ಒಂದು ಸಿನಿಮಾ ಯಶಸ್ವಿಯಾಗಬೇಕೆಂದರೆ ಸಿನಿಮಾದಲ್ಲಿ ನಟಿಸುವ ನಟ, ನಟಿಯರು ಪ್ರಮುಖ ಪಾತ್ರ ವಹಿಸುತ್ತಾರೆ. ಬಾಹುಬಲಿ ಸಿನಿಮಾ ಯಶಸ್ವಿಯಾಗಲು ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಜೋಡಿಯ ನಟನೆ ಪ್ರಮುಖ ಕಾರಣವಾಗಿದೆ. ಇವರಿಬ್ಬರ ಜೋಡಿ ಜನರ ಮನದಲ್ಲಿ ಮೋಡಿ ಮಾಡಿದೆ. ಸ್ಟೇಜ್ ಮೇಲೆ ಇವರಿಬ್ಬರ ಡ್ಯಾನ್ಸ್ ನೋಡಿದರೆ ಅವರ ಅಭಿಮಾನಿಗಳು ಖುಷಿಯಾಗುವುದಂತೂ ಖಂಡಿತ. ಅವರ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಹಿಂದಿ ಚಿತ್ರರಂಗದ ಮೋಡಿ ಮಾಡಿದ ಹಲವು ಜೋಡಿಗಳಲ್ಲಿ ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಜೋಡಿಯು ಒಂದು. ಬಾಹುಬಲಿ ಸಿನಿಮಾದಲ್ಲಿ ಪ್ರಭಾಸ್ ಅನುಷ್ಕಾ ಶೆಟ್ಟಿ ಅವರ ನಟನೆಯು ಅದ್ಭುತವಾಗಿದ್ದು ಜನರ ಮೆಚ್ಚುಗೆ ಗಳಿಸಿದೆ. ಬಹಳ ಮುದ್ದಾಗಿ ಕಾಣುವ ಅನುಷ್ಕಾ ಶೆಟ್ಟಿ ಅವರು 1981 ನವೆಂಬರ್ 1 ರಂದು ಕರ್ನಾಟಕದ ಮಂಗಳೂರಿನಲ್ಲಿ ಜನಿಸಿದರು. ಇವರ ತಂದೆ ಹೆಸರು A.N. ಅಥುಲ್ ಶೆಟ್ಟಿ, ತಾಯಿಯ ಹೆಸರು ಪ್ರಫುಲ್ಲಾ ಶೆಟ್ಟಿ, ತುಳು ಇವರ ಮಾತೃ ಭಾಷೆಯಾಗಿದೆ. ಇವರು ಹಿಂದೂ ಧರ್ಮದವರಾಗಿದ್ದಾರೆ. ಇವರಿಗೆ ತುಳು, ತಮಿಳು, ಕನ್ನಡ, ಇಂಗ್ಲಿಷ್, ತೆಲುಗು ಭಾಷೆಗಳು ಬರುತ್ತದೆ. ಇವರು ಬಿಸಿಎ ಪದವಿಧರೆಯಾಗಿದ್ದಾರೆ, ಬೆಂಗಳೂರಿನಲ್ಲಿ ತಮ್ಮ ಶಿಕ್ಷಣವನ್ನು ಕಂಪ್ಲೀಟ್ ಮಾಡಿದ್ದಾರೆ. ಇವರಿಗೆ ಟ್ರಾವೆಲಿಂಗ್ ಮಾಡುವುದು, ಚಿಕ್ಕ ಮಕ್ಕಳೆಂದರೆ, ನಿಸರ್ಗ, ಪ್ರಾಣಿಗಳೆಂದರೆ ಇಷ್ಟ. ಇವರು ಹಲವು ಸಿನಿಮಾಗಳಲ್ಲಿ ನಟಿಸಿ ಜನಪ್ರಿಯತೆಯನ್ನು ಗಳಿಸಿದ್ದಾರೆ. ಇವರಿಗೆ ಫಿಲಂ ಫೇರ್ ಅವಾರ್ಡ್ ದೊರೆತಿದೆ. ಅನುಷ್ಕಾ ಶೆಟ್ಟಿ ಅವರ ಮೆಚ್ಚಿನ ಹೀರೋಗಳೆಂದರೆ ಅಮಿತಾಬಚ್ಚನ್, ಹೃತಿಕ್ ರೋಷನ್, ಪ್ರಭಾಸ್, ಮಹೇಶ್ ಬಾಬು. ಇವರಿಗೆ ಇಷ್ಟವಾದ ಹೀರೋಯಿನ್ ಗಳೆಂದರೆ ಸೌಂದರ್ಯ, ಸಿಮ್ರಾನ್, ಕಾಜಲ್. ಚಿಕನ್ ಎಂದರೆ ಅನುಷ್ಕಾ ಅವರಿಗೆ ಇಷ್ಟ.
