ಜಗತ್ತಿನಲ್ಲಿ ನಡೆಯುವ ಕೆಲವೊಂದು ವಿಚಿತ್ರ ಕಾರ್ಯದ ಘಟನೆಯನ್ನು ನಾವು ನಂಬಲೇಬೇಕು. ಇದರಲ್ಲಿ ಸತ್ಯತೆಯ ಅಂಶ ಆಶ್ಚರ್ಯದಾಯಕ ರೀತಿಯಲ್ಲಿ ಇರುತ್ತದೆ. ಏಕೆಂದರೆ ಈ ಸತ್ಯವನ್ನು ಸಾಮಾನ್ಯ ಜನರ ಯೋಚನೆಗೆಬಾರದ ಮತ್ತು ಇದರಲ್ಲಿನ ಅತ್ಯುತ್ತಮ ಗುಣಗಳನ್ನು ಪ್ರಚೋದಿಸುವ ವಿಷಯಗಳಾಗಿವೆ. ಹಾಗೆಯೇ ಎಷ್ಟೋ ನೈಸರ್ಗಿಕ ಸಂಪನ್ಮೂಲಗಳನ್ನು ನಾವು ಬಳಸುತ್ತೇವೆ. ಆದರೆ ಇದರ ಬಗ್ಗೆ ತಿಳಿದಿರುವುದಿಲ್ಲ. ಅಂತಹ ವಿಚಿತ್ರ ಸತ್ಯಗಳನ್ನು ನಾವು ಇಲ್ಲಿ  ತಿಳಿದುಕೊಳ್ಳೋಣ.

ಭೂಮಿಯಲ್ಲಿ ನೀರನ್ನು ದ್ರವ ರೂಪದ ಬಂಗಾರ ಎಂದು ಕರೆಯುತ್ತಾರೆ. ಹಾಗೆಯೇ ನಾವು ಭಾರತೀಯರು ಇದನ್ನು ಗಂಗಾಮಾತೆ ಎಂದು ಕರೆಯುತ್ತೇವೆ. ನೀರಿಲ್ಲದಿದ್ದರೆ ಮನುಷ್ಯ ಬದುಕಲು ಬಹಳ ಕಷ್ಟವಾಗುತ್ತಿತ್ತು. ಹಾಗೆಯೇ ಇಡೀ ಪ್ರಪಂಚದಲ್ಲಿ ಒಟ್ಟಾರೆ ಹೇಳುವುದಾದರೆ 6500 ಭಾಷೆಗಳು ಇವೆ. ಆದ್ದರಿಂದ ಪ್ರತಿಯೊಂದು ಭಾಷೆಯಲ್ಲೂ ನೀರನ್ನು ಬೇರೆ ಬೇರೆ ಶಬ್ದಗಳಲ್ಲಿ ಕರೆಯಲಾಗುತ್ತದೆ. ನೀರಿನ ರಾಸಾಯನಿಕ ಸೂತ್ರ H20 ಆಗಿದೆ. ಅಂದರೆ ಇದು 2 ಹೈಡ್ರೋಜನ್ ಮತ್ತು 1 ಆಕ್ಸಿಜನ್ ಹೊಂದಿದೆ. ಆದರೆ ವಿಚಿತ್ರ ಎಂದರೆ ಇದು ಎಲ್ಲಾ ಅಂಶಗಳನ್ನು ಹೊಂದಿದೆ. ಹಾಗೆಯೇ ಈ ಆಧುನಿಕ ಜಗತ್ತಿನಲ್ಲಿ ಕಟ್ಟಡಗಳು ಮತ್ತು ಕಾರ್ಖಾನೆಗಳು ಬಹಳಷ್ಟು ಇವೆ.

ಇವುಗಳಿಂದ ಹೊರ ಬರುವ ಕಲುಷಿತ ನೀರು ಸಮುದ್ರವನ್ನು ಸೇರುವುದರಿಂದ ಇದರಲ್ಲಿ ಪಿರಿಯಾಡಿಕ್ ಟೇಬಲ್ ನಲ್ಲಿ ಇರುವ ಎಲ್ಲಾ ಅಂಶಗಳನ್ನು ಒಳಗೊಂಡಿರುತ್ತದೆ. ನಮ್ಮ ಭೂಮಿಯ ಮೇಲೆ ಸುಮಾರು ಶೇಕಡಾ 71ರಷ್ಟು ಭಾಗದಿಂದ ನೀರು ತುಂಬಿಕೊಂಡಿದೆ. ಹಾಗೆಯೇ ಇದರಲ್ಲಿ 97ಶೇಕಡಾದಷ್ಟು ನೀರು ಸಮುದ್ರದ ನೀರು ಆಗಿದೆ. ಇನ್ನು ಉಳಿದ ಭಾಗ ಸಿಹಿನೀರು ಆಗಿದೆ. ಅದರಲ್ಲಿ 2.5ಶೇಕಡಾದಷ್ಟು ನೀರು ನಮಗೆ ಸಿಗುವುದಿಲ್ಲ. ಭೂಮಿ ಸೃಷ್ಟಿಯಾದಾಗ ಯಾವ ರೀತಿಯಲ್ಲಿ ನೀರು ಇತ್ತೋ ಹಾಗೆಯೇ ಈಗಲೂ ಇದೆ. ಮನುಷ್ಯ ಆಹಾರ ಇಲ್ಪದೆ ಬದುಕಬಲ್ಲ ಆದರೆ ನೀರು ಇಲ್ಲದಿದ್ದರೆ ಬದುಕಲು ಸಾಧ್ಯವಿಲ್ಲ.

ಮನುಷ್ಯನ ದೇಹದಲ್ಲಿ ಶೇಕಡಾ 60ರಷ್ಟು ನೀರು ಇರುತ್ತದೆ. ಭೂಮಿಯಲ್ಲಿ ಅಂತರ್ಜಲ ಮಟ್ಟವು ಬರಗಾಲ ಬರದಂತೆ ನೋಡಿಕೊಳ್ಳುತ್ತದೆ. ಮಳೆಯ ನೀರು ಕಲ್ಲುಗಳಲ್ಲಿ ಒಳಗೆ ಹೋಗಿ ಸುಮಾರು ಆಳದವರೆಗೆ ಹೋಗುತ್ತದೆ. ನಂತರ ಅಲ್ಲಿಯೇ ದೂರ ದೂರದಲ್ಲಿ ಸರಬರಾಜು ಆಗುತ್ತದೆ. ಅಂದರೆ ನೂರಾರು ಕಿಲೋಮೀಟರ್ ದೂರದವರೆಗೆ ಸಾಗುತ್ತದೆ. ಒಂದು ಯಂತ್ರದಿಂದ ಭೂಮಿಯ ಆಳದಲ್ಲಿ ಇರುವ ವಸ್ತುಗಳ ಬಗ್ಗೆ ತಿಳಿಸುತ್ತದೆ. ಹಾಗೆಯೇ ನೀರಿನ ಬಿಂದುವನ್ನು ಕಂಡು ಹಿಡಿಯಲು ತೆಂಗಿನಕಾಯಿ ಮತ್ತು ಕಡ್ಡಿಗಳನ್ನು ಸಹ ಬಳಸುತ್ತಾರೆ. ನಂತರದಲ್ಲಿ ಬೋರ್ ಮಶಿನ್ ಗಳ ಮೂಲಕ ನೀರನ್ನು ತೆಗೆಯಲಾಗುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!