12 ರಾಶಿಗಳ ಮೇಲೆ ಗ್ರಹಗಳ ಸಂಚಾರ ಪ್ರಭಾವ ಬೀರುತ್ತದೆ. ಒಂದೇ ರಾಶಿಯಲ್ಲಿ ಕೆಲವು ಗ್ರಹಗಳು ಸೇರುವ ಕಾರಣ ಕೆಲವೊಂದು ಯೋಗಗಳು ರೂಪುಗೊಳ್ಳುತ್ತವೆ. ಸರಿ ಸುಮಾರು ದಶಕಗಳ ನಂತರ ಮಕರ ರಾಶಿಯಲ್ಲಿ ಆದಿತ್ಯ ಮಂಗಳ ರಾಜಯೋಗ ಸೃಷ್ಟಿಯಾಗಿದೆ. ಮಂಗಳ ಗ್ರಹ ಹಾಗೂ ರವಿ ಗ್ರಹದ ಸಂಯೋಗದಿಂದ ಸೃಷ್ಟಿಯಾಗಿರುವ ಆದಿತ್ಯ ಮಂಗಳ ರಾಜಯೋಗ. ಕೆಲವು ರಾಶಿಗಳಿಗೆ ಹೆಚ್ಚಿನ ಶುಭ ಫಲಗಳನ್ನು ಕೊಡುತ್ತದೆ. ಈ ಅವಧಿಯಲ್ಲಿ ಈ ರಾಶಿಯವರ ವೃತ್ತಿ ಮತ್ತು ವ್ಯವಹಾರ ವೃದ್ಧಿ ಹೊಂದುತ್ತದೆ. ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಂಗಳ ಗ್ರಹ ಮಕರ ರಾಶಿಯನ್ನು ಪ್ರವೇಶ ಮಾಡುತ್ತಾನೆ.

ಇದರಲ್ಲಿ ಪಂಚಮಹಾಪುರುಷ ಯೋಗ ಕೂಡ ಒಂದು ಎಂದು ಪರಿಗಣನೆ ಮಾಡಲಾಗಿದೆ. ಮಕರ ರಾಶಿಯಲ್ಲಿ ಆಸಕ್ತಿದಾಯಕ ರಾಜಯೋಗ ಸೃಷ್ಟಿಯಾಗುತ್ತದೆ. ಇದು ಮಕರ ರಾಶಿಯಲ್ಲಿ ಸಂಭವಿಸುತ್ತಿದೆ, ಮಂಗಳ ಗ್ರಹ ಮಕರ ರಾಶಿಯನ್ನು ಪ್ರವೇಶ ಮಾಡುವ ಕಾರಣ, ಆದಿತ್ಯ ಮಂಗಳ ರಾಜಯೋಗ ಸೃಷ್ಟಿಯಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಆದಿತ್ಯ ಮಂಗಳ ರಾಜಯೋಗದ ಪ್ರಭಾವ ಎಲ್ಲಾ ರಾಶಿಗಳ ಮೇಲೆ ಇರುತ್ತದೆ.

ಆದರೆ, 3 ರಾಶಿಗಳ ಮೇಲೆ ಹೆಚ್ಚಾಗಿ ಇರುತ್ತದೆ. ಅವರ ಅದೃಷ್ಟ ಈ ಸಮಯದಲ್ಲಿ ವೃದ್ಧಿ ಆಗುತ್ತದೆ. ಅನಿರೀಕ್ಷಿತ ಧನ ಆಗಮನವಾಗುತ್ತದೆ ಅದರಿಂದ ಆರ್ಥಿಕ ಸ್ಥಿತಿ ಕೂಡ ಉತ್ತಮವಾಗುತ್ತದೆ.

ಆ ಅದೃಷ್ಟವಂತ ರಾಶಿಗಳು ಯಾವುವು ಎಂದು ತಿಳಿಯೋಣ.

ಮೇಷ ರಾಶಿ :-ಆದಿತ್ಯ ಮಂಗಳ ರಾಜಯೋಗ ಮೇಷ ರಾಶಿಯವರಿಗೆ ಹೆಚ್ಚು ಲಾಭದಾಯಕ. ಈ ಅವಧಿಯಲ್ಲಿ ಆರ್ಥಿಕ ಲಾಭ ಲಭಿಸುತ್ತದೆ. ಅದೇ ಅವಧಿಯಲ್ಲಿ, ಸಾಮಾಜಿಕ ಪ್ರತಿಷ್ಠೆ ಹೆಚ್ಚಾಗುತ್ತದೆ ಹಾಗೂ ಆರ್ಥಿಕ ಸ್ಥಿತಿ ಅಭಿವೃದ್ಧಿ ಆಗುತ್ತದೆ. ಈ ಸಮಯ ಉದ್ಯಮಿಗಳಿಗೆ ಹೆಚ್ಚು ಶ್ರೇಷ್ಠವಾಗಿದೆ. ಈ ಸಮಯದಲ್ಲಿ, ವ್ಯಾಪಾರ ವ್ಯವಹಾರಗಳಲ್ಲಿ ಹಿಂದೆಗಿಂತ ಹೆಚ್ಚು ಲಾಭ ಪಡೆಯಬಹುದು. ವಿವಾಹಿತರ ಕೌಟುಂಬಿಕ ಜೀವನ ಹೆಚ್ಚು ಸುಖಕರವಾಗಿ ಇರುತ್ತದೆ. ಈ ಅವಧಿಯಲ್ಲಿ ಮೇಷ ರಾಶಿಯವರ ಆತ್ಮವಿಶ್ವಾಸ ವೃದ್ದಿಯಾಗುತ್ತದೆ. ಈ ಕಾಲದಲ್ಲಿ ಪ್ರಮುಖ ವ್ಯಕ್ತಿಗಳನ್ನು ಭೇಟಿ ಮಾಡವ ಅವಕಾಶ ಇರುತ್ತದೆ.

