ಅವಕಾಶ ಇಲ್ಲದಿದ್ರೂ ಪರವಾಗಿಲ್ಲ ತುಂಡು ಬಟ್ಟೆ ಹಾಕಲ್ಲ ಅಂದ್ರು ಸಾಯಿಪಲ್ಲವಿ, ಅಷ್ಟಕ್ಕೂ ಅವತ್ತು ನಡೆದದ್ದೇನು? ಸತ್ಯ ಬಿಚ್ಚಿಟ್ಟ ನಟಿ

0 0

ಸಾಯಿ ಪಲ್ಲವಿ ದಕ್ಷಿಣದ ಖ್ಯಾತ ನಟಿಯರಲ್ಲಿ ಒಬ್ಬರು. ಗ್ಲಾಮರಸ್ ಬಟ್ಟೆಗಳು, ಹಾಟ್ ಸೀನ್‌ಗಳು, ತುಂಡು ಬಟ್ಟೆಗಳನ್ನು ತೊಡುವುದೇ ನಟನೆ ಎಂದು ಹಲವು ನಟಿಯರು ನಂಬಿರುವ ಕಾಲದಲ್ಲಿ ಒಂದಿಷ್ಟೂ ಗ್ಲಾಮರಸ್ ಆಗಿ ಕಾಣಿಸಿಕೊಳ್ಳದೆ ಕೇವಲ ನಟನೆಯಿಂದಷ್ಟೆ ಸ್ಟಾರ್ ಪಟ್ಟಕ್ಕೇರಿದವರು ಸಾಯಿ ಪಲ್ಲವಿ. ಸಾಯಿ ಪಲ್ಲವಿ ಈವರೆಗೆ ನಟಿಸಿರುವ ಯಾವ ಸಿನಿಮಾದಲ್ಲಿಯೂ ತುಂಡು ಬಟ್ಟೆ ಧರಿಸಿದವರಲ್ಲ, ಅಶ್ಲೀ ಲವಾಗಿ ಅಥವಾ ಗ್ಲಾಮರಸ್ ಆಗಿ ಕಾಣಿಸಿಕೊಂಡವರಲ್ಲ, ಕುಟುಂಬದೊಡನೆ ನೋಡಲು ಮುಜುಗರವಾಗುವಂಥಹಾ ದೃಶ್ಯಗಳಲ್ಲಿ ನಟಿಸಿದವರಲ್ಲ ಇದೇ ಕಾರಣಕ್ಕೆ ಇವರನ್ನು ಆರಾಧಿಸುವವರ ಸಂಖ್ಯೆ ದೊಡ್ಡದಿದೆ.

ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ನಟಿ ಸಾಯಿ ಪಲ್ಲವಿ ಸದ್ಯ ವಿರಾಟ ಪರ್ವಂ ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದಾರೆ. ಈಗಾಗಲೇ ಟ್ರೈಲರ್ ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಸಿನಿಮಾದಲ್ಲಿ ಸಾಯಿ ಪಲ್ಲವಿ ಜೊತೆ ನಟ ರಾಣ ದಗ್ಗುಬಾಟಿ ಕೂಡ ನಟಿಸಿದ್ದಾರೆ. ಸಿನಿಮಾತಂಡ ಸದ್ಯ ಪ್ರಮೋಶನ್‌ನಲ್ಲಿ ಬ್ಯುಸಿಯಾಗಿದೆ. ನಟಿ ಸಾಯಿ ಪಲ್ಲವಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅದ್ಭುತ ನಟನೆ ಮೂಲಕವೇ ಅಭಿಮಾನಿಗಳ ಹೃದಯ ಗೆದ್ದಿರುವ ನಟಿ ಸಾಯಿ ಪಲ್ಲವಿ ಅವರನ್ನು ಲೇಡಿ ಪವರ್ ಸ್ಟಾರ್ ಎಂದು ಕರೆಯುತ್ತಾರೆ. ಸಾಯಿ ಪಲ್ಲವಿ ಸಿನಿಮಾದಲ್ಲಿ ಯಾವುದೇ ಬಾಡಿಕಾನ್ ಬಟ್ಟೆ ಧರಿಸದೇ, ತುಂಡುಡುಗೆ ಹಾಕದೆ ಸ್ಟಾರ್ ಆಗಿ ಬೆಳೆದವರು, ಅತೀ ದೊಡ್ಡ ಅಭಿಮಾನಿ ಬಳಗ ಸಂಪಾದನೆ ಮಾಡಿದ್ದಾರೆ. ಎಲ್ಲಾ ಅಭಿಮಾನಿಗಳನ್ನು ಗಳಿಸಿರುವುದು ತನ್ನ ಅದ್ಭುತ ಅಭಿನಯದ ಮೂಲಕ.

