ದ ಘಟನೆ ವಿಡಿಯೋ ಇದೀಗ ವೈರಲ್ ಆಗಿದೆ. ಪುನೀತ್ ರಾಜಕುಮಾರ್ ಮಂತ್ರಾಲಯದ ರಾಯರ ಸನ್ನಿಧಾನಕ್ಕೆ ಭೇಟಿ ನೀಡಿದ್ದರು. ಕಳೆದ ತಿಂಗಳಷ್ಟೇ ಮಂತ್ರಾಲಯದ ರಾಯರ ಸನ್ನಿಧಾನಕ್ಕೆ ಭೇಟಿ ನೀಡಿದ್ದ ಪುನೀತ್ ರಾಜ್‍ಕುಮಾರ್ ಭಾಗ್ಯವಂತ ಸಿನಿಮಾ ಬಗ್ಗೆ ವಿವರವಾಗಿ ಮಾತನಾಡಿದ್ದರು.

ರಾಯರ ಮಠಕ್ಕೂ ಪುನೀತ್ ರಾಜಕುಮಾರ ಕುಟುಂಬಕ್ಕೂ ಅವಿನಾಭಾವ ಸಂಬಂಧವಿದೆ. ಕೊನೆಯದಾಗಿ ಪುನೀತ್ ರಾಜಕುಮಾರ ಏಪ್ರಿಲ್ 5 , 2021 ರಂದು ಯುವರತ್ನ ಸಿನೆಮಾ ಯಶಸ್ಸು ಕಾಣುತ್ತಿದ್ದ ಹಿನ್ನೆಲೆ ಚಿತ್ರತಂಡದೊಂದಿಗೆ ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದಿದ್ದರು. ಈ ವೇಳೆ ತಾವು ಮುಂದಿನ ಬಾರಿ ರಾಯರ ಆರಾಧನೆಗೆ ಬರುತ್ತೇನೆ ಎಂದು ಮಾತನಾಡುತ್ತಿರುವಾಗಲೇ ರಾಯರ ಮುಖವಾಡ ಅಲುಗಾಡಿತ್ತು ಮತ್ತು ಅದರ ಮುಂದಿಟ್ಟಿದ್ದ ವೀಣೆ ಕೆಳಗೆ ಬಿದ್ದಿತ್ತು. ಈ ವಿಡಿಯೋ ಇದೀಗ ಪುನೀತ್ ಬಗ್ಗೆ ಅಂದೆ ಕೆಟ್ಟ ಸೂಚನೆ ಸಿಕ್ಕಿತ್ತಾ ಎನ್ನುವ ಮಾತುಗಳನ್ನು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.

ಕಳೆದ 29ರಂದು ಪುನೀತ್ ರಾಜಕುಮಾರ್ ಇಹಲೋಕ ತ್ಯಜಿಸಿದ್ದರು. ಇಂದು ಬೆಳಗ್ಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಕಂಠೀರವ ಸ್ಟುಡಿಯೋದಲ್ಲಿ ಪುನೀತ್ ರಾಜಕುಮಾರ್ ಅಂತ್ಯಕ್ರಿಯೆ ನೆರವೇರಿಸಲಾಯಿತು. ಇಷ್ಟರ ನಂತರ ಪುನೀತ್ ರಾಜಕುಮಾರ್ ಅವರು ಮಂತ್ರಾಲಯಕ್ಕೆ ಹೋಗಿದ್ದಾಗ ನಡೆದ ಈ ಒಂದು ಘಟನೆಯ ವಿಡಿಯೋ ಒಂದು ಬಹಳಷ್ಟು ವೈರಲ್ ಆಗಿತ್ತು. ಹಾಗಿದ್ದರೆ ಆ ವಿಡಿಯೋದ ಪ್ರಕಾರ ಪುನೀತ್ ರಾಜ್‍ಕುಮಾರ್ ನಿಧನಕ್ಕೆ ಮುಂಚಿಯೇ ಸಿಕ್ಕಿತ್ತಾ ಸೂಚನೆ? ಎನ್ನುವ ಪ್ರಶ್ನೆ ಈ ವಿಡಿಯೋ ನೋಡಿದಾಗ ಕಾಡುತ್ತದೆ.