ಧನಸ್ಸು ರಾಶಿ :- ಧನು ರಾಶಿಯವರಿಗೆ ಆದಿತ್ಯ ಮಂಗಳ ರಾಜಯೋಗ ಹೆಚ್ಚು ಶುಭ ಫಲಗಳನ್ನು ತರುತ್ತದೆ. ಈ ಅವಧಿಯಲ್ಲಿ ಎಲ್ಲಾ ಇಷ್ಟಾರ್ಥಗಳು ಈಡೇರುತ್ತದೆ. ವೃತ್ತಿಜೀವನದಲ್ಲಿ ಯಶಸ್ಸು ಸಿಗುತ್ತದೆ. ಇದೆ ಅವಧಿಯಲ್ಲಿ, ಅನಿರೀಕ್ಷಿತ ಆರ್ಥಿಕ ಲಾಭ ಲಭಿಸುತ್ತದೆ. ಧೈರ್ಯ ಮತ್ತು ಶೌರ್ಯ ಕೂಡ ಹೆಚ್ಚಾಗುತ್ತದೆ. ಈ ಅವಧಿಯಲ್ಲಿ ಧನು ರಾಶಿಯವರಿಗೆ ಗೌರವ ಮತ್ತು ಪ್ರತಿಷ್ಠೆ ಲಭ್ಯವಾಗುತ್ತದೆ. ದೀರ್ಘ ಕಾಲದಿಂದ ಬಾಕಿ ಉಳಿದ ಯೋಜನೆಗಳು ನೆರವೇರಲಿದೆ. ಇದರಿಂದ ಉನ್ನತ ಅಧಿಕಾರಿಗಳಿಂದ ಪ್ರಶಂಸೆ ಕೂಡ ಸಿಗುತ್ತದೆ. ಈ ಅವಧಿಯಲ್ಲಿ, ಆರ್ಥಿಕ ಪರಿಸ್ಥಿತಿ ಕೂಡ ಸುಧಾರಿಸುತ್ತದೆ.

ತುಲಾ ರಾಶಿ :- ತುಲಾ ರಾಶಿಯವರಿಗೆ ಆದಿತ್ಯ ಮಂಗಳ ರಾಜಯೋಗ ಹೆಚ್ಚು ಉಪಯುಕ್ತ ಆಗುತ್ತದೆ. ಈ ಸಮಯದಲ್ಲಿ ನೂತನ ಕೆಲಸಗಳಲ್ಲಿ ಗೆಲುವನ್ನು ಸಾಧಿಸುವ ಸಾಧ್ಯತೆ ಇರುತ್ತದೆ. ಈ ಅವಧಿಯಲ್ಲಿ ಹೊಸ ವಾಹನ ಮತ್ತು ಆಸ್ತಿಯನ್ನು ಸಹ ಖರೀದಿ ಮಾಡಬಹುದು. ಅಲ್ಲದೆ, ಈ ಅವಧಿಯಲ್ಲಿ ಭೌತಿಕ ಆನಂದವನ್ನು ಪಡೆಯುವರು. ಈ ಕಾಲ ವಿದ್ಯಾರ್ಥಿಗಳಿಗೆ ಶುಭ ಫಲ ತರುತ್ತದೆ. ಅಂದರೆ,ಯಾವುದೇ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗೆಲುವು ಸಿಗುತ್ತದೆ. ಬೇರೆ ಬೇರೆ ಕ್ಷೇತ್ರಗಳಲ್ಲಿ ಅತ್ಯುನ್ನತ ಅವಕಾಶಗಳು ಒದಗಿ ಬರುತ್ತದೆ. ಸಾಮಾಜಿಕ ಪ್ರತಿಷ್ಠೆ ಸಹ ಹೆಚ್ಚಳ ಆಗುತ್ತದೆ. ಇವು ರಾಶಿಗಳ ಗೋಚಾರ ಫಲಗಳು ಅಷ್ಟೇ. ಜನ್ಮ ಜಾತಕಕ್ಕೆ ಮತ್ತು ಇದಕ್ಕೆ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!