ಚಂದನವನದಲ್ಲಿ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ಕೊಟ್ಟ ಮಾಹಿತಿ ಇಂದ ಶುರುವಾದ ಡ್ರಗ್ಸ್ ಜಾಲದ ಹುಡುಕಾಟ ಜೋರಾಗಿಯೆ ನಡೆಯುತ್ತಿದೆ. ಈಗಾಗಲೆ ಅದರಲ್ಲಿ ನಟಿ ರಾಗಿಣಿ ಹಾಗೂ ಸಂಜನಾ ಜೈಲು ಸೇರಿದ್ದು, ಸುಮಾರು ನಟರಿಗೆ ಹಾಗೂ ನಿರೂಪಕರಿಗೆ ಕೂಡಾ ಸಿಸಿಬಿ ಇಂದ ನೋಟಿಸ್ ಹೋಗಿತ್ತು. ಅವರಲ್ಲಿ ಕನ್ನಡದ ಹೆಸರಾಂತ ನಿರೂಪಕಿ ಅನುಶ್ರೀ ಅವರು ಒಬ್ಬರು. ಸೆಪ್ಟೆಂಬರ್ ಇಪ್ಪತ್ನಾಲ್ಕು ಅನುಶ್ರೀಗೆ ಸಿಸಿಬಿ ಕಛೇರಿಗೆ ಬರುವಂತೆ ನೋಟಿಸ್ ಸಿಕ್ಕಿತ್ತು. ಅವತ್ತು ಜೀವನದಲ್ಲಿ ಮರೆಯಲಾಗದ ದಿನ ಎಂದು ಹೇಳುತ್ತಾ ಒಂದು ವಿಡಿಯೋ ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಿದ್ದಾರೆ. ಇದರ ಕುರಿತಾಗಿ ನಿರೂಪಕಿ ಅನುಶ್ರೀ ಅವರು ಎನು ಹೇಳಿದ್ದಾರೆ ಅನ್ನೋದನ್ನ ಈ ಲೇಖನದಲ್ಲಿ ವಿವರಿಸಲಾಗಿದೆ.

ಹನ್ನೆರಡು ವರ್ಷಗಳ ಹಿಂದೆ ಗೆದ್ದ ಡ್ಯಾನ್ಸ್ ರಿಯಾಲಿಟಿ ಶೋ ಒಂದರಲ್ಲಿ ಭಾಗವಹಿಸಿದ್ದೆ ಆದರೆ ಈಗ ನನ್ನ ಜೀವನಕ್ಕೆ ಅದೆ ಕಂಟಕವಾಗುತ್ತೆ ಅಂತ ಗೊತ್ತಿರಲಿಲ್ಲ. ಸಿಸಿಬಿಯವರು ವಿಚಾರಣೆಗೆ ಕರೆಸಿದ ಮಾತ್ರಕ್ಕೆ ಅಪರಾದಿಯಾಗುತ್ತಾರಾ? ಎಲ್ಲರೂ ಸುದ್ದಿ ಹಬ್ಬಿಸುತ್ತಿದ್ದಾರೆ ಏನೆನೋ ಮಾತನಾಡುತ್ತಿದ್ದಾರೆ. ಸಿಸಿಬಿ ಕಛೇರಿಯಿಂದ ನೋಟಿಸ್ ಬಂದಾಗಲೂ ಇಷ್ಟು ಬೇಜಾರಾಗಿರಲಿಲ್ಲ ಎಂದು ವಿಡಿಯೋದಲ್ಲಿ ಹೇಳಿದ್ದಾರೆ. ಹಾಗಾದರೆ ಅನುಶ್ರೀ ಅವರು ಇನ್ನೂ ಏನೆನೂ ಹೇಳಿದ್ದಾರೆ? ಅನ್ನೋದನ್ನ ನೋಡೋಣ.