ನಟಿ ಸಾಯಿ ಪಲ್ಲವಿ ಆನ್ ಸ್ಟ್ರೀನ್ ಮತ್ತು ಆಫ್ ಸ್ಕ್ರೀನ್‌ನಲ್ಲಿ ಬಾಡಿಕಾನ್ ಡ್ರೆಸ್ ಹಾಕದೆ ಇರುವ ಬಗ್ಗೆ ಕಾರಣ ಬಿಚ್ಚಿಟ್ಟಿದ್ದಾರೆ. ಸಾಂಪ್ರದಾಯಿಕ ಕುಟುಂಬದಿಂದ ಬಂದಿರುವ ನಟಿ ಸಾಯಿ ಪಲ್ಲವಿ ಬಣ್ಣದ ಲೋಕದಲ್ಲಿ ಸ್ಟಾರ್ ಆಗಿ ಬೆಳೆದರು ಸಹ ತನ್ನ ಡ್ರೆಸ್ ವಿಚಾರದಲ್ಲಿ ಬದಲಾಗಿಲ್ಲ. ಆನ್ ಮತ್ತು ಆಫ್ ಸ್ಕ್ರೀನ್‌ನಲ್ಲಿ ಸಾಂಪ್ರದಾಯಿಕ ಉಡುಗೆಯಲ್ಲೇ ಕಾಣಿಸಿಕೊಳ್ಳುತ್ತಾರೆ. ಈ ಬಗ್ಗೆ ಸಾಯಿ ಪಲ್ಲವಿ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ಯಾಕೆ ಬಾಡಿಕಾನ್ ಡ್ರೆಸ್ ಹಾಕಲ್ಲ ಎಂದು ವಿರಿಸಿದ್ದಾರೆ.
ಸಂದರ್ಶನದಲ್ಲಿ ವೊಂದರಲ್ಲಿ ಮಾತನಾಡಿದ ನಟಿ ಸಾಯಿ ಪಲ್ಲವಿ, ‘ನಾನು ಸಾಂಪ್ರದಾಯಿಕ ಕುಟುಂಬದಿಂದ ಬಂದಿದ್ದೇನೆ. ತಂದೆ ಕೇಂದ್ರ ಸರ್ಕಾರಿ ಉದ್ಯೋಗಿ. ಒಬ್ಬಳು ತಂಗಿ ಇದ್ದಾಳೆ. ಅಕ್ಕ-ತಂಗಿ ಇಬ್ಬರು ಮನೆಯಲ್ಲಿ ಟೆನಿಸ್ ಮತ್ತು ಬ್ಯಾಡ್ಮಿಂಟನ್ ಆಡುತ್ತೇವೆ. ಆದರೆ ಆಡುವಾಗ ಆರಾಮದಾಯಿಕ ಬಟ್ಟೆ ಧರಿಸುತ್ತೇವೆ’ ಎಂದಿದ್ದಾರೆ.

