ಏನಾದರೂ ಸ್ಪೆಷಲ್ ಅಡುಗೆ ಮಾಡಬೇಕು ಅಂದರೆ ಮಸಾಲೆ ಪದಾರ್ಥ ಬೇಕೇ ಬೇಕು ಅದರಲ್ಲಿ ಎಲ್ಲರಿಗೂ ಬೇಗ ನೆನಪಾಗುವುದು ಚಕ್ಕೆ. ಚಕ್ಕೆ ಕೇವಲ ಅಡುಗೆ ರುಚಿಯನ್ನು ಮಾತ್ರ ಹೆಚ್ಚಿಸುವುದಿಲ್ಲ ಆರೋಗ್ಯವನ್ನು ಕೂಡ ಹೆಚ್ಚಿಸುತ್ತದೆ. ಹಾಗಾದರೆ ಚಕ್ಕೆ ಇಂದ ಆಗುವ ಆರೋಗ್ಯಕರ ಪ್ರಯೋಜನಗಳನ್ನು ಈ ಲೇಖನದ ಮೂಲಕ ತಿಳಿಯೋಣ.
ಚಕ್ಕೆ ನೋಡಲು ಯಾವುದೋ ಮರದ ಚಕ್ಕೆಯಂತೆ ಇರುವ ಕಾರಣ ಇದಕ್ಕೆ ಚಕ್ಕೆ ಎಂದು ಕರೆಯುತ್ತಾರೆ. ಚಕ್ಕೆ ಒಂದು ರೀತಿಯ ಉಪಯುಕ್ತ ಔಷಧೀಯ ಅಂಶಗಳನ್ನು ಹೊಂದಿರುವ ಮಸಾಲೆ ಪದಾರ್ಥ. ಚಕ್ಕೆಯನ್ನು ಪ್ರತಿದಿನದ ಅಡುಗೆಗೆ ಬಳಸಿದರೆ ಅದು ತನ್ನದೇ ಆದ ವಾಸನೆ, ರುಚಿ ಹಾಗೂ ಬಣ್ಣದಿಂದ ಅಡುಗೆಯನ್ನು ರುಚಿಕರವನ್ನಾಗಿ ಮಾಡುತ್ತದೆ. ಭಾರತೀಯರು ಚಕ್ಕೆಯನ್ನು ಬಳಸಿ ಬಹಳ ವರ್ಷಗಳಿಂದ ಹಲವಾರು ವಿಧದ ಖಾಯಿಲೆಗಳಿಗೆ ಪರಿಹಾರವನ್ನು ಕಂಡುಕೊಳ್ಳುತ್ತಾ ಬರುತ್ತಿದ್ದಾರೆ. ಚಕ್ಕೆಯಲ್ಲಿ ಆಂಟಿಆಕ್ಸಿಡೆಂಟ್ ಪ್ರಮಾಣ ಹೆಚ್ಚಿದ್ದು ಆರೋಗ್ಯಕ್ಕೆ ಒಳ್ಳೆಯದು. ಚರ್ಮದ ಆರೋಗ್ಯಕ್ಕೂ ಸಹ ಚಕ್ಕೆ ಉತ್ತಮ. ಅಲ್ಲದೇ ಚಕ್ಕೆಯನ್ನು ಅಡುಗೆಯಲ್ಲಿ ಬಳಸಿ ಸೇವಿಸಿದರೆ ಇನ್ಫೆಕ್ಷನ್, ವೈರಸ್ ನಿಂದ ರಕ್ಷಣೆ ದೊರೆಯುತ್ತದೆ.
ಚಕ್ಕೆ ಇಂದ ಮೆದುಳಿನ ಆರೋಗ್ಯ ವೃದ್ಧಿಯಾಗಿ ಅದು ತನ್ನ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಮಾಡುತ್ತದೆ. ಡಯಾಬಿಟೀಸ್ ಇರುವ ರೋಗಿಗಳು ಚಕ್ಕೆಯನ್ನು ಅಡುಗೆಗೆ ಬಳಸಿಕೊಳ್ಳುವುದರಿಂದ ಡಯಾಬಿಟೀಸ್ ಪ್ರಮಾಣ ಕಡಿಮೆಯಾಗುತ್ತದೆ. ಕ್ಯಾನ್ಸರ್ ನಂತಹ ಭಯಾನಕ ಖಾಯಿಲೆಯನ್ನು ಚಕ್ಕೆ ತಡೆಗಟ್ಟುತ್ತದೆ. ಪ್ರತಿದಿನ ಚಕ್ಕೆ ಸೇವನೆಯಿಂದ ಕ್ಯಾನ್ಸರ್ ನಂಥ ಭಯಾನಕ ರೋಗವನ್ನು ಬರದಂತೆ ತಡೆಗಟ್ಟಬಹುದು. ಹಲ್ಲಿನ ಆರೋಗ್ಯ ಕೂಡ ಮುಖ್ಯ ಹಲ್ಲು ನೋವನ್ನು ಸಹಿಸುವುದು ಅಸಾಧ್ಯ, ಚಕ್ಕೆಯ ಸೇವನೆಯಿಂದ ಹಲ್ಲಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಕೆಲವರಿಗೆ ಅಲರ್ಜಿ ಒಂದು ರೋಗದಂತೆ ಇರುತ್ತದೆ ಚಕ್ಕೆ ಸೇವನೆಯಿಂದ ಅಲರ್ಜಿ ಆಗುವುದು ಕಡಿಮೆಯಾಗುತ್ತಾ ಬರುತ್ತದೆ. ಚಕ್ಕೆ ತಿನ್ನುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ನಾವು ಮಾಡುವ ಪಲಾವ್, ರೊಟ್ಟಿ, ಚಪಾತಿಗೆ ಹಚ್ಚಿಕೊಳ್ಳುವ ಗ್ರೇವಿಗಳಲ್ಲಿ ಚಕ್ಕೆಯನ್ನು ಹಾಕಿದಾಗ ಒಳ್ಳೆಯ ಟೇಸ್ಟ್ ಬರುತ್ತದೆ ಹಾಗೂ ಜೀರ್ಣ ಆಗಲು ಸಹಾಯಕಾರಿಯಾಗುತ್ತದೆ. ಹಾಗಾಗಿ ಪ್ರತಿದಿನದ ಅಡುಗೆಯಲ್ಲಿ ಚಕ್ಕೆ ಇರಲೇಬೇಕು ಆಗಲೇ ಅಡುಗೆ ರುಚಿಯಾಗಿರುವುದು. ಈ ಮಾಹಿತಿಯನ್ನು ತಪ್ಪದೇ ಎಲ್ಲರಿಗೂ ತಿಳಿಸಿ.