ನಾವಿವತ್ತು ಆಗಸ್ಟ ತಿಂಗಳಲ್ಲಿ ಯಾವ ಯಾವ ಹುದ್ದೆಗಳ ನೇಮಕಾತಿಗೆ ಅರ್ಜಿ ಕರೆಯಲಾಗಿದೆ ಕಾಲಿ ಇರುವ ಹುದ್ದೆಗಳ ಸಂಖ್ಯೆ ಎಷ್ಟು ಆ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ವಿದ್ಯಾರ್ಹತೆ ಎಷ್ಟಿರಬೇಕು ಮತ್ತು ಅರ್ಜಿ ಸಲ್ಲಿಸಲು ಇರುವ ಕೊನೆಯ ದಿನಾಂಕ ಇವುಗಳ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ.
ನಾವು ನಿಮಗೆ ತಿಳಿಸುತ್ತಿರುವ ಮೊದಲನೇ ಹುದ್ದೆ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ವಿವಿಧ ಟ್ರೇಡ್ ಮ್ಯಾನ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಇಲ್ಲಿ ಕಾಲಿ ಇರುವ ಒಟ್ಟು ಹುದ್ದೆಗಳು ಎರಡುನೂರಾಐವತ್ತು ಹುದ್ದೆಗಳು. ಈ ಒಂದು ಹುದ್ದೆಗೆ ಅರ್ಜಿಯನ್ನು ಸಲ್ಲಿಸುವವರು ಹತ್ತನೇ ತರಗತಿ ಉತ್ತೀರ್ಣವಾಗಿರಬೇಕು. ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ ಮುವತ್ತು ಆಗಸ್ಟ್ ಎರಡು ಸಾವಿರದ ಇಪ್ಪತ್ತೊಂದು.
ನಾವು ನಿಮಗೆ ತಿಳಿಸುತ್ತಿರುವ ಎರಡನೇ ಹುದ್ದೆ ಕೇಂದ್ರ ಸರ್ಕಾರದಿಂದ ಎಸ್.ಎಸ್.ಸಿ ಜಿ.ಡಿ ಹುದ್ದೆಗಳ ಬೃಹತ್ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಇಲ್ಲಿ ಕಾಲಿ ಇರುವ ಒಟ್ಟು ಹುದ್ದೆಗಳ ಸಂಖ್ಯೆ ಇಪ್ಪತ್ತೈದುಸಾವಿರದಎರಡು ನೂರಾಎಪ್ಪತ್ತೊಂದು ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಹತ್ತನೇ ತರಗತಿ ಪಾಸಗಿರುವವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮುವತ್ತೊಂದು ಆಗಸ್ಟ್ ಎರಡು ಸಾವಿರದ ಇಪ್ಪತ್ತೊಂದು.
ನಾವು ನಿಮಗೆ ತಿಳಿಸುತ್ತಿರುವ ಮೂರನೇ ಹುದ್ದೆ ಎಸ್.ಎಸ್.ಬಿ ಯಲ್ಲಿ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಇಲ್ಲಿ ಕಾಲಿ ಇರುವ ಒಟ್ಟು ಹುದ್ದೆಗಳ ಸಂಖ್ಯೆ ನೂರಾಹದಿನೈದು. ಪಿಯುಸಿ ಪಾಸಾಗಿರುವವರು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಇಪ್ಪತ್ತೆರಡು ಆಗಸ್ಟ್ ಎರಡು ಸಾವಿರದ ಇಪ್ಪತ್ತೊಂದು.
ನಾವು ನಿಮಗೆ ತಿಳಿಸುತ್ತಿರುವ ನಾಲ್ಕನೇ ಹುದ್ದೆ ಯಾವುದು ಎಂಬುದನ್ನು ನೋಡುವುದಾದರೆ ಆರ್ ಆರ್ ಸಿ ನೋರ್ಥ ರೈಲ್ವೆಯಲ್ಲಿ ಅಪರಂಟಿಸಿಫ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಇಲ್ಲಿ ಕಾಲಿ ಇರುವ ಒಟ್ಟು ಹುದ್ದೆಗಳ ಸಂಖ್ಯೆ ಒಂದುಸಾವಿರದಆರುನೂರಾ ಅರವತ್ನಾಲ್ಕು. ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಹತ್ತನೇ ತರಗತಿ ಪಾಸಾಗಿರಬೇಕು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಒಂದು ಸೆಪ್ಟಂಬರ್ ಎರಡು ಸಾವಿರದ ಇಪ್ಪತ್ತೊಂದು.
ನೋಡಿದಿರಲ್ಲ ಸ್ನೇಹಿತರೆ ಎಷ್ಟೊಂದು ಅವಕಾಶಗಳು ನಿಮಗಾಗಿ ಕಾಯುತ್ತಿದೆ ಎಂದು. ಈ ಮೇಲಿನ ಹುದ್ದೆಗಳಲ್ಲಿ ನಿಮಗೆ ಆಸಕ್ತಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಉದ್ಯೋಗವನ್ನು ಪಡೆದುಕೊಳ್ಳಿ ನಿಮ್ಮ ಸ್ನೇಹಿತರಿಗೂ ಮಾಹಿತಿ ತಿಳಿಸಿರಿ.