AHVS Karnataka Recruitment 2024 ಪಶುಪಾಲನೆ ಮತ್ತು ಪಶುವೈದ್ಯ ಸೇವಾ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಹ ಮತ್ತು ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಆಸಕ್ತಿ ಹಾಗು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಮಾಡಲಾಗಿದೆ. ಆಸಕ್ತಿ ಹಾಗು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಲು ನಿಗದಿ ಮಾಡಿರುವ ದಿನಾಂಕದ ಒಳಗೆ ಅರ್ಜಿ ಸಲ್ಲಿಕೆ ಮಾಡಬೇಕು.

ಈ ಹುದ್ದೆಗಳಿಗೆ ಅಗತ್ಯ ಇರುವ ವಿದ್ಯಾ ಅರ್ಹತೆ ( Qualification ), ವೇತನ ಶ್ರೇಣಿ ( Age Limit ), ಅರ್ಜಿ ಶುಲ್ಕ ( Application Fees ) ಹುದ್ದೆಗಳ ವಿವರ, ಅಧಿಸೂಚನೆ ( Notification ) ಇತರೆ ಎಲ್ಲಾ ವಿವರವನ್ನು ತಿಳಿದ ನಂತರ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಬೇಕು.

ಹುದ್ದೆಗಳ ಹೆಸರು :- ಪಶು ವೈದ್ಯಾಧಿಕಾರಿಗಳು.
ಒಟ್ಟು ಹುದ್ದೆಗಳು :- 400.
ಅರ್ಜಿಗಳನ್ನು ಆನ್’ಲೈನ್ ಮೂಲಕ ಸಲ್ಲಿಕೆ ಮಾಡಬಹುದು.

ವಿದ್ಯಾ ಅರ್ಹತೆ :- ಅಭ್ಯರ್ಥಿಯು ಭಾರತದಲ್ಲಿ ಕಾನೂನು ರೀತ್ಯ ಸ್ಥಾಪಿಸಲಾದ ಯಾವುದೇ ಪಶುವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯ ಅಥವಾ ಕೃಷಿ ವಿಶ್ವವಿದ್ಯಾಲಯದಿಂದ ಬಿ. ವಿ. ಎಸ್ಸಿ / ಬಿ. ವಿ. ಎಸ್ಸಿ ಅಂಡ್ ಎಹೆಚ್ ಪದವಿಯನ್ನು ಪಡೆದಿರಬೇಕು.

ವಯೋಮಿತಿ :-ಅರ್ಜಿ ಸಲ್ಲಿಕೆ ಮಾಡಲು ನಿಗದಿ ಮಾಡಿರುವ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಪೂರೈಕೆ ಮಾಡಿರಬೇಕು.

  • ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ – ಗರಿಷ್ಠ 35 ವರ್ಷ.
  • ಪ್ರವರ್ಗ 2ಎ, 2ಬಿ, 3ಎ, 3ಬಿ ( 2A, 2B, 3A, 3B ) ಅಭ್ಯರ್ಥಿಗಳಿಗೆ – ಗರಿಷ್ಠ 38 ವರ್ಷ.
  • ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ( SC / ST ), ಪ್ರವರ್ಗ 1 ( Category 1 ) ಅಭ್ಯರ್ಥಿಗಳಿಗೆ – ಗರಿಷ್ಠ 40 ವರ್ಷ.

ವೇತನ ಶ್ರೇಣಿ :-ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ₹52,640 ರೂ. ವೇತನ ನೀಡಲಾಗುತ್ತದೆ.

ಆಯ್ಕೆ ವಿಧಾನ :- ಅಭ್ಯರ್ಥಿಗಳು ಪದವಿಯಲ್ಲಿ ಎಲ್ಲಾ ವರ್ಷಗಳಲ್ಲಿ ಗಳಿಸಿದ ಒಟ್ಟು ಶೇಕಡಾವಾರು ಅಂಕಗಳ ಅರ್ಹತೆ ಆಧಾರದ ಮೇಲೆ ಹಾಗು ಸರ್ಕಾರದ ಮೀಸಲಾತಿಗೆ ಅನುಗುಣವಾಗಿ ನಡೆಸಲಾಗುವುದು.

ಅರ್ಜಿ ಸಲ್ಲಿಕೆ ಮಾಡಲು ಕೊನೆಯ ದಿನಾಂಕ 24/06/2024.
ಅರ್ಜಿ ಸಲ್ಲಿಕೆ ಮಾಡಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.
https://ahvs.karnataka.gov.in/english ಆಸಕ್ತಿ ಹಾಗು ಅರ್ಹ ವ್ಯಕ್ತಿಗಳು ಅರ್ಜಿ ಸಲ್ಲಿಕೆ ಮಾಡಬಹುದು.

By

Leave a Reply

Your email address will not be published. Required fields are marked *