ಲೋಳೆಸರ ಅಥವಾ ಆಲೋವೆರ ಈ ಗಿಡವು ಸಾಮಾನ್ಯವಾಗಿ ನಿತ್ಯ ಹಸಿರು ಬಣ್ಣದಿಂದ ಕೂಡಿದ್ದು ಇದು ಮೂಲತಃ ಅರೇಬಿಯನ್ ದೇಶದ ಸಸ್ಯವಾದರೂ ಇದನ್ನು ಪ್ರಪಂಚದ ಬಹಳಷ್ಟು ದೇಶಗಳಲ್ಲಿ ನಾವು ಕಾಣಬಹುದಾಗಿದೆ ಮತ್ತು ಬೆಳೆಯಲುಬಹುದು ಅಲ್ಲದೇ ನಾವು ಆಲೋವೆರ ಸಸ್ಯಗಳನ್ನು ಹೆಚ್ಚಾಗಿ ನಮ್ಮ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿಯೇ ಕಾಣಬಹುದು ಅಷ್ಟೇ ಅಲ್ಲದೇ ಈ ನಡುವೆಯಂತೂ ನಗರ ಪ್ರದೇಶಗಳಲ್ಲೂ ಸಹ ಹೆಚ್ಚಿನದಾಗಿ ಹಲವಾರು ಮನೆಗಳಲ್ಲಿ ನಾವು ಇದನ್ನು ನೋಡಬಹುದಾಗಿದೆ, ಅಲ್ಲದೇ ಇದು ಒಂದು ಆರೋಗ್ಯಕಾರಿ ಗಿಡವಾಗಿದ್ದು ಸೌಂದರ್ಯದ ಮೇಲೆ ಹೆಚ್ಚಿನ ಪ್ರಾಭಾವ ಬೀರುತ್ತದೆ ಬನ್ನಿ ಹಾಗಾದ್ರೆ ಆಲೋವೆರಾದ ಇನ್ನೂ ಹೆಚ್ಚಿನ ಆರೋಗ್ಯಕಾರಿ ಉಪಯೋಗಗಳ ಬಗ್ಗೆ ತಿಳಿದುಕೊಳ್ಳೋಣ.
ಆಲೋವೆರ ಅಂದರೆ ಲೋಳೆಸರವು ಹಲವಾರು ಉಪಯೋಗಗಳನ್ನು ಹೊಂದಿದ್ದು ಇದನ್ನು ಹೆಚ್ಚಾಗಿ ಸೌಂದರ್ಯ ವರ್ದಕವಾಗಿ ಬಳಸಲಾಗುತ್ತದೆ ಮತ್ತು ಈ ಲೋಳೆ ಸರವು 96% ಅಂಟು ಅಂಟಾದ ರಸವನ್ನು ಹೊಂದಿರುವುದರಿಂದ ಇದನ್ನು ಮುಖಕ್ಕೆ ಹಚ್ಚುವುದರಿಂದ ಮುಖದ ಚರ್ಮವನ್ನು ತೇವಾಂಶಯುಕ್ತವಾಗಿಡುತ್ತದೆ ಮತ್ತು ಚರ್ಮವನ್ನು ತುಂಬಾ ನುಣುಪಾಗಿಡಲು ಇದು ಬಹಳ ಸಹಕಾರಿಯಾಗಿರುತ್ತದೆ ಮತ್ತು ಇದನ್ನು ಕೂದಲಿಗೆ ಹಚ್ಚುವುದರಿಂದ ಕೂದಲನ್ನು ಬೇರಿನಿಂದಲೇ ಗಟ್ಟಿಯಾಗಿಸುತ್ತದೆ
ಅಲ್ಲದೇ ಆಲೋವೆರಾವನ್ನು ಮುಖಕ್ಕೆ ಹಚ್ಚುವುದರಿಂದ ಸೂರ್ಯನ ಕಿರಣಗಳಿಂದ ಮುಖದ ಚರ್ಮ ಸನ್ ಬರ್ನ್ ಆಗುವುದನ್ನು ಇದು ತಡೆಯುತ್ತದೆ, ಆಲೋವೆರಾದಲ್ಲಿ ವಿಟಮಿನ್ ಎ ವಿಟಮಿನ್ ಸಿ ಮತ್ತು ವಿಟಮಿನ್ ಇ ಹೆರಳವಾಗಿರುತ್ತವೆ ಅಲ್ಲದೇ ಆಲೋವೆರಾವು ಏಳು ಬಗೆಯ ಅಮೈನೋ ಆಸಿಡ್ ಗಳನ್ನು ಹೊಂದಿರುತ್ತದೆ ಆದ್ದರಿಂದಲೇ ಆಲೋವೆರವು ಹಲವಾರು ಬಗೆಯ ಚರ್ಮ ರೋಗಗಳಿಗೆ ರಾಮಬಾಣವಾಗಿದೆ.
ಆಲೋವೆರ ಕೇವಲ ಬಾಹ್ಯ ಉಪಯೋಗಗಳಿಗೆ ಮಾತ್ರವಲ್ಲದೆ ಆಂತರಿಕವಾದ ಉಪಯೋಗಗಳಿಗೂ ಇದು ಸಹಾಯಕಾರಿಯಾಗಿರುತ್ತದೆ ಅಲ್ಲದೇ ಆಯುರ್ವೇದ ಚಿಕಿತ್ಸೆಯಲ್ಲಿ ಇದನ್ನು ಹೆಚ್ಚಾಗಿ ಬಳಸಲಾಗುತ್ತದೆ ಆಲೋವೆರದ ರಸವನ್ನು ಸೇವನೆ ಮಾಡುವುದರಿಂದ ಮಾನವನ ದೇಹದಲ್ಲಿನ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಮತ್ತು ಮದುಮೆಹವನ್ನು ಇದು ನಿಯಂತ್ರಿಸುತ್ತದೆ ಕಣ್ಣಿನ ದೃಷ್ಟಿಯನ್ನು ಇದು ಹೆಚ್ಚಿಸುತ್ತದೆ ಮಾತ್ರವಲ್ಲದೇ ಜೀರ್ಣ ಕ್ರಿಯೆಗೆ ಸಹಾಯ ಮಾಡುತ್ತದೆ ಆದ್ದರಿಂದ ಆಲೋವೆರವು ನಮ್ಮಲ್ಲಿ ಸಿಗುವ ಒಂದು ಅಮೂಲ್ಯ ಗಿಡಮೂಲಿಕೆಯಾಗಿದೆ.