ಗ್ರಾಮಾಂತರ ಪ್ರದೇಶದ ಆರ್ಥಿಕ ಸುಧಾರಣೆಯಲ್ಲಿ ಕುರಿ ಮಹತ್ವದ ಪಾತ್ರವಹಿಸುತ್ತದೆ. ಕುರಿಯನ್ನು ಬಡವರ ಸಣ್ಣ ಮತ್ತು ಅತಿ ಸಣ್ಣ ರೈತರ ಕಿರು ಕಾಮಧೇನು ಎಂದು ಕರೆಯಬಹುದು. ಉಣ್ಣೆ, ಮಾಂಸ, ಚರ್ಮ, ಗೊಬ್ಬರ ಇತ್ಯಾದಿ ಉಪಯುಕ್ತ ವಸ್ತುಗಳಿಂದ ದೇಶದ ಆರ್ಥಿಕ ಸುಧಾರಣೆಯಲ್ಲಿ ಕುರಿ ಉತ್ತಮ ಪಾತ್ರವನ್ನು ವಹಿಸಿದೆ. ಕುರಿ ಸಾಕಾಣಿಕೆ ಸಣ್ಣ, ಅತಿ ಸಣ್ಣ ರೈತರ ಮತ್ತು ಕೃಷಿ ಕಾರ್ಮಿಕರ ಮುಖ್ಯ ಕಸುಬಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಬಡತನ ರೇಖೆಗಿಂತ ಕೆಳಮಟ್ಟದ ಕುಟುಂಬಗಳು ಹಾಗೂ ದುರ್ಬಲವರ್ಗದವರು ತಮ್ಮ ಜೀವನ ಆಧಾರಕ್ಕೆ ಆಡು ಸಾಕಾಣಿಕೆಯನ್ನು ಉತ್ತೇಜಿಸಲು ಆಡು, ಕುರಿ ಸಾಕಾಣಿಕೆಗೆ 45 ಸಾವಿರ ರೂಪಾಯಿ ಸಹಾಯಧನ ನೀಡಲು ರೈತರಿಂದ ಅರ್ಜಿ ಆಹ್ವಾನ ಮಾಡಲಾಗುತ್ತಿದ್ದು ಈ ಸೌಲಭ್ಯವನ್ನು ಒದಗಿಸಲಾಗುತ್ತಿದೆ. ಇದರ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
2021-22ನೇ ಸಾಲಿನ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ವತಿಯಿಂದ ವಿಶೇಷ ಘಟಕ ಯೋಜನೆಯಡಿಯಲ್ಲಿ ಧಾರವಾಡ ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಫಲಾನುಭವಿಗಳಿಗೆ ಕುರಿ ಸಾಕಾಣಿಕೆ ಮಾಡಲು ಸಹಾಯಧನವನ್ನು ನೀಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಯೋಜನೆಯಡಿಯಲ್ಲಿ ಜಿಲ್ಲೆಗೆ ಪರಿಶಿಷ್ಟ ಜಾತಿಗೆ -6 ಹಾಗೂ ಪರಿಶಿಷ್ಟ ಪಂಗಡಗಳಿಗೆ 2 ಹುಬ್ಬಳ್ಳಿ ಮತ್ತು ನವಲಗುಂದ ತಾಲೂಕಿನ ಫಲಾನುಭವಿಗಳಿಗೆ ಆಡು, ಕುರಿ ಸಾಕಾಣಿಕೆಗೆ ಸಹಾಯ ಧನ ನೀಡಲಾಗುವುದು. ಕುರಿ ಸಾಕಾಣಿಕೆಗೆ ಒಟ್ಟೂ ನಲವತ್ತೈದು ಸಾವಿರ ರೂಪಾಯಿ ಹಣ, ಅಂದರೆ ಕುರಿ ಅಥವಾ ಆಡು