ರಾಯರ ಸನ್ನಿಧಾನದಲ್ಲಿ ನಡೆದ ಪವಾಡ ಈಗ ವೈರಲ್ ಆಗುತ್ತಿದೆ. ಸುಭುದೇಂದ್ರ ತೀರ್ಥರ ಸಮಕ್ಷಮದಲ್ಲಿ ನಡೆದ ಘಟನೆ ಇದು. ಕಳೆದ ಬಾರಿ ಮಂತ್ರಾಲಯಕ್ಕೆ ಭೇಟಿ ನೀಡಿದ್ದ ಪುನೀತ್ ರಾಜ್‍ಕುಮಾರ್ ಮಾತನಾಡಿದ್ದರು. ಈ ವಿಡಿಯೋ ಎಲ್ಲಾ ಕಡೆ ಹರಿದಾಡುತ್ತ ಇದ್ದ ಹಾಗೆ ಮಂತ್ರಾಲಯದ ಶ್ರೀಸುಬುಧೇಂದ್ರ ಸ್ವಾಮೀಜಿ ಅವರು ಇದರ ಕುರಿತಾಗಿ ಸ್ಪಷ್ಟನೆ ನೀಡಿದ್ದಾರೆ.

ಯಾರೂ ಕೂಡಾ ಅನ್ಯತಾ ಭಾವಿಸವಾರದು. ಇದೊಂದು ಕಾಕತಾಳೀಯ. ಸಾವಿಗೂ ಇದಕ್ಕೂ ಸಂಬಂಧ ಇಲ್ಲ ಎಂದು ಮಂತ್ರಾಲಯದ ಪೀಠಾಧಿಪತಿ ಶ್ರೀ ಸುಭುದೇಂದ್ರ ತೀರ್ಥರು ತಿಳಿಸಿದ್ದಾರೆ. ಮಂತ್ರಾಲಯಕ್ಕೆ ಪುನೀತ್ ರಾಜ್ ಕುಮಾರ್ ಭೇಟಿ ನೀಡಿದ ಸಂದರ್ಭದಲ್ಲಿ ತೊಟ್ಟಿಲು ಮತ್ತು ವೀಣೆ ಅಲುಗಾಡಿತ್ತು. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರು ಸಾವಿಗೂ ಇದಕ್ಕೂ ಸಂಬಂಧ ಇರುವಂತೆ ಊಹಾಪೋಹ ಹಬ್ಬಿಸಿದ್ದಾರೆ.

ಈ ಬಗ್ಗೆ ಮಂತ್ರಾಲಯದ ಪೀಠಾಧಿಪತಿ ಶ್ರೀ ಸುಭುದೇಂದ್ರ ತೀರ್ಥರು ಮಾತನಾಡಿದ್ದು, ಅವರ ಸಾವಿಗೂ ಇದಕ್ಕೂ ಸಂಬಂಧವಿಲ್ಲ. ಅದು ಆಕಸ್ಮಿಕವಾಗಿ ಆಗಿರುವ ಘಟನೆ ಎಂದು ಹೇಳಿದ್ದಾರೆ. ಪುನೀತ್ ರಾಜ್ ಕುಮಾರ್ ಅವರು ಮಂತ್ರಾಲಯದ ರಾಯರ ಪರಮ ಭಕ್ತರಾಗಿದ್ದರು. ಅಣ್ಣ ತಮ್ಮಂದಿರು ಬಂದು ಸಂಗೀತ ಸೇವೆ ಮಾಡುವುದಾಗಿ ಹೇಳಿದ್ದರು.

ಅವರು ರಾಯರ ಅನುಗ್ರಹದಿಂದಲೇ ಜನಿಸಿದ್ದಾರೆ ಎಂದು ಅವರ ತಂದೆ ಹೇಳಿದ್ದರು. ತಮ್ಮ ನೆಚ್ಚಿನ ಗುರುಗಳಾದ ರಾಘವೇಂದ್ರ ಸ್ವಾಮಿಗಳ ದರ್ಶನಕ್ಕೆ ಬಂದಾಗ ಪುನೀತ್ ಹಾಡು ಹಾಡಿದ್ದರು. ಯಾರೂ ಕೂಡಾ ಅನ್ಯತಾ ಭಾವಿಸವಾರದು. ಇದೊಂದು ಕಾಕತಾಳೀಯ. ಸಾವಿಗೂ ಇದಕ್ಕೂ ಸಂಬಂಧ ಇಲ್ಲ ಎಂದು ಮಂತ್ರಾಲಯದ ಪೀಠಾಧಿಪತಿ ಶ್ರೀ ಸುಭುದೇಂದ್ರ ತೀರ್ಥರು ತಿಳಿಸಿದ್ದಾರೆ.

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.