ನಮ್ಮ ದೇಶ ಕೆಲವು ಪ್ರಮುಖ ಸಮಸ್ಯೆಗಳನ್ನು ಎದುರಿಸುತ್ತಿದೆ. ನಿರುದ್ಯೋಗ, ಅನಕ್ಷರತೆ, ಬಡತನ, ಇತ್ಯಾದಿ ಸಮಸ್ಯೆಗಳು. ಇತ್ತೀಚೆಗೆ ನಿರುದ್ಯೋಗ ಸಮಸ್ಯೆ ಅತಿಯಾಗಿ ಕಾಡುತ್ತಿದೆ ಇಂತಹ ಸಮಯದಲ್ಲಿ ಅಮೆಜಾನ್ ಕಂಪನಿಯು ನಿರುದ್ಯೋಗಿ ಯುವಕರಿಗೆ ಒಂದು ಸುವರ್ಣ ಅವಕಾಶವನ್ನು ಕೊಡುತ್ತಿದೆ. ಅಮೆಜಾನ್ ಕಂಪನಿಯಲ್ಲಿ ಯಾವ ಕೆಲಸ ಖಾಲಿ ಇದೆ, ಅರ್ಜಿ ಹೇಗೆ ಸಲ್ಲಿಸಬೇಕು ಹಾಗೂ ಯಾವೆಲ್ಲಾ ಅರ್ಹತೆಗಳಿರಬೇಕು ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.
ಬಹಳಷ್ಟು ಜನರಿಗೆ ಇ-ಕಾಮರ್ಸ್ ಕಂಪನಿಯಲ್ಲಿ ಕೆಲಸ ಮಾಡುವ ಕನಸಿರುತ್ತದೆ. ಅಮೆಜಾನ್ ಕಂಪನಿಯಲ್ಲಿ ಕೆಲಸ ಮಾಡುವ ಅವಕಾಶವನ್ನು ಕಲ್ಪಿಸುತ್ತಿದೆ. ನೀವು ನೌಕರಿಯ ಹುಡುಕಾಟದಲ್ಲಿದ್ದರೆ ಇದೊಂದು ಸುವರ್ಣಾವಕಾಶ. ಅಮೆಜಾನ್ ಕಂಪನಿಯಲ್ಲಿ ಅನುಕೂಲಕ್ಕೆ ತಕ್ಕಂತೆ ಕೆಲಸ ಮಾಡಿ ತಿಂಗಳಿಗೆ 55,000 ರೂಪಾಯಿಯಿಂದ 60,000 ರೂಪಾಯಿವರೆಗೆ ಸಂಪಾದಿಸಬಹುದು. ಆನ್‌ಲೈನ್ ಚಿಲ್ಲರೆ ಕಂಪನಿಗಳ ಉತ್ಪನ್ನಗಳನ್ನು ಅಥವಾ ಪ್ಯಾಕೇಜ್ ಅನ್ನು ಗ್ರಾಹಕರಿಗೆ ತಲುಪಿಸುವವರನ್ನು ಡೆಲಿವರಿ ಬಾಯ್ ಎಂದು ಕರೆಯಲಾಗುತ್ತದೆ. ಅಮೆಜಾನ್ ಕಂಪನಿಯಲ್ಲಿ ಡೆಲಿವರಿ ಕೆಲಸಕ್ಕಾಗಿ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ಅಭ್ಯರ್ಥಿ ಪದವಿ ಹೊಂದಿರಬೇಕು, ಉತ್ತೀರ್ಣ ಪ್ರಮಾಣಪತ್ರವನ್ನು ಹೊಂದಿರುವುದು ಕಡ್ಡಾಯ. ವಿತರಣೆಗೆ ಸ್ವಂತ ಬೈಕ್ ಅಥವಾ ಸ್ಕೂಟರ್ ಇರಬೇಕು. ಬೈಕ್ ಅಥವಾ ಸ್ಕೂಟರ್ ವಿಮೆ, ಆರ್ ಸಿ ಇರಬೇಕು ಅಲ್ಲದೆ ಅರ್ಜಿದಾರರಿಗೆ ಚಾಲನಾ ಪರವಾನಗಿ ಇರಬೇಕು. ಇದಲ್ಲದೆ ಅಮೆಜಾನ್ ವೆಬ್ ಸೈಟ್ ನಲ್ಲಿ ಅರ್ಜಿ ಸಲ್ಲಿಸಬಹುದು ಅಥವಾ ಅಮೆಜಾನ್‌ನ ಯಾವುದೇ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಡೆಲಿವರಿ ಬಾಯ್ ಪ್ಯಾಕೇಜ್ ಅನ್ನು ಅಮೆಜಾನ್‌ನ ಗೋದಾಮಿನಿಂದ ಕೊಂಡೊಯ್ದು ಗ್ರಾಹಕರಿಗೆ ತಲುಪಿಸುತ್ತಾರೆ. ದೇಶದಾದ್ಯಂತ ಡೆಲಿವರಿ ಬಾಯ್ಸ್ ಪ್ರತಿದಿನ ಲಕ್ಷಾಂತರ ಪ್ಯಾಕೇಜ್‌ಗಳನ್ನು ಮನೆಗಳಿಗೆ ತಲುಪಿಸುತ್ತಾರೆ.
