ಝೀ ಕನ್ನಡದಲ್ಲಿ ಈಗ ಇನ್ನೊಂದು ಹೊಸ ರಿಯಾಲಿಟಿ ಶೋ ಸರಿಗಮಪ ಚಾಂಪಿಯನ್ ಷಿಪ್ ಬರಲಿದ್ದು ಹಿಂದೆಲ್ಲ ಎಲ್ಲಾ ರಿಯಾಲಿಟಿ ಶಿ ಗಳ ನಿರೂಪಣೆಯ ಜವಾಬ್ಧಾರಿಯನ್ನು ಅನುಶ್ರೀ ಅವರು ಹೊರುತ್ತಿದ್ದರು. ಝೀ ಕನ್ನಡ ಬಿಡುಗಡೆ ಮಾಡಿದ ಸರಿಗಮಪ ಚಾಂಪಿಯನ್ ಷಿಪ್ ಪ್ರೋಮೋ ದಲ್ಲಿ ಕೂಡಾ ಅನುಶ್ರೀ ಅವರು ಕಾಣಿಸಿಕೊಳ್ಳುತ್ತಾರೆ. ಆದರೆ ಈಗ ಆ ಕಾರ್ಯಕ್ರಮದ ನಿರೂಪಣೆಯನ್ನು ಅನುಶ್ರೀ ಅವರ ಬದಲಿಗೆ ಇನ್ನೊಬ್ಬ ನಟಿ ನಿರೂಪಣೆ ಮಾಡುತ್ತಾರೆ ಅನುಶ್ರೀ ಇನ್ನುಮುಂದೆ ಇರುವುದಿಲ್ಲ ಎನ್ನುವ ಸುದ್ದಿ ಹರಿದಾಡುತ್ತಿದೆ. ಹಾಗಾದರೆ ಝೀ ಕನ್ನಡ ವಾಹಿನಿ ಅನುಶ್ರೀ ಅವರ ನಿರೂಪಣೆಯನ್ನು ಬೇಡವೆಂದು ತ್ಯಜಿಸಿತೆ? ಇದರ ಕುರಿತು ವಿವರವಾಗಿ ನಾವು ಈ ಲೇಖನದಲ್ಲಿ ನೋಡೋಣ.
ತಮ್ಮ ನಿರೂಪಣೆಯ ಮೂಲಕ ಪ್ರೇಕ್ಷಕರ ರನ್ನು ನಗೆಗಡಲ್ಲಿ ತೇಲಿಸುತ್ತಾ, ಕರುನಾಡ ಮನೆ ಮಗಳಾಗಿರುವವ ನಿರೂಪಕಿ ಎಂದೆರೆ ಅನುಶ್ರೀಯವರು. ಅನುಶ್ರೀ ಕನ್ನಡ ಸಿನಿರಂಗದಲ್ಲಿ ಕಿರುತೆರೆ ನಿರೂಪಕಿಯಾಗಿ ಮತ್ತು ಚಿತ್ರನಟಿಯಾಗಿ ಸಕ್ರಿಯರಾಗಿದ್ದಾರೆ. ಮಂಗಳೂರಿನ ತುಳು ಕುಟುಂಬದಲ್ಲಿ ಜನಸಿದ ಇವರು `ಟೆಲಿ ಅಂತ್ಯಾಕ್ಷರಿ’ ಕಾರ್ಯಕ್ರಮದ ಮೂಲಕ ನಿರೂಪಕಿಯಾಗಿ ಸಿನಿಪಯಣ ಆರಂಭಿಸಿದರು.
ಈ ಟಿವಿ ಕನ್ನಡ ವಾಹಿನಿಯ ಡಿಮಾಂಡೆಪ್ಪೋ ಡಿಮಾಂಡು ಕಾರ್ಯಕ್ರಮದ ನಿರೂಪಣೆಯ ಮೂಲಕ ಮನೆಮಾತಾದ ಇವರು ಕನ್ನಡ ಬಿಗ್ ಬಾಸ್ ಸೀಸನ್ ಒಂದರಲ್ಲಿ ಭಾಗವಹಿಸಿದ್ದರು. ನಂತರ ಬೆಂಕಿಪಟ್ಟಣ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದರು. ಇವರು 2011 ರಲ್ಲಿ ತೆರೆಕಂಡ ಮುರಳಿ ಮೀಟ್ಸ್ ಮೀರಾ ಚಿತ್ರದ ಡಬ್ಬಿಂಗ್ ಗಾಗಿ ರಾಜ್ಯ ಪ್ರಶಸ್ತಿಯನ್ನು ಸಹ ಪಡೆದಿದ್ದಾರೆ.