ಬಹುಬೇಡಿಕೆಯ ನಟರಲ್ಲಿ ಪ್ರಭಾಸ್ ಕೂಡ ಒಬ್ಬರು. ಹುಡುಗಿಯರೇ ಹೆಚ್ಚು ಅಭಿಮಾನಿಗಳು ಇರುವ ನಟರಲ್ಲಿ ಪ್ರಭಾಸ್ ಕೂಡ ಒಬ್ಬರಾಗಿದ್ದಾರೆ. ಪ್ರಭಾಸ್ ಅವರು 1979 ಅಕ್ಟೋಬರ್ 23 ರಂದು ತಮಿಳುನಾಡಿನ ಪ್ರಸಿದ್ಧ ನಗರ ಚನ್ನೈನಲ್ಲಿ ಜನಿಸಿದ್ದಾರೆ. ಇವರ ತಂದೆಯ ಹೆಸರು ಸೂರ್ಯನಾರಾಯಣ ರಾಜು, ತಾಯಿಯ ಹೆಸರು ಸಿವ ಕುಮಾರಿ. ಇವರಿಗೆ ಪ್ರಭೂತ ಎಂಬ ಅಣ್ಣ ಹಾಗೂ ಪ್ರಗತಿ ಎಂಬ ಅಕ್ಕ ಇದ್ದಾಳೆ. ಇವರ ಆತ್ಮೀಯ ಸ್ನೇಹಿತ ಗೋಪಿಚಂದ್. ಇವರು ಹಿಂದೂ ಧರ್ಮದವರಾಗಿದ್ದಾರೆ. ಪ್ರಭಾಸ್ ಅವರು ಬಿಡುವಿನ ಸಮಯದಲ್ಲಿ ಪುಸ್ತಕಗಳನ್ನು ಓದುತ್ತಾರೆ, ಪುಸ್ತಕ ಅವರ ಸ್ನೇಹಿತ ಎಂದು ಹೇಳಿದರೆ ತಪ್ಪಾಗಲಾರದು. ಪ್ರಭಾಸ್ ಅವರಿಗೆ ಕರಾವಳಿ ಖಾದ್ಯಗಳೆಂದರೆ ಬಹಳ ಇಷ್ಟವಂತೆ. ಪ್ರಭಾಸ್ ಅವರ ಮೆಚ್ಚಿನ ನಟಿಯರೆಂದರೆ ಸಾವಿತ್ರಿ, ಶ್ರೇಯಾ, ತ್ರಿಷಾ. ಅವರ ಮೆಚ್ಚಿನ ಸಿನಿಮಾ ಗೀತಾಂಜಲಿ. ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಇವರ ಜೋಡಿಯಲ್ಲಿ ಮೂಡಿಬಂದಿರುವ ಬಾಹುಬಲಿ ಸಿನಿಮಾ ಹೆಚ್ಚಿನ ಯಶಸ್ಸು ಗಳಿಸಿದೆ. ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಅವರು ಸ್ಟೇಜ್ ಮೇಲೆ ಡ್ಯಾನ್ಸ್ ಮಾಡುವ ಮೂಲಕ ಅಭಿಮಾನಿಗಳಿಗೆ ಹೆಚ್ಚಿನ ಸಂತೋಷ ನೀಡಿದ್ದಾರೆ.