ಅಮೆಜಾನ್ ಕಂಪನಿ ದೊಡ್ಡ ಕಂಪನಿಯಾಗಿದ್ದು ದೆಹಲಿಯಲ್ಲಿ ಸುಮಾರು 18 ಕೇಂದ್ರಗಳನ್ನು ಹೊಂದಿದೆ, ಇದೇ ರೀತಿ ದೇಶದ ಪ್ರತಿ ಭಾಗದಲ್ಲೂ ಅಮೆಜಾನ್ ಕೇಂದ್ರಗಳಿವೆ. ಪ್ಯಾಕೇಜ್ ಅನ್ನು ಅಮೆಜಾನ್ ಕೇಂದ್ರದಿಂದ ಸುಮಾರು 10-15 ಕಿ.ಮೀ ಪ್ರದೇಶದಲ್ಲಿ ತಲುಪಿಸಲಾಗುತ್ತದೆ. ಡೆಲಿವರಿ ಬಾಯ್ ಇಡೀ ದಿನ ಕೆಲಸ ಮಾಡಬೇಕಾಗಿಲ್ಲ. ಡೆಲಿವರಿ ಬಾಯ್ ಅವರಿರುವ ಪ್ರದೇಶದಲ್ಲಿ ಡೆಲಿವರಿ ಮಾಡಬೇಕಿರುವ ಪ್ಯಾಕೇಜ್‌ಗಳನ್ನು ಡೆಲಿವರಿ ಮಾಡಬೇಕು ಆದರೂ ಅಮೆಜಾನ್ ಬೆಳಗ್ಗೆ 7 ರಿಂದ ರಾತ್ರಿ 8 ರವರೆಗೆ ಡೆಲಿವರಿ ಸೌಲಭ್ಯವನ್ನು ಒದಗಿಸುತ್ತದೆ. ಹೆಚ್ಚಿನ ಕೇಂದ್ರಗಳಲ್ಲಿ ಡೆಲಿವರಿ ಬಾಯ್ ಕೆಲಸ ಯಾವಾಗಲೂ ಖಾಲಿಯಾಗಿರುತ್ತದೆ ಆದರೆ ಕೆಲವು ಬಾರಿ ಪ್ರಸ್ತುತ ಕೆಲಸ ಖಾಲಿ ಇಲ್ಲದಿದ್ದರೂ ಭವಿಷ್ಯದ ದೃಷ್ಟಿಯಿಂದ ನಿಮ್ಮ ಹೆಸರನ್ನು ನೋಂದಾಯಿಸಬಹುದು.
