ರಾಜ್ಯ ಹಾಗೂ ಕೇಂದ್ರ ಸರ್ಕಾರದ ಹಲವು ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳು ಸಾಕಷ್ಟಿವೆ ಹಾಗೆಯೆ ಓದು ಮುಗಿಸಿ ಉದ್ಯೋಗಕ್ಕಾಗಿ ಪರದಾಡುತ್ತಿರುವ ಯುವಕ ಯುವತಿಯರ ಸಂಖ್ಯೆಯೂ ಹೆಚ್ಚಾಗುತ್ತಿದೆ ಇದೀಗ ನಿರುದ್ಯೋಗಿಗಳಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿಯನ್ನು ನೀಡಿದೆ. ಅಗ್ನಿಶಾಮಕ ಇಲಾಖೆಯಲ್ಲಿ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನಿಸುತ್ತಿದೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ
ಎಸ್ಎಸ್ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಪಾಸಾದವರಿಗೆ ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಉದ್ಯೋಗಕ್ಕಾಗಿ ಅರ್ಜಿ ಕರೆಯಲಾಗಿದೆ. ಈ ಇಲಾಖೆಯಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ಪೋಸ್ಟ್ 64 ಹುದ್ದೆಗಳು ಖಾಲಿ ಇವೆ, ಚಾಲಕ ತಂತ್ರಜ್ಞ 27 ಪೋಸ್ಟ್ ಖಾಲಿ ಇವೆ, ಅಗ್ನಿಶಾಮಕ ಚಾಲಕ 153 ಪೋಸ್ಟ್ ಖಾಲಿ ಇವೆ ಹಾಗೂ ಅಗ್ನಿಶಾಮಕ ಅಂದರೆ ಫೈರ್ ಮ್ಯಾನ್ 731 ಹುದ್ದೆಗೆ ಅರ್ಜಿ ಕರೆಯಲಾಗಿದೆ. ಈ ಹುದ್ದೆಗಳಿಗೆ ಕರ್ನಾಟಕದ ಎಲ್ಲ ಜಿಲ್ಲೆಯ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ ಒಟ್ಟಾರೆ 975 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. 2021 ರಲ್ಲಿ ನೇಮಕಾತಿಯನ್ನು ಮಾಡಿದ್ದರು ಅದಾದ ನಂತರ 2024ರಲ್ಲಿ ಅರ್ಜಿ ಕರೆಯಲಾಗಿದೆ. ಈ ಹುದ್ದೆಗಳಿಗೆ ನೇಮಕಾತಿಯಾದವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿಯೂ ಕೆಲಸ ಮಾಡಬಹುದು.
ನೇಮಕವಾದ ಅಭ್ಯರ್ಥಿಗಳಿಗೆ ಮಾಸಿಕ 33,450 ರೂಪಾಯಿಯಿಂದ 62,600 ರೂಪಾಯಿ ವೇತನವಿದೆ. ಪ್ರತಿ ವರ್ಷ ವೇತನವನ್ನು ಹೆಚ್ಚಿಗೆ ಮಾಡಲಾಗುತ್ತದೆ ಮೊದಲನೆ ವರ್ಷ 750 ರೂಪಾಯಿ ಎರಡನೆ ವರ್ಷ 800 ರೂಪಾಯಿ ಮೂರನೆ ವರ್ಷ 950 ರೂಪಾಯಿ ಹೆಚ್ಚಾಗುತ್ತದೆ. ಮೇಲೆ ತಿಳಿಸಿದ ನಾಲ್ಕು ಹುದ್ದೆಗಳಿಗೂ ಅರ್ಜಿ ಸಲ್ಲಿಸಲು ಅವಕಾಶವಿದೆ ಅಥವಾ ಬೇಕಾದ ಹುದ್ದೆಗು ಅರ್ಜಿ ಸಲ್ಲಿಸಬಹುದು ಆದರೆ ಆಯಾ ಹುದ್ದೆಗೆ ಇರುವ ಅರ್ಹತೆಯನ್ನು ಹೊಂದಿರಬೇಕು. ಅರ್ಜಿ ಸಲ್ಲಿಸಲು ಅಭ್ಯರ್ಥಿಗೆ ಇರುವ ಅರ್ಹತೆಗಳೆಂದರೆ ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ರಾಸಾಯನಶಾಸ್ತ್ರದಲ್ಲಿ ಪದವಿ ಪಡೆದಿರಬೇಕು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ 18 ಗರಿಷ್ಠ 28 ವರ್ಷ ವಯೋಮಿತಿಯನ್ನು ನೀಡಲಾಗಿದೆ, ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ವಯಸ್ಸಿನ ಸಡಿಲಿಕೆ ಹಾಗೂ ಎಸ್ ಸಿ ಅಭ್ಯರ್ಥಿಗಳಿಗೆ ಐದು ವರ್ಷ ಸಡಿಲಿಕೆ ಕೊಡಲಾಗಿದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಸಾಮಾನ್ಯ ಹಾಗೂ ಓಬಿಸಿ ಅಭ್ಯರ್ಥಿಗಳು 250 ರೂಪಾಯಿ ಅರ್ಜಿ ಶುಲ್ಕ ಎಸ್ಸಿ ಎಸ್ ಟಿ ಅಭ್ಯರ್ಥಿಗಳು ನೂರು ರೂಪಾಯಿ ಅರ್ಜಿ ಶುಲ್ಕವನ್ನು ಕೊಡಬೇಕು. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ದೈಹಿಕ ಪರೀಕ್ಷೆ ವೈದ್ಯಕೀಯ ಪರೀಕ್ಷೆ ಲಿಖಿತ ಪರೀಕ್ಷೆ ಹಾಗೂ ಸಂದರ್ಶನವಿರುತ್ತದೆ. ಆನ್ಲೈನಲ್ಲಿ ಅಜ್ಜಿ ಸಲ್ಲಿಸಲು ಅವಕಾಶವಿರುತ್ತದೆ ಅರ್ಜಿ ಸಲ್ಲಿಸುವ ದಿನಾಂಕವು ಇನ್ನು ನಿಗದಿಯಾಗಿಲ್ಲ ಶೀಘ್ರದಲ್ಲಿಯೆ ಅಧಿಸೂಚನೆ ಹೊರಡಿಸಲಾಗುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ ಅಗ್ನಿಶಾಮಕ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಪಡೆದುಕೊಳ್ಳಿರಿ. ಅರ್ಜಿಸಲ್ಲಿಸುವ ಲಿಂಕ್: https://ksfes.karnataka.gov.in/english