ಆರಂಭದಲ್ಲಿ ಅನುಶ್ರೀ ಅವರು ಪಟ್ಟಿರುವ ಕಷ್ಟಗಳು ಒಂದೆರಡಲ್ಲ. ಅವರ ವಿಚಾರ ಕೆಲವರಿಗೆ ಮಾತ್ರ ತಿಳಿದಿದ್ದು, ನಿಜಕ್ಕು ಈಕೆ ಪ್ರತೊಯೊಬ್ಬರಿಗೂ ಮಾದರಿ ಎನ್ನಬಹುದು. ಓದಿದ್ದು ಬಹಳ ಕಡಿಮೆ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಬೆಂಗಳೂರಿಗೆ ಬಂದ ಅನುಶ್ರೀ ಸಂಸಾರದ ಹೊರೆ ಹೊತ್ತಿರುತ್ತಾರೆ. ಸಹೋದರ ಇನ್ನೂ ಚಿಕ್ಕವನು ಅಮ್ಮನನ್ನು ಸಾಕುವುದರ ಜೊತೆಗೆ ತಮ್ಮನನ್ನು ಓದಿಸಬೇಕು.
ಹೀಗೆ ಸಾಕಷ್ಟು ಜವಾಬ್ದಾರಿಯನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಬೆಂಗಳೂರಿಗೆ ಬಂದರು ಅನುಶ್ರೀ ಅವಕಾಶಕ್ಕಾಗಿ ಅಲಿಯುತ್ತಾರೆ. ಮೊದಮೊದಲು ಕನ್ನಡ ಚಿತ್ರರಂಗದ ಹೆಸರಾಂತ ಮಾಂತ್ರಿಕ ಸಂಗೀತ ನಿರ್ದೇಶಕ ಹಾಗೂ ಗಾಯಕ ಗುರುಕಿರಣ್ ರವರು ನೀಡುತ್ತಿದ್ದ ಸ್ಟೇಜ್ ಶೋ ಕಾರ್ಯಕ್ರಮಗಳಲ್ಲಿ ನೃತ್ಯಗಾರರ ಹಿಂದೆ ನಿಂತು ಟೇಪ್ ಬಿಡುವ ಕೆಲಸವನ್ನು ಮಾಡುತ್ತಿದ್ದ ಅನುಶ್ರೀ, ಇದಕ್ಕೆ ಮಾತ್ರ ಸೀಮತರಾಗಿದ್ದರು.
ಆದರೆ ಅನುಶ್ರೀ ಅವರ ಮಾತಿನ ಚಾಕಚಕ್ಯತೆಯನ್ನು ನೋಡಿದ ಗುರುಕಿರಣ್ ಅವರು ತಮ್ಮ ಕಾರ್ಯಕ್ರಮಗಳಲ್ಲಿ ನಿರೂಪಣೆಯನ್ನು ಮಾಡಲು ಅವಕಾಶವನ್ನು ನೀಡುತ್ತಾರೆ. ನಂತರ ಅನುಶ್ರೀ ಹಿಂತಿರುಗಿ ನೋಡಲೇ ಇಲ್ಲ ಎಂದೇ ಹೇಳಬಹುದು.ಮೊದ ಮೊದಲು ಕಾಮಿಡಿ ಕಿಲಾಡಿಗಳು ಕಾರ್ಯಕ್ರಮವನ್ನು ನಿರೂಪಣೆ ಮಾಡಿದ ಅನುಶ್ರೀ , ಇದಾದ ಬಳಿಕ ದಕ್ಷಿಣ ಭಾರತದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ ೧ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಭಾಗವಹಿಸುತ್ತಾರೆ.
ಅನುಶ್ರೀ ಅವರ ಮಾತಿನ ಪರಿಯನ್ನು ನೋಡಿದ ರಾಘವೇಂದ್ರ ಹುಣಸೂರು ಅವರು ಜೀ ವಾಹಿನಿ ಕಾರ್ಯಕ್ರಮಗಳಲ್ಲಿ ನಿರೂಪಣೆಯನ್ನು ಮಾಡಲು ಅವಕಾಶವನ್ನು ಒದಗಿಸಿಕೊಟ್ಟರು. ನಂತರ ಅನುಶ್ರೀ ಜೀವನದಲ್ಲಿ ನಡೆದಿದ್ದೆಲ್ಲಾ ಇತಿಹಾಸವೇ ಸರಿ. ಸರಿಗಮಪ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ , ಜಿ ಜಾತ್ರೆ ಎಲ್ಲ ಯಶಸ್ಸಿನ ಹಿಂದೆ ಅನುಶ್ರೀ ಕೂಡ ಒಬ್ಬರು ಕಾರಣವಾಗಿದ್ದಾರೆ ಎಂದೇ ಹೇಳಬಹುದು. ಇದೀಗ ಜೀ ವಾಹಿನಿಯಿಂದ ಹೊಸ ಸುದ್ದಿಯೊಂದು ಹೊರಬಿದ್ದಿದೆ. ಏನೆಂದರೆ ಸರಿಗಮಪ ಕಾರ್ಯಕ್ರಮದಲ್ಲಿ ಗೆದ್ದಿರುವ ಸ್ಪರ್ಧಿಗಳನ್ನು ಸೇರಿಸಿಕೊಂಡು,ಚಾಂಪಿಯನ್ ಶಿಪ್ ಕಾರ್ಯಕ್ರಮ ಮಾಡಲು ಮುಂದಾಗಿದೆ.