ಅನುಶ್ರೀ ಅವರು ಜೀವನದಲ್ಲಿ ಮತ್ತೆಂದು ನೆನಪಿಸಿಕೊಳ್ಳಲು ಇಷ್ಟ ಪಡದ ದಿನ ಸಪ್ಟೆಂಬರ್ 24 ಎಂದು ಹೇಳುತ್ತಾ, ಹನ್ನೆರಡು ವರ್ಷಗಳ ಹಿಂದೆ ಗೆದ್ದಿದ್ದ ಡ್ಯಾನ್ಸ್ ಶೋ ಇವತ್ತು ನನ್ನ ಜೀವನಕ್ಕೆ ಮುಳುವಾಗಬಹುದು ಎಂಬುದು ಆಗ ನನಗೆ ತಿಳಿಯಲಿಲ್ಲ. ಸುತ್ತಮುತ್ತಲೂ ನಡೆಯುತ್ತಿರುವ ಮಾತು ನನ್ನ ಬಗ್ಗೆಯೆ ಆಗಿರುವುದರಿಂದ ಈ ವಿಡಿಯೋ ಮಾಡಲು ಕಾರಣ ಹಾಗೂ ಯಾವುದೇ ರೀತಿಯಲ್ಲಿ ತನ್ನನ್ನು ತಾನು ಸಮರ್ಥಿಸಿಕೊಳ್ಳುವ ಸಲುವಾಗಿ ಮಾಡಿದ ವಿಡಿಯೋ ಇದಲ್ಲ ಎಂದು ಹೇಳಿದ್ದಾರೆ.

ನನಗೆ ಬೇಸರವಾಗಿದ್ದು ಸಿಸಿಬಿ ಅವರಿಂದ ನೋಟಿಸ್ ಬಂದ ಕಾರಣಕ್ಕಾಗಿ ಅಲ್ಲ. ಸಿಸಿಬಿ ನೋಟಿಸ್ ಬಂದು ಅವರ ಕಛೇರಿಗೆ ಹೋಗಿ ಬಂದ ತಕ್ಷಣವೇ ಯಾರೂ ಆರೋಪಿಯಾಗಲಿ, ಅಪರಾಧಿಯಾಗಲಿ ಆಗುವುದಿಲ್ಲ. ಡ್ರಗ್ಸ್ ವಿಚಾರದಲ್ಲಿ ನನ್ನ ಬಿಂಬಿಸಿದ ರೀತಿ ತುಂಬಾ ಬೇಸರವಾಯಿತು. ನೋವನ್ನು ವಿವರಿಸಲು ನೋವು ಎಂಬ ಶಬ್ದವು ಸಣ್ಣ ಪದವೇ. ಕುಟುಂಬದವರು ಒಂದು ವಾರದಿಂದ ತುಂಬಾ ನೋವು ಪಟ್ಟಿದ್ದಾರೆ. ಇಷ್ಟೆಲ್ಲಾ ಬಿಂಬಿಸಿದರು ನಂಬದೆ ನೀವು ಏನೆಂದು ತಿಳಿದಿದೆ ಎಂದು ಬೆಂಬಲಿಸಿದ ಕನ್ನಡಿಗರಿಗೆ ನನ್ನ ಹೃದಯ ಪೂರ್ವಕ ಧನ್ಯವಾದ. ಏನನ್ನೂ ಹೇಳದೆ, ಏನನ್ನೂ ಕೇಳದೆ ನನ್ನ ಮೇಲೆ ಅಪಾರ ನಂಬಿಕೆ ಇದೆ ಎಂದು ಜೊತೆ ನಿಂತಿದ್ದೀರ, ನೀವು ಕೊಟ್ಟ ಹೆಸರು, ನೀವು ಕೊಟ್ಟ ಪ್ರೀತಿಯಾನ್ನು ನಾನು ಯಾವತ್ತೂ ಮರೆಯುವುದಿಲ್ಲ ಎಂದು ಭಾವುಕರಾಗಿ ಹೇಳಿದ್ದಾರೆ ಅನುಶ್ರೀ.

