ಇನ್ನೊಬ್ಬರು ಕಷ್ಟದಲ್ಲಿದ್ದಾಗ ಸಹಾಯ ಮಾಡುವುದು ಮನುಷ್ಯ ಧರ್ಮ. ಇನ್ನೊಬ್ಬರ ಸಂತೋಷದಲ್ಲಿ ನಾವು ನಮ್ಮ ಸಂತೋಷವನ್ನು ಕಾಣಬೇಕು. ಹಣವಿರುವವರು ಸಹಾಯ ಮಾಡಬೇಕು ಅದರಂತೆ ಸಿನಿಮಾ ನಟಿಯೊಬ್ಬರು ತಮ್ಮ ಮನೆಯ ಕೆಲಸದವಳ ಪ್ರೀತಿಗೆ ಮನೆಯನ್ನು ಖರೀದಿಸಿ ಕೊಟ್ಟಿದ್ದಾರೆ. ಹಾಗಾದರೆ ಆ ನಟಿ ಯಾರು, ಅವರ ಪ್ರೀತಿ ಹೇಗಿದೆ ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಕಷ್ಟವನ್ನು ಸಹಿಸಿ ಖುಷಿಯನ್ನು ಹಂಚಬೇಕು ಎನುತ್ತಾರೆ ಏಕೆಂದರೆ ಈ ಪ್ರಪಂಚದಲ್ಲಿ ಯಾರು ಶಾಶ್ವತವಲ್ಲ. ಇವತ್ತು ನಮ್ಮದಾಗಿದ್ದು, ನಾಳೆ ಬೇರೆ ಯಾರದ್ದೋ ಆಗಿರುತ್ತದೆ. ಒಬ್ಬರಿಗೆ ಸಹಾಯ ಮಾಡಿ ಅವರಿಗಾಗುವ ಸಂತೋಷ ನೋಡಿ ನಮಗೂ ಸಂತೋಷ ಆಗುತ್ತದೆ. ರೋಮನಾ ಪಿಲಿಫೈನ್ಸ್ ದೇಶದ ಖ್ಯಾತ ನಟಿ ಇವರ ಮನೆಯಲ್ಲಿ ವಿಲ್ಮಾ ಎಂಬ ಮಹಿಳೆ ಸುಮಾರು 17 ವರ್ಷಗಳ ಕಾಲ ಕೆಲಸ ಮಾಡುತ್ತಿದ್ದರು ಅಷ್ಟೇ ಅಲ್ಲದೆ ನಟಿಯನ್ನು ಹಾಗೂ ಅವರ ಮನೆಯವರನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಳು. ವಿಲ್ಮಾ ಅವರಿಗೆ ಸ್ವಂತ ಮನೆ ಇರಲಿಲ್ಲ ಅಲ್ಲದೆ ಮನೆಯನ್ನು ಕೊಂಡು ಕೊಳ್ಳುವಷ್ಟು ಆರ್ಥಿಕ ಸ್ಥಿತಿವಂತರು ಅಲ್ಲ. ಇದನ್ನು ತಿಳಿದ ನಟಿ ರೋಮನಾ ತನ್ನ ಗಂಡನ ಜೊತೆ ಕುಳಿತು ಮಾತನಾಡಿ ವಿಲ್ಮಾ ಅವರಿಗೆ ಒಂದು ಮನೆಯನ್ನು ಖರೀದಿ ಮಾಡಿ ಕೊಡೋಣ ಎಂದು ನಿರ್ಧಿರಿಸಿ ಅದರಂತೆ ಎರಡು ಅಂತಸ್ತಿನ ಮನೆಯನ್ನು ವಿಲ್ಮಾ ಅವರಿಗೆ ಖರೀದಿ ಮಾಡಿದರು. ಒಳ್ಳೆಯ ಆಹಾರ ಮಾಡಿ ನಮ್ಮನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ ಮನೆ ಕೆಲಸದಾಕೆಯನ್ನು ಸಂತೋಷವಾಗಿ ಇರಿಸಲು ರೋಮನಾ ಮನೆ ಖರೀದಿಸಿದರು.

ಒಂದು ದಿನ ರೋಮನಾ ವಿಲ್ಮಾ ಅವರಿಗೆ ಫೋನ್ ಮಾಡಿ ಒಂದು ಹೊಸ ಮನೆಯನ್ನು ನಮಗಾಗಿ ಖರೀದಿ ಮಾಡಿದ್ದೇವೆ ನೀನು ಒಂದು ಬಾರಿ ಬಂದು ನೋಡು ಮನೆಯೊಳಗೆ ಹೇಗಿದೆ ಹಾಗೂ ಮನೆಯ ಡಿಸೈನ್ ಚೇಂಜ್ ಮಾಡಬೇಕು ಎಂದರೆ ಸಲಹೆ ಕೊಡು ಎಂದು ಕರೆದರು. ನಟಿಯ ಮಾತಿನಂತೆ ವಿಲ್ಮಾ ಮನೆಯ ಹತ್ತಿರ ಹೋಗುತ್ತಾರೆ ಮನೆಯ ಒಳಗೆ ಹೋಗಿ ಅದು ಚೇಂಜ್ ಮಾಡಿದರೆ ಚೆನ್ನಾಗಿರುತ್ತದೆ, ಇದು ಚೇಂಜ್ ಮಾಡಿದರೆ ಚೆನ್ನಾಗಿರುತ್ತದೆ ಎಂದು ಸಲಹೆ ಕೊಟ್ಟಳು. ನಂತರ ಮೊದಲನೇ ಅಂತಸ್ತಿನ ಬೆಡ್ ರೂಮಿಗೆ ಹೋದಾಗ ವಿಲ್ಮಾ ಅವರು ಕಣ್ಣೀರು ಹಾಕುತ್ತಾರೆ ಏಕೆಂದರೆ ಆ ರೂಮಿನಲ್ಲಿ ಈ ಮನೆ ನಿಮಗಾಗಿ ಎಂದು ಬರೆಯಲಾಗಿತ್ತು ಅದನ್ನು ನೋಡಿ ವಿಲ್ಮಾ ಅವರಿಗೆ ನಂಬಲಾಗಲಿಲ್ಲ ಹಾಗೂ ಸಂತೋಷವಾಗಿ ಕಣ್ಣೀರು ಹಾಕಿದಳು ಆಕೆಯ ಸಂತೋಷ ಭಾಷ್ಪವನ್ನು ನೋಡಿ ನಟಿ ರೋಮನಾ ಅವರ ಕಣ್ಣಿನಲ್ಲಿ ನೀರು ತುಂಬಿತು ನಟಿ ವಿಲ್ಮಾ ಅವರನ್ನು ಅಪ್ಪಿಕೊಂಡರು ಆ ಕ್ಷಣ ಜೀವನದ ಅಪರೂಪದ ಕ್ಷಣವಾಗಿದೆ. ಜೀವನ ಪೂರ್ತಿ ಮರೆಯಲಾಗುವ ಸಮಯವಾಗಿದೆ. ನಟಿ ರೋಮನಾ ಅವರು ತಮ್ಮ ಸಂತೋಷವನ್ನು ಬೇರೆಯವರಿಗೆ ಹಂಚಿ ತಾವು ಸಂತೋಷವನ್ನು ಅನುಭವಿಸಿದರು. ಈ ಘಟನೆ ಕೇಳಿದರೆ ಅಚ್ಚರಿಯಾಗುತ್ತದೆ ಅಲ್ಲವೇ. ನಾವು ಸಹ ಬಡವರಿಗೆ ಸಹಾಯ ಮಾಡಬೇಕು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!