ಸರಿಗಮಪ ಚಾಂಪಿಯನ್ ಶಿಪ್ ಕಾರ್ಯಕ್ರಮ ಇನ್ನೇನು ಕೆಲವೇ ದಿನಗಳಲ್ಲಿ ಶುರು ಆಗಲಿದೆ ಎನ್ನುವ ಮಾಹಿತಿ ಹೊರಹಾಕಿದ್ದಾರೆ. ಹಿಂದಿಯಲ್ಲಿ ಕೂಡ ಚಾಂಪಿಯನ್ ಶಿಪ್ ನಡೆಸಲಾಗಿದೆ. ಆದರೆ ಈ ಕಾರ್ಯಕ್ರಮದಲ್ಲಿ ನಿರೂಪಕಿ ಅನುಶ್ರೀಯವರು ಕಾಣಿಸಿಕೊಳುವುದಿಲ್ಲ ಎನ್ನುವ ಸುದ್ದಿ ಕೇಳಿ ಬಂದಿದೆ. ಅಶ್ಟೆ ಅಲ್ಲದೇ, ತೀರ್ಪುಗಾರರಾಗಿದ್ದ ರಾಜೇಶ್ ಕೃಷ್ಣನ್ ಅವರು ಕೂಡ ಈ ಒಂದು ಕಾರ್ಯಕ್ರಮದಲ್ಲಿ ಇರುವುದಿಲ್ಲ ಎಂಬುದು ಮಾಹಿತಿ ಕೂಡ ಇದೆ. ರಾಜೇಶ್ ಕೃಷ್ಣನ್ ಅವರು ಈಗಾಗಲೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಎದೆತುಂಬಿ ಹಾಡುವೆನು ಕಾರ್ಯಕ್ರಮದ ಮುಖ್ಯ ತೀರ್ಪುಗಾರರು ಆಗಿರುವುದು ನಮಗೆಲ್ಲ ತಿಳಿದೇ ಇದೆ.
ಹಾಗಾಗಿ ಈ ಬಾರಿಯ ಸರಿಗಮಪ ಚಾಂಪಿಯನ್ ಷಿಪ್ ನಲ್ಲಿ ತೀರ್ಪುಗಾರರಾಗಿ ರಾಜೇಶ್ ಕೃಷ್ಣನ್ ಅವರು ಇರುವುದಿಲ್ಲ ಅವರನ್ನು ಬಿಟ್ಟು ಉಳಿದ ಮೂವರು ತೀರ್ಪುಗಾರರಾದ ಮಹಾಗುರು ಹಂಸಲೇಖ ಅರ್ಜುನ್ ಜನ್ಯ ಹಾಗೂ ವಿಜಯಪ್ರಕಾಶ್ ಅವರು ಈ ಕಾರ್ಯಕ್ರಮದಲ್ಲಿ ಮುಂದುವರೆಯಲಿದ್ದಾರೆ. ಹಾಗೆಯೇ ಈ ಕಾರ್ಯಕ್ರಮದ ನಿರೂಪಕಿಯಾಗಿ ಇನ್ನು ಮುಂದೆ ಅನುಶ್ರೀ ಅವರ ಬದಲು ಬಿಗ್ ಬಾಸ್ ಸ್ಪರ್ಧಿ ದಿವ್ಯಾ ಉರುಡುಗ ಕಾಣಿಸಿಕೊಳ್ಳಲಿದ್ದಾರೆ ಎಂಬುವ ಮಾಹಿತಿ ಇದೆ. ಅದೇನೇ ಇದ್ದರೂ, ಯಾರು ಸರಿಗಮಪ ಚಾಂಪಿಯನ್ ಷಿಪ್ ನಲ್ಲಿ ನಿರೂಪಕರಾಗಿ ತೆರೆಮೇಲೆ ಕಾಣಿಸಿಕೊಂಡು ಜನರನ್ನು ರಂಜಿಸುತ್ತಾರೆ ಎಂಬ ಕುತೂಹಲ ಇದ್ದೆ ಇದೆ ಹಾಗಾಗಿ ಆ ಕಾರ್ಯಕ್ರಮ ಆರಂಭ ಆಗುವವರೆಗೂ ಕಾದು ನೋಡಬೇಕಿದೆ ಅಷ್ಟೇ.