ಇವುಗಳನ್ನೆಲ್ಲ ಮೀರಿ ಆಡುತ್ತಿರುವ ಮಾತುಗಳು ಹರಡುತ್ತಿರುವ ಸುದ್ದಿಗಳ ಬಗ್ಗೆ ತಿಳಿದಾಗ ಕುಟುಂಬದಲ್ಲಿ ನೆಮ್ಮದಿಯನ್ನು ಹಾಳುಮಾಡುತ್ತಿದೆ. ಯಾರ ಬಗ್ಗೆಯಾದರೂ ಸುದ್ದಿ ಹರಡಿಸುವಾಗ ಒಮ್ಮೆ ಅವರ ಜಾಗದಲ್ಲಿ ನಿಂತು ಯೋಚಿಸಿ. ಇಂತಹ ಕಷ್ಟಕರವಾದ ದಿನಗಳಲ್ಲಿ ನನ್ನ ಜೊತೆಗೆ ನಿಂತು ಧೈರ್ಯ ತುಂಬಿದ ಸ್ನೇಹಿತರಾಗಿರಬಹುದು, ಕುಟುಂಬದವರು, ಸಹೋದ್ಯೋಗಿಗಳು, ನನ್ನ ಕುಟುಂಬಕ್ಕೆ ಅನ್ನವಿಟ್ಟ ಜೀ ಕನ್ನಡ ಸಂಸ್ಥೆಇರಬಹುದು ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು. ಕೊನೆಯದಾಗಿ ಹೇಳುವುದೆನೆಂದರೆ ನೀವು ಕೊಟ್ಟ ಹೆಸರಿಗಾಗಲಿ, ನೀವು ಇಟ್ಟ ನಂಬಿಕೆಗಾಗಲಿ ಯಾವತ್ತೂ ಮೋಸ ಮಾಡುವುದಿಲ್ಲ ಎಂದು ಅನುಶ್ರೀ ಅವರು ತಮ್ಮ ಅಳಲನ್ನು ತೋಡಿಕೊಳ್ಳುತ್ತಾ ಕಣ್ಣೀರು ಹಾಕಿದ್ದಾರೆ.

ಏನೇ ಪರಿಸ್ಥಿತಿ ಬಂದರು ಎದುರಿಸುತ್ತೆನೆ ಎಂಬುದನ್ನು ಸೆಪ್ಟೆಂಬರ್ 24 ರಂದು ಅನುಶ್ರೀ ಹೇಳಿದ್ದರು. ವಿಚಾರಣೆಗೆ ಬಂದಿದ್ದೆನೆ ಹೊರತು ಅಪರಾಧಿಯಲ್ಲ, ಯಾವುದೇ ಡ್ರಗ್ಸ್ ಪಾರ್ಟಿಯಲ್ಲಿ ಅಥವಾ ಅದರ ವಿಷಯದಲ್ಲಿ ನಾನು ಭಾಗವಹಿಸಿಲ್ಲ ಎಂದು ಮಂಗಳೂರಿನ ಪಣಂಬದೂರಿನಲ್ಲಿ ಹೇಳಿಕೆ ನೀಡಿದ್ದರು. ಮಂಗಳೂರಿನಲ್ಲಿ ಅರೆಸ್ಟ್ ಆಗಿದ್ದ ಶ್ಯಾಮ್ ಪರ್ನಾಂಡಿಸ್, ಕಿಶೋರ್ ಶೆಟ್ಟಿ, ತರುಣ್ ಇವರುಗಳು ಅನುಶ್ರೀಯವರ ಹೆಸರಿನ ಉಲ್ಲೇಖ ಮಾಡಿರುವುದರಿಂದ ಅನುಶ್ರೀಗೆ ನೋಟಿಸ್ ಕೊಡಲಾಗಿದ್ದು ಅಂತೆ ಕಂತೆಗಳಲ್ಲಿ ಹೆಸರು ಬಂದಿರುವುದಕ್ಕೆ ಅನುಶ್ರೀ ಬೇಸರವಾಗಿದ್ದಾರೆ. ಆದರೆ ಈಗ ಅರೆಸ್ಟ್ ಆಗಿರುವ ಆರು ಜನರು ಅನುಶ್ರೀಯ ಹೆಸರನ್ನು ಹೇಳಿದ್ದಾರೆ ಅದಕ್ಕಾಗಿ ಸಿಸಿಬಿ ಅವರು ನೋಟಿಸ್ ಕೊಟ್ಟಿದ್ದಾರೆ. ಸಿಸಿಬಿ ಮೂಲಗಳಿಂದ ಅನುಶ್ರೀಯ ಬಂಧನದ ಸಾಧ್ಯತೆ ಇದೆಯೆಂದು ಸುದ್ದಿ ಸಿಕ್ಕಿದೆ. ಡ್ರ ಗ್ಸ್ ಟೆಸ್ಟ್ ಪೊಸಿಟಿವ್ ಬಂದಾಗ ಮಾತ್ರ ಕ್ರಮ ಕೈಗೊಳ್ಳುತ್ತಾರೆ, ಈಗ ಸಿಸಿಬಿಯವರ ಪ್ರಕಾರ ಅನುಶ್ರೀ ಅಪರಾಧಿ ಎಂದು ಎಲ್ಲಿಯೂ ಸಹ ಉಲ್ಲೇಖವಾಗಿಲ್ಲ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!