ಅಮೆಜಾನ್ ಕಂಪನಿಯ ಡೆಲಿವರಿ ಬಾಯ್ ಪ್ರತಿ ತಿಂಗಳು ನಿಯಮಿತ ಸಂಬಳ ಪಡೆಯುತ್ತಾರೆ. ಅಮೆಜಾನ್‌ನಲ್ಲಿ ಡೆಲಿವರಿ ಹುಡುಗರಿಗೆ ನಿಗದಿತ ಸಂಬಳ 12 ರಿಂದ 15 ಸಾವಿರ ರೂಪಾಯಿ ಮತ್ತು ಪೆಟ್ರೋಲ್ ಖರ್ಚು ನೀಡಲಾಗುತ್ತದೆ ಆದರೆ ಉತ್ಪನ್ನ ಅಥವಾ ಪ್ಯಾಕೇಜ್ ವಿತರಿಸಿದಾಗ ನೀವು 15 ರಿಂದ 20 ರೂಪಾಯಿಗಳನ್ನು ಪಡೆಯುತ್ತೀರಾ. ವಿತರಣಾ ಸೇವಾ ಕಂಪನಿಯ ಪ್ರಕಾರ ಯಾರಾದರೂ ಒಂದು ತಿಂಗಳು ಕೆಲಸ ಮಾಡಿ ಪ್ರತಿದಿನ 100-150 ಪ್ಯಾಕೇಜ್‌ಗಳನ್ನು ವಿತರಿಸಿದರೆ, ಅವರು ಸುಲಭವಾಗಿ ತಿಂಗಳಿಗೆ 60,000ರೂಪಾಯಿಗಳನ್ನು ಗಳಿಸಬಹುದು. ಅಮೆಜಾನ್‌ನಲ್ಲಿ ಡೆಲಿವರಿ ಬಾಯ್ ಕೆಲಸ ಪಡೆಯಲು ಇಮೇಲ್ ಐಡಿ ಮೂಲಕ ನೋಂದಾಯಿಸಿಕೊಳ್ಳಬಹುದು. ನಂತರ ಒಂದು ಫಾರ್ಮ್ ಅನ್ನು ಭರ್ತಿ ಮಾಡಬೇಕು. ಒಂದು ವೇಳೆ ದೊಡ್ಡ ಉತ್ಪನ್ನಗಳನ್ನು ತಲುಪಿಸಲು ಬಯಸಿದರೆ, ಕಂಪನಿಯು ಕೆಲವು ಷರತ್ತುಗಳ ಮೇಲೆ ನಿಮಗೆ ದೊಡ್ಡ ವಾಹನಗಳನ್ನು ಸಹ ಒದಗಿಸುತ್ತದೆ. ಡೆಲಿವರಿ ಬಾಯ್ ಕಚೇರಿ ಮತ್ತು ಮನೆ ಎರಡೂ ಕಡೆಗೆ ಸರಕುಗಳನ್ನು ತಲುಪಿಸಬೇಕು.
ಸಣ್ಣ ವಸ್ತುಗಳಿಂದ ಹಿಡಿದು ಫ್ರಿಜ್, ಟಿವಿ, ಎಸಿವರೆಗಿನ ದೊಡ್ಡ ವಸ್ತುಗಳನ್ನು ತಲುಪಿಸುತ್ತಾರೆ. ಅಮೆಜಾನ್ ಕಂಪನಿಯಲ್ಲಿ ಡೆಲಿವರಿ ಬಾಯ್ ಕೆಲಸ ಶಾಶ್ವತವಾಗಿರುತ್ತದೆ. ಬೇಕಾದಾಗ ಕೆಲಸವನ್ನು ಬಿಡಬಹುದು ಹಾಗೆಯೆ ಕಾರ್ಯಕ್ಷಮತೆಯ ಆಧಾರದ ಮೇಲೆ ಕಂಪನಿ ಕೆಲಸದಿಂದ ತೆಗೆದುಹಾಕಬಹುದು. ಅಮೆಜಾನ್ ಕಂಪನಿಯು ಕೆಲಸಕ್ಕೆ ಸೇರಿದ ನಂತರ ಕೆಲಸದ ಬಗ್ಗೆ ತರಬೇತಿ ನೀಡುತ್ತದೆ. ಒಟ್ಟಿನಲ್ಲಿ ನಿರುದ್ಯೋಗಿ ಯುವಕರು ಅಮೆಜಾನ್ ಕಂಪನಿಯು ನೀಡಿದ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.
ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್
ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466