ಅನುಶ್ರೀ ಅವರು ಮಾಡುವ ಆಂಕರಿಂಗ್ ಇಷ್ಟ ಪಡದೆ ಇರುವವರೆ ಇಲ್ಲ. ಅನುಶ್ರೀ ಅವರಿಗೆ ತಂದೆ ಇಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಅನುಶ್ರೀ ಅವರು ಬಹಳ ಕಷ್ಟದಿಂದ ತಮ್ಮ ಜೀವನವನ್ನು ಕಟ್ಟಿಕೊಂಡಿದ್ದಾರೆ. ಡ್ರಗ್ಸ್ ವಿಷಯದಲ್ಲಿ ಸಿಲುಕಿಕೊಂಡರು ಅದರಿಂದ ಪಾರಾದರು. ಇದೀಗ ಸಂಪತ್ ಕುಮಾರ್ ಎಂಬ ವ್ಯಕ್ತಿ ಅನುಶ್ರೀ ನನ್ನ ಮಗಳು ಎಂದು ಹೇಳಿಕೊಂಡಿದ್ದಾರೆ. ಅವರ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಸಂಪತ್ ಕುಮಾರ್ ಎನ್ನುವವರು ಒಂದು ಮಸಾಲೆ ಕಂಪನಿಯಲ್ಲಿ 8 ತಿಂಗಳ ಮೊದಲು ಕೆಲಸಕ್ಕೆ ಸೇರುತ್ತಾರೆ. ಕೆಲಸಕ್ಕೆ ಸೇರಿ ಒಂದು ತಿಂಗಳಿಗೆ ಅವರಿಗೆ ಸ್ಟ್ರೋಕ್ ಅಟ್ಯಾಕ್ ಆಗುತ್ತದೆ. ಮಸಾಲೆ ಕಂಪನಿಯವರು ಸಂಪತ್ ಕುಮಾರ್ ಅವರನ್ನು ಆಸ್ಪತ್ರೆಗೆ ಸೇರಿಸಿ ಹಣ ಭರಿಸಿ ಊಟ ಕೊಡುತ್ತಾರೆ. ಅವರು ತನಗೆ ಯಾರೂ ಇಲ್ಲ ಎಂದು ಹೇಳಿದ್ದರು. ಇದೀಗ ಮತ್ತೆ ಸ್ಟ್ರೋಕ್ ಅಟ್ಯಾಕ್ ಆಗಿದ್ದು ಸೀರಿಯಸ್ ಆಗಿದೆ ಆದ್ದರಿಂದ ಡಾಕ್ಟರ್ ಅವರ ಸಂಬಂಧಿಕರಿಗೆ ವಿಷಯ ತಿಳಿಸಿ ಎಂದು ಹೇಳಿದರು.

ಸಂಪತ್ ಕುಮಾರ್ ಅವರಿಗೆ ಪ್ರಜ್ಞೆ ಬಂದ ನಂತರ ಕೇಳಿದಾಗ ಅನುಶ್ರೀ, ಅಭಿಜಿತ್ ನನ್ನ ಮಕ್ಕಳು ಎಂದು ಹೇಳುತ್ತಿದ್ದಾರೆ. ಅವರಿಗೆ ಕರೆ ಮಾಡಿದಾಗ ಕೊಂಟೆಕ್ಟ್ ಗೆ ಸಿಗಲಿಲ್ಲ. ಮಾಧ್ಯಮದ ಮೂಲಕ ಸಂಪತ್ ಅವರಿಗೆ ಸಂಬಂಧಿಸಿದವರು ಆಸ್ಪತ್ರೆಗೆ ಬನ್ನಿ ಎಂದು ಕಂಪನಿಯವರು ಕೇಳಿಕೊಂಡಿದ್ದಾರೆ. ಈ ಬಗ್ಗೆ ಸಂಪತ್ ಕುಮಾರ್ ಅವರು ಅನುಶ್ರೀ ನನ್ನ ಮಗಳು ಅವಳ ಇಮೇಜ್ ಡ್ಯಾಮೇಜ್ ಆಗಬಾರದು, ಕಷ್ಟಪಟ್ಟು ಮೇಲೆ ಬಂದಿದ್ದಾಳೆ, ಎಲ್ಲರಿಗೂ ಸುಳ್ಳು ಹೇಳಿ ಅನುಕಂಪ ಗಿಟ್ಟಿಸಿಕೊಂಡಿದ್ದಾಳೆ. ಅವಳ ಜನಪ್ರಿಯತೆ ಮುಂದುವರೆಯಲಿ ಎಂದು ನಾನು ಡಿಸ್ಟರ್ಬ್ ಮಾಡಿಲ್ಲ, ಕಳೆದ ಬಾರಿ ನನ್ನ ನೋಡಲು ಮಗ ಬಂದಿದ್ದ ಎಂದು ಹೇಳಿದರು.

ಸಂಪತ್ ಅವರು ಮಾದ್ಯಮದ ಮೂಲಕ ಅನುಶ್ರೀ ಅವರಿಗೆ ಚೆನ್ನಾಗಿ ಬೆಳೆಯಲಿ, ನಾನು ಸತ್ತರೆ ಮಣ್ಣು ಮಾಡಲಿ ಹೆಚ್ಚೇನೂ ನಿರೀಕ್ಷೆ ಮಾಡುವುದಿಲ್ಲ. ಯಾವ ತಂದೆ, ತಾಯಿನು ಮಕ್ಕಳು ಹಾಳಾಗಲಿ ಎಂದು ಬಯಸುವುದಿಲ್ಲ. ಅಪ್ಪ ಇದ್ದು ಅಪ್ಪ ಇಲ್ಲ ಎಂದು ಹೇಳಿಕೊಳ್ಳುವ ಮಕ್ಕಳಿಗೆ ಏನು ಹೇಳಬೇಕು ಎಂದು ದುಃಖದಿಂದ ಹೇಳಿಕೊಂಡಿದ್ದಾರೆ. ಅನುಶ್ರೀ ಅವರನ್ನು ನನ್ನ ಮಗಳು ಎಂದು ಧಿಡೀರನೆ ಹೇಳಿಕೊಂಡು ಬಂದ ಈ ವ್ಯಕ್ತಿ ನಿಜವಾಗಲೂ ಅವರ ತಂದೆಯೆ ಎಂಬ ಪ್ರಶ್ನೆ ಮೂಡುತ್ತದೆ. ಈ ವ್ಯಕ್ತಿ ಅನುಶ್ರೀ ಅವರ ತಂದೆ ಹೌದೊ, ಅಲ್ಲವೊ ಎಂದು ಅನುಶ್ರೀ ಅವರೆ ಹೇಳಬೇಕು. ಅನುಶ್ರೀ ಅವರು ರಿಯಾಲಿಟಿ ಶೋಗಳಲ್ಲಿ ಜನಪ್ರಿಯತೆ ಗಳಿಸುತ್ತಿರುವುದರಿಂದ ಈ ರೀತಿ ಮಾಡುತ್ತಿರಬಹುದಾ ಅಥವಾ ಅನುಶ್ರೀ ಅವರು ತಂದೆ ಇದ್ದರೂ ಯಾಕೆ ಸುಳ್ಳು ಹೇಳಿದರು ಎಂಬಿತ್ಯಾದಿ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!