ಬಟಾಟೆ ಇದು ತರಕಾರಿಗಳಲ್ಲಿ ಒಂದು. ಕೆಲವು ತರಕಾರಿಗಳು ಭೂಮಿಯ ಮೇಲೆ ಬೆಳೆಯುತ್ತವೆ. ಹಾಗೆಯೇ ಕೆಲವು ತರಕಾರಿಗಳು ಭೂಮಿಯ ಕೆಳಗಡೆ ಗಡ್ಡೆಯ ರೂಪದಲ್ಲಿ ಬೆಳೆಯುತ್ತವೆ. ಹಾಗೆಯೇ ಬಟಾಟೆ ಭೂಮಿಯ ಕೆಳಗಡೆ ಗಡ್ಡೆಯ ರೂಪದಲ್ಲಿ ಬೆಳೆಯುವ ತರಕಾರಿ ಆಗಿದೆ. ಹಾಗೆಯೇ ಬಟಾಟೆಯನ್ನು ಬೇಯಿಸಿ ಯಾವುದೇ ಪದಾರ್ಥವನ್ನು ಮಾಡಿದರೂ ಅದು ಬಹಳ ರುಚಿಕರವಾಗಿರುತ್ತದೆ. ಆದ್ದರಿಂದ ನಾವು ಇಲ್ಲಿ ಬಟಾಟೆ ಕಬಾಬ್ ಮಾಡುವ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಬಟಾಟೆ ಕಬಾಬ್ ನ್ನು ತಯಾರಿಸಲು ಅನೇಕ ಸಾಮಗ್ರಿಗಳು ಬೇಕಾಗುತ್ತದೆ. ಮೊದಲನೆಯದಾಗಿ ಬಟಾಟೆ ಬೇಕಾಗುತ್ತದೆ. ಹಾಗೆಯೇ ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಬೇಕಾಗುತ್ತದೆ. ನಂತರದಲ್ಲಿ ರುಚಿಗೆ ತಕ್ಕಷ್ಟು ಉಪ್ಪು ಬೇಕಾಗುತ್ತದೆ. ಕೊನೆಯದಾಗಿ ಕಬಾಬ್ ಮಸಾಲಾ ಮತ್ತು ಮೆಣಸಿನಪುಡಿ ಬೇಕಾಗುತ್ತದೆ. ಇದನ್ನು ಮಾಡುವ ವಿಧಾನ ಎಂದರೆ ಮೊದಲು ಬಟಾಟೆಯನ್ನು ನೀರಿನಲ್ಲಿ ಚೆನ್ನಾಗಿ ತೊಳೆದುಕೊಳ್ಳಬೇಕು. ನಂತರ ಅದನ್ನು ಬೇಯಿಸಿಕೊಳ್ಳಬೇಕು. ಒಂದು ಬಟಾಟೆಯನ್ನು ಅರ್ಧ ಮಾಡಿ ಬೇಯಿಸಿದರೆ ಸ್ವಲ್ಪ ಬೇಗ ಬೇಯುತ್ತದೆ.
ನಂತರದಲ್ಲಿ ಅದು ಸ್ವಲ್ಪ ಆರಿದ ಮೇಲೆ ಸಿಪ್ಪೆಯನ್ನು ತೆಗೆದುಕೊಂಡು ಸಣ್ಣ ಹೋಳುಗಳನ್ನು ಮಾಡಿಕೊಳ್ಳಬೇಕು. ನಂತರ ಅದನ್ನು ಒಂದು ಪಾತ್ರೆಗೆ ಹಾಕಿಕೊಳ್ಳಬೇಕು. ಅದಕ್ಕೆ ಒಂದು ಚಮಚ ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ ನ್ನು ಹಾಕಬೇಕು. ನಂತರದಲ್ಲಿ ಕಬಾಬ್ ಪೌಡರ್ ನ್ನು ಹಾಕಬೇಕು. ಅದಕ್ಕೆ ಎರಡು ಚಮಚ ಅಕ್ಕಿಹಿಟ್ಟನ್ನು ಹಾಕಬೇಕು. ಕೊನೆಯದಾಗಿ ರುಚಿಗೆ ತಕ್ಕಷ್ಟು ಉಪ್ಪು ಹಾಕಬೇಕು. ಇದನ್ನು ಚೆನ್ನಾಗಿ ಮಿಶ್ರಣ ಮಾಡಬೇಕು. ಸ್ವಲ್ಪ ನೀರು ಹಾಕಿ ಕಲಸಿ ಹತ್ತು ನಿಮಿಷಗಳ ಕಾಲ ಬಿಡಬೇಕು.
ನಂತರದಲ್ಲಿ ಒಂದು ಪಾತ್ರೆಯಲ್ಲಿ ಎಣ್ಣೆಯನ್ನು ಹಾಕಿ ಕಾಯಲು ಬಿಡಬೇಕು. ಎಣ್ಣೆ ಚೆನ್ನಾಗಿ ಕಾದ ನಂತರ ಮಾಡಿಟ್ಟುಕೊಂಡ ಮಿಶ್ರಣವನ್ನು ಬೋಂಡಾದಂತೆ ಹಾಕಿ ಕರಿಯುತ್ತಾ ಹೋಗಬೇಕು. ಅದು ಬೆಂದ ನಂತರ ತೆಗೆದರೆ ಬಟಾಟೆ ಕಬಾಬ್ ತಯಾರಾಗುತ್ತದೆ. ಬಿಸಿ ಬಿಸಿ ಆದ ಬಟಾಟೆ ಕಬಾಬ್ ನ್ನು ಒಂದು ಟಿಶ್ಯೂ ಪೇಪರ್ ನಲ್ಲಿ ಹಾಕಬೇಕು. ಇದರಿಂದ ಎಣ್ಣೆಯನ್ನು ಟಿಶ್ಯೂ ಪೇಪರ್ ಹೀರಿಕೊಳ್ಳುತ್ತದೆ. ಏಕೆಂದರೆ ಕರಿದ ಪದಾರ್ಥಗಳ ಎಣ್ಣೆಯನ್ನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ.