ಬೆಳ್ಳಿತೆರೆಯೇ ಇರಲೀ ಕಿರುತೆರೆಯೇ ಇರಲೀ, ಇಲ್ಲಿ ಕಲಾಸಕ್ತರು ಕಲಾವಿದರನ್ನು ಪಾತ್ರದ ಮೂಲಕ ಗುರುತಿಸುವುದು ಸಹಜ. ಹೀಗೆ ಅಗ್ನಿಸಾಕ್ಷಿ ಧಾರಾವಾಹಿಯಿಂದ ಬಹಳ ಫೇಮಸ್ ಅದವರು ವೈಷ್ಣವಿ. ಇವರ ಹೆಸರು ವೈಷ್ಣವಿ ಆದರೂ ಜನ ಇಂದಿಗೂ ಇವರನ್ನು ಸನ್ನಿಧಿ ಅಂತಲೇ ಗುರುತಿಸುತ್ತಾರೆ. ವೈಷ್ಣವಿ ಅವರು ಬಿಗ್ ಬಾಸ್ ಕನ್ನಡ ಸೀಸನ್ 8ರ ಸ್ಪರ್ಧಿಯಾಗಿ ಮತ್ತು ಜನಪ್ರಿಯರಾದರು. ಬಿಗ್ ಬಾಸ್ ಮನೆಯ ಇತರೆ ಸ್ಪರ್ಧಿಗಳಿಗಿಂತ ಭಿನ್ನವಾಗಿದ್ದರು ವೈಷ್ಣವಿ. ಅವರ ನಡೆ ನುಡಿ ಧರಿಸುವ ಬಟ್ಟೆ ಎಲ್ಲವೂ ವೀಕ್ಷಕರಿಗೆ ಬಹಳ ಇಷ್ಟವಾಗಿದೆ. ಬಿಗ್ ಬಾಸ್ ಮನೆಯಲ್ಲಿ ಬಹಳ ಸರಳವಾಗಿದ್ದ ವೈಷ್ಣವಿ ಅವರ ಲೈಫ್ ಸ್ಟೈಲ್ ನಿಜ ಜೀವನದಲ್ಲಿ ಹೇಗಿದೆ ಎಂದು ತಿಳಿದುಕೊಳ್ಳೋಣ.
ವೈಷ್ಣವಿ ಅವರ ಪೂರ್ತಿ ಹೆಸರು ವೈಷ್ಣವಿ ಗೌಡ. ಇವರ ತಂದೆ ರವಿ ಕುಮಾರ್ ಗೌಡ, ತಾಯಿ ಭಾನು ರವಿಕುಮಾರ್. ವೈಷ್ಣವಿ ಅವರು ಹುಟ್ಟಿದ್ದು ಫೆಬ್ರವರಿ 20, 1992 ರಲ್ಲಿ. ಇವರು ಓದಿದ್ದು ಬೆಳೆದಿದ್ದು ಎಲ್ಲವು ಬೆಂಗಳೂರಿನಲ್ಲೇ. ವೈಷ್ಣವಿ ಅವರು ಬಿಎ ಪದವಿ ಪಡೆದಿದ್ದಾರೆ, ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದರು. ಕಾಲೇಜು ದಿನಗಳಲ್ಲೇ ವೈಷ್ಣವಿ ಅವರಿಗೆ ಮಾಡೆಲಿಂಗ್ ನಲ್ಲಿ ಆಸಕ್ತಿ ಇತ್ತು. ವೃತ್ತಿಯಲ್ಲಿ ಇವರು ನಟಿ, ಮಾಡೆಲ್ ಮತ್ತು ನಿರೂಪಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ವೈಷ್ಣವಿ ಎನ್ನುವುದಕ್ಕಿಂತ ಸನ್ನಿಧಿ ಎಂದರೆ ಇನ್ನಷ್ಟು ಜನರಿಗೆ ಇವರು ಯಾರೆಂದು ಅರ್ಥ ಆಗುತ್ತದೆ. ‘ಅಗ್ನಿಸಾಕ್ಷಿ’ಯ ಈ ಕ್ಯೂಟ್ ಚಲುವೆ ಕನ್ನಡದ ಪ್ರೇಕ್ಷಕರಿಗೆ ಸನ್ನಿಧಿಯಂತಲೇ ಚಿರ ಪರಿಚಿತ ಕನ್ನಡ ಕಿರುತೆರೆ ಲೋಕದ ಜನಪ್ರಿಯ ನಟಿ ಇವರು. ಅಗ್ನಿ ಸಾಕ್ಷಿ ಸೀರಿಯಲ್ ಮೂಲಕ ಮನೆ ಮಾತಾಗಿರುವ ವೈಷ್ಣವಿ ಹಲವು ಉತ್ಪನ್ನಗಳ ರಾಯಭಾರಿ ಆಗಿಯೂ ಕೆಲಸ ಮಾಡಿದ್ದಾರೆ. ಜೀ ಕನ್ನಡದ ದೇವಿ ಸೀರಿಯಲ್‌ನಿಂದ ಇವರ ಕಿರುತೆರೆ ಪಯಣ ಆರಂಭವಾಯಿತು. ನಂತರ ಪುನರ್‌ವಿವಾಹದಲ್ಲಿ ನಟಿಸಿ ಅಗ್ನಿಸಾಕ್ಷಿ ಸೀರಿಯಲ್‌ನ ಸನ್ನಿಧಿಯಾಗಿ ಆಯ್ಕೆಗೊಂಡರು. ಈ ಪಾತ್ರದ ಮೂಲಕ ಅಪಾರ ಜನಮನ್ನಣೆ ಪಡೆದರು.
ಒಟ್ಟಿನಲ್ಲಿ, ಬರೋಬ್ಬರಿ 10ಕ್ಕೂ ಹೆಚ್ಚು ವರ್ಷಗಳ ಹಿಂದೆ ಸೀರಿಯಲ್ ಲೋಕದಲ್ಲಿ ನನ್ನ ಪ್ರಯಾಣ ಪ್ರಾರಂಭಿಸಿ ಇಂದಿಗೂ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಇದರಿಂದ ಅವರಿಗೆ ಅಪಾರ ಅಭಿಮಾನಿಗಳ ಪ್ರೀತಿ ಸಿಕ್ಕಿದೆ. ಅವರಲ್ಲಿರುವ ಪ್ರತಿಭಾ ಪ್ರದರ್ಶನಕ್ಕೆ ತಕ್ಕ ವೇದಿಕೆ ಹಾಗೂ ಕಲಾದೇವಿಯ ಕೃಪೆಯೂ ದೊರಕಿದೆ. ವೈಷ್ಣವಿ ಗೌಡ ಅವರು ಕನ್ನಡ ಧಾರಾವಾಹಿ ಮತ್ತು ಚಲನಚಿತ್ರ ನಟಿಯಾಗಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಜೊತೆಗೆ 2019 ರಲ್ಲಿ ಗಿರಗಿಟ್ಲೆ ಎನ್ನುವ ಸಿನಿಮಾ ಮೂಲಕ ಬೆಳ್ಳಿತೆರೆಗೂ ಎಂಟ್ರಿ ಕೊಟ್ಟಿದ್ದಾರೆ. ಇವರು ಬಿಗ್ ಬಾಸ್ ಎಂಟರ ಟಾಪ್-೪ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದರು. ಇವರು ಇನ್ಸ್ಟಾಗ್ರಾಂ ನಲ್ಲಿ ಒಂದು ಮಿಲಿಯನ್(ಹತ್ತು ಲಕ್ಷ) ಹಿಂಬಾಲಕರನ್ನು ಹೊಂದಿದ್ದಾರೆ.
ವೈಷ್ಣವಿ ಅವರ ಫೇವರೆಟ್ ಬಣ್ಣಗಳು ವೈಟ್ ಮತ್ತು ಕೆಂಪು. ಇವರ ಇಷ್ಟದ ಸ್ಥಳ ಚಿಕ್ಕಮಗಳೂರು. ಇವರ ಫೇವರೆಟ್ ಊಟ ಬಿರಿಯಾನಿ ಮತ್ತು ಮಸಾಲೇ ದೋಸೆ. ಇವರ ಬಳಿ Hyundai i20 ಕಾರ್ ಇದೆ. ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಒಂದು ವಾರಕ್ಕೆ ವೈಷ್ಣವಿ ಅವರಿಗೆ ಸುಮಾರು 90 ಸಾವಿರ ರೂಪಾಯಿ ಸಂಭಾವನೆ ನೀಡಲಾಗುತ್ತಿತ್ತು. ಇವರ ಒಟ್ಟು ಆಸ್ತಿ 3 ರಿಂದ 4 ಕೋಟಿ ರೂಪಾಯಿಗಳು. ಹಾಗೇ ಇವರು ಬೆಂಗಳೂರಿನಲ್ಲಿ ತಮ್ಮದೇ ಆದ ಸ್ವಂತ ಮನೆಯನ್ನು ಹೊಂದಿದ್ದಾರೆ. ಈ ಮನೆಯನ್ನು ಅವರು ದುಡಿದ ಹಣವನ್ನು ಖರ್ಚುಮಾಡಿ ಕಟ್ಟಿಸಿದ್ದಾರೆ. ಈ ಮನೆಯನ್ನು ಅವರು ಈಗಿನ ಕಾಲಕ್ಕೆ ತಕ್ಕಂತೆ ಆಧುನಿಕ ಶೈಲಿಯಲ್ಲಿ ನಿರ್ಮಿಸಿದ್ದಾರೆ. ಒಟ್ಟಾರೆ ಕನ್ನಡದ ಜನಪ್ರಿಯ ಸೀರಿಯಲ್ ನಟಿಯರಲ್ಲಿ ಒಬ್ಬರಾದ ವೈಷ್ಣವಿ ಗೌಡ ಅವರು ಈ ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ತಮ್ಮ ನಟನೆಯ ಮೂಲಕ ಇನ್ನೂ ಹೆಚ್ಚು ಜನಪ್ರಿಯರಾಗಲಿ ಎಂದು ಹಾರೈಸೋಣ.