ಏರ್ ಡೆಕ್ಕನ್ ಕಂಪನಿಯ ಒಡೆಯರಾದ ಜಿ.ಆರ್ ಗೋಪಿನಾಥ್ ಅವರ ಜೀವನ ಸಾಧನೆಯನ್ನು ಈ ಲೇಖನದ ಮೂಲಕ ತಿಳಿಯೋಣ.
ಭಾರತೀಯ ಸೇನೆಯ ಓರ್ವ ಮಾಜಿ ನಿವೃತ್ತ ಕ್ಯಾಪ್ಟನ್, ಬರಹಗಾರರು, ಸಶಕ್ತ ರಾಜಕಾರಣಿ ಆದ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು 1951 ನವೆಂಬರ್ 15 ರಂದು ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ ಜನಿಸಿದರು ಆದರೆ ಅವರು ಬೆಳೆದಿದ್ದು ಹಾಸನ ಜಿಲ್ಲೆಯ ಗೊರೂರು ಎಂಬಲ್ಲಿ. ಇವರ ತಂದೆ ಶಾಲಾ ಶಿಕ್ಷಕರು. ಅವರ ತಂದೆಯ ಸಲಹೆಯಂತೆ ಚಿಕ್ಕಂದಿನಿಂದ ಗೋಪಿನಾಥ ಅವರಿಗೆ ಸೇನೆಗೆ ಸೇರುವ ಒಲವಿತ್ತು. 1962 ರಲ್ಲಿ ಬಿಜಾಪುರದ ಸೈನಿಕ ತರಭೇತಿ ಶಾಲೆಯಲ್ಲಿ ಪ್ರವೇಶ ದೊರೆಯಿತು. ಅಲ್ಲಿ 3 ವರ್ಷ ಕಠಿಣ ಹಾಗೂ ನುರಿತ ತರಭೇತಿ ಪಡೆದರು ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಶಿಕ್ಷಣವನ್ನು ಪೂರೈಸಿದರು.
ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲೂ ಸಹ ಸೈನಿಕ ತರಭೇತಿ ಪಡೆದು ಪದವಿ ಪಡೆದರು. ನಂತರ ಭಾರತೀಯ ಸೇನೆಯಲ್ಲಿ ಕ್ಯಾಪ್ಟನ್ ಹುದ್ದೆಗೆ ಏರಿದರು. 8 ವರ್ಷ ಸೇವೆ ಸಲ್ಲಿಸಿ ತಮ್ಮ 28 ನೆ ವಯಸ್ಸಿನಲ್ಲಿ ಸ್ವ ನಿವೃತ್ತಿಯನ್ನು ಪಡೆದು ಸ್ವಂತ ರೇಷಿಮೆ ಉದ್ದಿಮೆಯನ್ನು ಆರಂಭಿಸಿ ಹೊಸ ಹೊಸ ವಿಧಾನಗಳನ್ನು ಅನುಸರಿಸಿದರು ಅವರಿಗೆ ಕೃಷಿ ಇಲಾಖೆಯಿಂದ ಪ್ರಶಸ್ತಿ ಲಭಿಸಿದೆ. ನಂತರ ಹಾಸನದಲ್ಲಿ ಆಟೋ ಮೊಬೈಲ್ ಉದ್ದಿಮೆಯನ್ನು ಪ್ರಾರಂಭಿಸಿದರು.
ನಂತರ ಅವರು ವಾಯುಯಾನದ ಕಡೆ ಆಸಕ್ತಿ ಬೆಳೆಸಿಕೊಂಡರು. ಅವರು ಭಾರತದ್ದೆ ಆದ ಏರ್ ಲೈನ್ಸ್ ಸೇವೆಯನ್ನು ಜನರಿಗೆ ಒದಗಿಸುವ ಕನಸು ಕಂಡರು. 1996ರಲ್ಲಿ ಸ್ವದೇಶಿ ಕಮರ್ಷಿಯಲ್ ಹೆಲಿಕಾಪ್ಟರ್ ಸರ್ವಿಸ್ ಪ್ರಾರಂಭಿಸಿದರು ಅದಕ್ಕೆ ಡೆಕ್ಕನ್ ಏವಿಯೇಷನ್ ಎಂದು ಕರೆದರು. ಅದರ ಕೇಂದ್ರ ಕಚೇರಿಯನ್ನು ಬೆಂಗಳೂರಿನಲ್ಲಿ ಗೋಪಿನಾಥ್ ಅವರು ತೆರೆದರು. ನಂತರ ಕೊಚ್ಚಿ, ಕಲ್ಕತ್ತಾ, ಡೆಲ್ಲಿ, ಚೆನ್ನೈ ಮುಂತಾದ ಕಡೆ ಡೆಕ್ಕನ್ ಏವಿಯೇಷನ್ ಸೇವೆಯನ್ನು ಪ್ರಸರಿಸಿದರು.
ಈ ಸಂಸ್ಥೆಯ ಪ್ರಯಾಣದ ದರ ಉಳಿದ ಸಂಸ್ಥೆಗಳಿಗಿಂತ ಕಡಿಮೆ ಇತ್ತು, ಅದೇ ರೀತಿ ಕೆಲವು ಅನಗತ್ಯ ಸೇವೆಗಳನ್ನು ವಿಮಾನದಲ್ಲಿ ತೆಗೆಯಲಾಯಿತು. ಆದರೆ ನಂತರದ ದಿನಗಳಲ್ಲಿ ತಲೆ ಎತ್ತಿದ ಬೇರೆ ಬೇರೆ ಸಂಸ್ಥೆಗಳಿಂದ ಸ್ಪರ್ಧೆ ನಡೆದು ಅದರ ಆದಾಯ ದಿನೇ ದಿನೇ ಕಡಿಮೆಯಾಗಿ ನಷ್ಟ ಹೊಂದಿತು ಇದರಿಂದ 2007/2008 ರಲ್ಲಿ ಕಿಂಗ್ ಫಿಷರ್ ಜೊತೆ ತಮ್ಮ ಸಂಸ್ಥೆಯನ್ನು ವಿಲೀನ ಮಾಡಿಕೊಂಡರು. ನಂತರ ಗೋಪಿನಾಥ ಅವರು ತಮ್ಮ ಸಂಸ್ಥೆಯನ್ನು ಮುಚ್ಚಬೇಕಾಯಿತು. 2017 ರಲ್ಲಿ ನಡೆದ ಹರಾಜಿನಲ್ಲಿ ಗೆದ್ದ ಅವರ ಡೆಕ್ಕನ್ ಚಾರ್ಟರ್ ಯುಡಿಎಎನ್ ಸ್ಕೀಮ್ ನಡಿಯಲ್ಲಿ ಭಾರತದ 34 ಸ್ಥಳೀಯ ವಾಯು ರೂಟ್ ಗಳಲ್ಲಿ ಸಂಚರಿಸುವ ಅವಕಾಶ ಪಡೆಯಿತು. ಗುಜರಾತ್ ನಲ್ಲಿ ಗೋಪಿನಾಥ ಅವರ ಸೇವೆ ಪ್ರಧಾನವಾಗಿದೆ. ಗೋಪಿನಾಥ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಇವರ ರೋಚಕ ಜೀವನದ ಕಥೆಯನ್ನು ತಮಿಳು ಚಿತ್ರದ ಮೂಲಕ ತೋರಿಸಲಾಗಿದೆ.