Anna Bhagya DBT Status Check: ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ರಾಜ್ಯ ಸರ್ಕಾರವು ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿ ನೀಡುವ ಭರವಸೆ ನೀಡಿತ್ತು, ಆದರೆ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ನೀಡಿರುವ ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿ ಒದಗಿಸಲು ಸಾಧ್ಯವಾಗದ ಕಾರಣ 5 ಕೆಜಿ ಅಕ್ಕಿ ನೀಡಿ, ಇನ್ನು 5 ಕೆಜಿ ಅಕ್ಕಿಯ ಬದಲಾಗಿ ಒಂದು ಕೆಜಿಗೆ 34 ರೂಪಾಯಿಯ ಹಾಗೆ 5 ಕೆಜಿ ಅಕ್ಕಿಗೆ ಒಬ್ಬ ವ್ಯಕ್ತಿಗೆ ₹140 ರೂಪಾಯಿ ಅಕ್ಕಿ ನೀಡಲಾಗುತ್ತಿದೆ. ಪ್ರತಿ ತಿಂಗಳು ಫಲಾನುಭವಿಗಳ ಖಾತೆಗೆ ನೇರವಾಗಿ ಡಿಬಿಟಿ ಮೂಲಕ ಹಣ ವರ್ಗಾವಣೆ ಆಗುತ್ತಿದೆ.
ಇದೀಗ ಸೆಪ್ಟೆಂಬರ್ ತಿಂಗಳ ಹಣ ಫಲಾನುಭವಿಗಳ ಖಾತೆಗೆ ಜಮೆ ಆಗಿದೆ, ಇನ್ನು ಬ್ಯಾಂಕ್ ಅಕೌಂಟ್ ಅಥವಾ ಇನ್ನಿತರ ಸಮಸ್ಯೆಗಳ ಕಾರಣ ಇನ್ನು ಜಮೆ ಆಗಿಲ್ಲ. ಅಂಥವರು ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಖಾತೆ ತೆರೆದ ಒಂದೆರೆಡೆ ದಿನಕ್ಕೆ ಹಣ ಬಂದಿದೆ, ಅಥವಾ ಪೋಸ್ಟ್ ಆಫೀಸ್ ನಲ್ಲಿ ಕೂಡ ಖಾತೆ ತೆರೆಯಬಹುದು. ಹಾಗಾಗಿ ನಿಮ್ಮ ಅಕೌಂಟ್ ಗೆ ಹಣ ಬಂದಿದ್ಯಾ ಇಲ್ಲವಾ ಎಂದು ಡಿಬಿಟಿ ಸ್ಟೇಟಸ್ ಚೆಕ್ ಮಾಡಿಕೊಳ್ಳುವುದು ಒಳ್ಳೆಯದು.
Anna Bhagya DBT Status Check
ಹಾಗಾಗಿ ಡಿಬಿಟಿ ಸ್ಟೇಟಸ್ ಚೆಕ್ ಮಾಡುವ ವಿಧಾನ ಹೇಗೆ ಎಂದು ನೋಡೋಣ.. *ಮೊದಲಿಗೆ ನೀವು https://ahara.kar.nic.in/lpg/ ಈ ಲಿಂಕ್ ಕ್ಲಿಕ್ ಮಾಡಿ, ಇದು ಸರ್ಕಾರದ ಆಹಾರ ಮತ್ತು ನಾಗರೀಕ ನಿಗಮದ ಅಧಿಕೃತ ವೆಬ್ಸೈಟ್ ಆಗಿದೆ.
ಈಗ ನಿಮ್ಮ ಜಿಲ್ಲೆಯ ಹೆಸರಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
ಈಗ ಕೆಳಗಿರುವ ಡಿಬಿಟಿ ಸ್ಟೇಟಸ್ ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿ.
ಈಗ ನಿಮ್ಮ ರೇಶನ್ ಕಾರ್ಡ್ ನಂಬರ್ ಹಾಕಿ, Go ಎನ್ನುವ ಆಪ್ಶನ್ ಸೆಲೆಕ್ಟ್ ಮಾಡಿ. ಈಗ ಕಾರ್ಡ್ ನಲ್ಲಿರುವ ಮುಖ್ಯಸ್ಥರ ಹೆಸರು, ಯುಐಡಿ ನಂಬರ್ ಜೊತೆಗೆ, ಪೂರ್ತಿ ಮಾಹಿತಿ ಸಿಗುತ್ತದೆ. ನಿಮಗೆ ಹಣ ಸಿಕ್ಕಿದೆಯೋ ಇಲ್ಲವೋ ಎನ್ನುವುದು ಕೂಡ ಗೊತ್ತಾಗುತ್ತದೆ.