ಸಾಕಾಣಿಕೆಗೆ 40,500 ಹಾಗೂ ಆ ಫಲಾನುಭವಿಯ ವಂತಿಗೆ ಎಂದು 4500 ರೂಪಾಯಿ ಹೀಗೇ ಒಟ್ಟು 45000 ರೂಪಾಯಿ ಆರ್ಥಿಕ ಸೌಲಭ್ಯದೊಂದಿಗೆ ಸಹಾಯಧನ ನಿಡಲಾಗುವುದು. ಈ ನಿಗಮದ ತಮ್ಮ ಹೆಸರನ್ನು ನೋಂದಾವಣೆ ಮಾಡಿಕೊಂದಂತಹ ನೋಂದಾಯಿತ ಸದಸ್ಯರಿಗೆ ಮತ್ತು ಮಹಿಳೆಯರಿಗೆ ಮೊದಲ ಆದ್ಯತೆಯನ್ನು ನೀಡಲಾಗುವುದು ಎಂದು ತಾಲೂಕು ಸಹಾಯಕ ನಿರ್ದೇಶಕರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹಾಗಾದ್ರೆ ಈ ಅರ್ಜಿ ಸಲ್ಲಿಸಲು ಏನೆಲ್ಲಾ ದಾಖಲೆಗಳು ಬೇಕು? ಹೇಗೆ ಅರ್ಜಿ ಸಲ್ಲಿಸಬೇಕು ಹಾಗೂ ಯಾರೆಲ್ಲ ಅರ್ಜಿ ಸಲ್ಲಿಸಬಹುದು ಎನ್ನುವುದನ್ನು ನೋಡುವುದಾದರೆ ,
ಕುರಿ ಹಾಗೂ ಆಡು ಸಾಕಾಣಿಕೆ ಮಾಡಲು ಆಸಕ್ತಿ ಇರುವಂತಹ ಅಭ್ಯರ್ಥಿಗಳು ನಿಗದಿತ ನಮೂನೆಯ ಅರ್ಜಿಯನ್ನು ಸರಿಯಾದ ಮಾಹಿತಿಗಳ ಜೊತೆಗೆ ಭರ್ತಿ ಮಾಡಿಕೊಂಡು, ದಾಖಲೆಗಳ ಜೊತೆಗೆ ಆಯಾ ತಾಲೂಕಿನ ಸಹಾಯಕ ನಿರ್ದೇಶಕರು, ಪಶು ಆಸ್ಪತ್ರೆಗೆ ಸಲ್ಲಿಸಬೇಕು. ಇದಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜ್ಯಲೈ15 ಆಗಿರುತ್ತದೆ. ಇದರ ಜೊತೆಗೆ ಕುರಿ ಸಾಕಾಣಿಕೆ ಮಾಡುವವರಿಗೆ ಉಚಿತ ಟೆಂಟ್ ಹಾಗೂ ಪರಿಕರಗಳ ವಿತರಣೆಗೆ ಕೂಡಾ ಅರ್ಜಿ ಆಹ್ವಾನ ಮಾಡಲಾಗಿದೆ. ಈ ಅರ್ಜಿಯನ್ನು 2021-22 ನೇ ಸಾಲಿನ ಕರ್ನಾಟಕ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ವತಿಯಿಂದ ಎಸ್ಸಿ, ಎಸ್ಟಿ ಪಂಗಡದ ಸಂಚಾರಿ ಮತ್ತು ವಲಸೆ ಕುರಿಗಾರರಿಗೆ ಉಚಿತವಾಗಿ ಟೆಂಟ್ ಮತ್ತು ಅದಕ್ಕೆ ಸಂಬಂಧಿಸಿದಂತಹ ಪರಿಕರಗಳನ್ನು ವಿತರಣೆ ಮಾಡಲೂ ಸಹ ಅರ್ಜಿಯನ್ನು ಆಹ್ವಾನಿಸಲಾಗಿದೆ. ಇದಕ್ಕೂ ಸಹ ಜುಲೈ 15 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.
