ಕರುನಾಡಿನ ರಾಜರತ್ನ ನಮ್ಮನ್ನಗಲಿ ಬರೋಬ್ಬರಿ ಎರಡು ತಿಂಗಳು ಕಳೆದಿದೆ. ಆದ್ರೆ ನಾಡಿನಾದ್ಯಂತ ಮಿಸ್ ಯು ಅಪ್ಪು ಅನ್ನೋ ಕೂಗು ಮಾತ್ರ ಕಡಿಮೆಯಾಗಿಲ್ಲ. ಇಂದು ಕಂಠೀರವ ಸ್ಟೂಡಿಯೋನಲ್ಲಿ ದೊಡ್ಮನೆ ಕುಟುಂಬಸ್ಥರು ಅಪ್ಪು ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಅಪ್ಪು ಸಮಾಧಿ ದರ್ಶನ ಪಡೆಯಲು ಬಂದ ಅಭಿಮಾನಿ ತಮ್ಮ ವಿಶೇಷ ಧಿರಿಸಿನಿಂದ ಗಮನ ಸೆಳೆದರು.
ತಲೆಗೆ ಟವೆಲ್ ಸುತ್ತಿಕೊಂಡು ನೀಲಿ ಬಣ್ಣದ ಶರ್ಟ್ ತೊಟ್ಟು ಅದರ ಮೇಲೊಂದು ಕಪ್ಪು ಬಣ್ಣದ ಜಾಕೆಟ್ ಅಷ್ಟೇ ಅಲ್ಲದೆ ಮೈ ಭಾರ ಎನಿಸುವಂತ ಚಿನ್ನದ ಸರಗಳು ಬರೋಬ್ಬರಿ ಎರಡರಿಂದ ಮೂರು ಕೆಜಿ ತೂಗುವ ಬಂಗಾರದ ಸರಗಳನ್ನು ಹಾಕಿಕೊಂಡು ಅದರಲ್ಲಿ ಡಾ ರಾಜ್ ಕುಮಾರ್ ಅವರ ಭಾವಚಿತ್ರವಿರೊ ಲಾಕೆಟ್ ಧರಿಸಿ ಕಂಠೀರವ ಸ್ಟುಡಿಯೊದಲ್ಲಿ ಜಗಮಗಿಸುತ್ತಿದ್ದರು. ಇವರನ್ನು ಕಂಡ ದೊಡ್ಮನೆ ಯವ್ರು ಅಷ್ಟೇ ವಿನಮ್ರವಾಗಿ ಇವರನ್ನ ಸ್ವಾಗತಿಸಿಕೊಂಡರು.
ಪುನೀತ್ ಮಾಡಿರೋ ತ್ಯಾಗದಿಂದಾಗಿ ಅವರಿಗ ದೊಡ್ಡ ಮನುಷ್ಯರಾಗಿದ್ದಾರೆ. ಅಪ್ಪು ಅವರನ್ನು ನೋಡಿ ನನಗೆ ಇನ್ನಷ್ಟು ಒಳ್ಳೆ ಕಾರ್ಯ ಮಾಡಲು ಉತ್ಸಾಹ ಮೂಡಿತು. ಪ್ರತಿ ಭಾನುವಾರ ಅನ್ನ ಸಂತರ್ಪಣೆ ಮಾಡುತ್ತಿದ್ದೆನೆ. ಅಪ್ಪು ಅನ್ನೋ ದೇವರನ್ನು ನೋಡಲು ಪ್ರತಿದಿನ ಅಭಿಮಾನಿಗಳು ಅನ್ನೋ ಭಕ್ತರು ಬರುತ್ತಿದ್ದಾರೆ ಅವರನ್ನು ಖಾಲಿ ಹೊಟ್ಟೆಯಲ್ಲಿ ಕಳುಹಿಸಲು ಮನಸ್ಸು ಒಪ್ಪುತ್ತಿಲ್ಲಾ ಇಲ್ಲಿ ಜಾಗದ ಕೊರೆತೆಯಾಗಿದೆ. ಇದನ್ನು ರಾಘಣ್ಣನ ಜೊತೆ ಮಾತನಾಡಿ ನಿರ್ಧರಿಸುತ್ತೆನೆ.
ಧರ್ಮಸ್ಥಳ ಮತ್ತು ತಿರುಪತಿಯಲ್ಲಿ ನೆಡೆಯುವ ದಿನ ಪೂರ್ತಿ ಅನ್ನ ಸಂತರ್ಪಣೆ ಮಾಡುವ ಹಾಗೆ ಅಪ್ಪುವನ್ನು ನೋಡಲು ಬರುವವರಿಗೆ ಊಟದ ವ್ಯವಸ್ಥೆ ಮಾಡಲು ಮಾತುಕತೆ ನೆಡೆಸುತ್ತೆವೆ..ಪುನೀತ್ ರಾಜ್‌ಕುಮಾರ್ ಅವರು ಬಲಗೈಯಲ್ಲಿ ಕೊಟ್ಟಿದ್ದನ್ನು ಎಡಗೈಗೆ ಗೊತ್ತಾಗದಂತೆ ನೋಡಿ ಕೊಂಡಿದ್ದಾರೆ ನಾವು ಅವರ ದಾರಿಯಲ್ಲಿ ನಡೆಯಬೇಕು ಎಂದು ಉದ್ಯಮಿ ಹಾಗೂ ಕೃಷಿಕ ಲಕ್ಷ್ಮೀ ನಾರಾಯಣ ಅವರು ಹೇಳಿದ್ದಾರೆ.