ಜಿಲ್ಲೆಯ ಒಟ್ಟೂ 10 ಫಲಾನುಭವಿಗಳಿಗೆ ಟೆಂಟ್ ವಿತರಿಸಲು ಗುರಿ ಹೊಂದಲಾಗಿದೆ. ಈ ಟೆಂಟ್ ಹಾಗೂ ಅದರ ಇತರೆ ಸೌಲಭ್ಯಗಳನ್ನು ಪಡೆಯಲು ಆಸಕ್ತ ಅರ್ಜಿದಾರರು ಕನಿಷ್ಟ 2 ಕುರಿ, ಮೇಕೆಗಳನ್ನು ಮತ್ತು ನಿಗಮದಿಂದ ನೀಡಲಾದ ಪಾಸ್ ಬುಕ್ ಇವುಗಳನ್ನು ಕಡ್ಡಾಯವಾಗಿ ಹೊಂದಿರಬೇಕು. ಒಂದುವೇಳೆ ಸಂಚಾರಿ ಅಥವಾ ವಲಸೆ ಕುರಿಗಾರನಾಗಿದ್ದು, ಸಂಘದ ಚಾಲ್ತಿ ಸದಸ್ಯರಾಗಿರುವ ಪ್ರಮಾಣ ಪತ್ರವನ್ನು ಹೊಂದಿರಬೇಕು. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಗ್ರಾಮಕ್ಕೆ ಸಂಬಂಧಿಸಿದ ಪಶು ವೈದ್ಯಾಧಿಕಾರಿಗಳ್ನು ಸಂಪರ್ಕಿಸಬಹುದು.
ಕುರಿ ಸಾಕಾಣಿಕೆ ಇದರ ಬಗ್ಗೆ ಮಾಹಿತಿ ನೀಡಲು ಉಚಿತ ಸಹಾಯವಾಣಿ ಸೌಲಭ್ಯ ಕೂಡಾ ಇದೆ. ರೈತರು ದೂರವಾಣಿ ಸಂಖ್ಯೆ ಫಾರ್ಮರ್ ಟಾಲ್ ಫ್ರೀ ನಂಬರ್ 1800 425 0012 ಅಥವಾ 080-23417100 ಈ ನಂಬರ್ ಗೆ ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಕರೆ ಮಾಡಿ ಪಶುವೈದ್ಯರು ಮತ್ತು ಪಶುಸಂಗೋಪನೆ ಇಲಾಖೆಯ ಅಧಿಕಾರಿಗಳಿಂದ ಅಗತ್ಯ ಮಾಹಿತಿ ಪಡೆಯಬಹುದು. ಪಶುಪಾಲನೆ, ಕುರಿ ಸಾಕಾಣಿಕೆ ಅಷ್ಟೇ ಅಲ್ಲ, ಮೇಕೆ ಸಾಕಾಣಿಕೆ, ಕೋಳಿ ಸಾಕಾಣಿಕೆ, ಹೈನುಗಾರಿಕೆ, ಮೊಲ ಸಾಕಾಣಿಕೆ ಹಾಗೂ ಹಂದಿ ಸಾಕಾಣಿಕೆ ಕುರಿತು ಕೂಡಾ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದು. ಇದಕ್ಕಾಗಿ ಕರೆ ಮಾಡಿದ ಯಾರೊಬ್ಬರೂ ಕೂಡಾ ಯಾವುದೇ ಕರೆ ಶುಲ್ಕವನ್ನು ಪಾವತಿಸುವ ಅಗತ್ಯತೆ ಇರುವುದಿಲ್ಲ. ಪಶು ಇಲಾಖೆಯ ತಜ್ಞರಿಂದ ಮಾಹಿತಿ ಪಡೆಯಲು ಬಯಸಿದ್ದರೆ ಈ ಉಚಿತ ಸಹಾಯವಾಣಿಗೆ ಕರೆ ಮಾಡಿದರೆ ಸಾಕು ನಿಮ್ಮ ಜಿಲ್ಲೆಯ, ತಾಲೂಕಿನ ಪಶು ಇಲಾಖೆಯ ಸಿಬ್ಬಂದಿಯೊಂದಿಗೆ ಸಂಪರ್ಕ ನೀಡಲಾಗುವುದು. ನಿಮಗೆ ಬೇಕಾದ ಮಾಹಿತಿ ಪಶು ಇಲಾಖೆಯ ಸಿಬ್ಬಂದಿಗಳಿಗೆ ಮನೆಯಲ್ಲಿಯೇ ಕುಳಿತು ಪಡೆಯಬಹುದು. ವಾಟ್ಸಪ್ ನಂಬರ್ ನಿಂದ ಮಾಹಿತಿ ಪಡಯಲು ಇಚ್ಚಿಸುವವರು
9483914000 ಈ ನಂಬರ್ ಗೆ ಸಂಪರ್ಕ ಮಾಡಬಹುದು.
ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್
ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466