ಆದರೆ ನಟಿ ಸಾಯಿ ಪಲ್ಲವಿಗೆ ಗ್ಲಾಮರಸ್ ಉಡುಗೆಗಳ ಮೇಲೆ ದ್ವೇಷವೇನಿಲ್ಲ. ತುಂಡು ಬಟ್ಟೆ ಧರಿಸುವುದು ತಪ್ಪು ಎಂಬುದು ಸಾಯಿ ಪಲ್ಲವಿಯ ನಿಲವೂ ಅಲ್ಲ. ಆದರೆ ಸಾಯಿ ಪಲ್ಲವಿ ತುಂಡು ಬಟ್ಟೆಗಳನ್ನು ಧರಿಸದೇ ಇರಲು ಬಲವಾದ ಕಾರಣವೊಂದಿದೆ. ಅವರದ್ದೇ ಒಂದು ವಿಡಿಯೋದ ಕಾರಣದಿಂದ ಅವರು ಗ್ಲಾಮರಸ್ ಉಡುಗೆ ತೊಡುವುದು ಬಿಟ್ಟರಂತೆ. ಗ್ಲಾಮರಸ್ ಉಡುಪುಗಳ ವಿರೋಧಿಯಲ್ಲ ಸಾಯಿ ಪಲ್ಲವಿ
ತಾವು ಗ್ಲಾಮರಸ್ ಉಡುಪುಗಳನ್ನು ತೊಡದೇ ಇರಲು ಕಾರಣವನ್ನು ಇತ್ತೀಚಿನ ಸಂದರ್ಶನದಲ್ಲಿ ವಿವರಿಸಿರುವ ಸಾಯಿ ಪಲ್ಲವಿ, ನಾನು ತುಂಡು ಬಟ್ಟೆಯ ವಿರೋಧಿಯಲ್ಲ. ನಾನು ಕ್ರೀಡಾಪಟು ಆಗಿದ್ದವಳು ಆಗೆಲ್ಲ ನಾನು ತುಂಡು ಬಟ್ಟೆ ಹಾಕಿದ್ದೆ, ಅದು ನನಗೆ ಮುಜುಗರ ತರುತ್ತಿರಲಿಲ್ಲ. ಈ ಮೊದಲೂ ನಾನು ಗ್ಲಾಮರಸ್ ಉಡುಗೆಗಳನ್ನು ಧರಿಸುತ್ತಿದ್ದೆ. ಆದರೆ ಒಂದು ಘಟನೆಯ ನಂತರ ನನ್ನೊಳಗೆ ಗ್ಲಾಮರಸ್ ಬಟ್ಟೆಗಳ ವಿರುದ್ಧವಾದ ಒಂದು ಸಂವೇದನೆ ಶುರುವಾಯಿತು” ಎಂದು ಸಾಯಿ ಪಲ್ಲವಿ ವಿದ್ಯಾರ್ಥಿಯಾಗಿದ್ದಾಗ ನಡೆದ ಘಟನೆ ವಿವರಿಸಿದ್ದಾರೆ.

ಚಿತ್ರರಂಗಕ್ಕೆ ಬಂದ ನಂತರ ಒಂದು ಘಟನೆ ನಾನು ಸಿನಿಮಾಗಳಲ್ಲಿ ತುಂಡುಡುಗೆ ಧರಿಸಲ್ಲ ಎಂದು ನಿರ್ಧರಿಸಿದೆ. ನಾನು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಜಾರ್ಜಿಯಾಗೆ ಹೋದಾಗ ನಾನು ಅಲ್ಲಿ ಟ್ಯಾಂಗೊ ನೃತ್ಯ ಕಲಿತೆ. ಟ್ಯಾಂಗೋ ನೃತ್ಯವನ್ನು ಕಲಿಯಲು ವಿಶೇಷ ವೇಷಭೂಣಗಳನ್ನು ಧರಿಸಬೇಕು. ನಾನು ನನ್ನ ಪೋಷಕರಿಗೆ ಅದನ್ನು ಹೇಳಿದೆ. ಅವರ ಅನುಮತಿಯೊಂದಿಗೆ ವೇಷಭೂಷಣ ಧರಿಸಿ ಡಾನ್ಸ್ ಮಾಡಿದೆ’ ಎಂದರು. ಕೆಲವು ತಿಂಗಳ ನಂತರ ನಾನು ಪ್ರೇಮ್ ಚಿತ್ರದಲ್ಲಿ ನಟಿಸುವ ಅವಕಾಶ ಸಿಕಕ್ಕಿತು. ಚಿತ್ರ ಬಿಡುಗಡೆಯಾದ ಬಳಿಕ ನನ್ನ ಟ್ಯಾಂಗೋ ಡಾನ್ಸ್ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಯಿತು. ಆ ವಿಡಿಯೋಗೆ ನೆಟ್ಟಿಗರು ಮಾಡಿದ ಕಾಮೆಂಟ್ ನನಗೆ ತುಂಬಾ ಬೇಸರ ಮೂಡಿಸಿತ್ತು. ಆಗ ನಾನು ಸಿನಿಮಾಗಳಲ್ಲಿ ಚಿಕ್ಕ ಬಟ್ಟೆಗಳನ್ನು ಧರಿಸಬಾರದು ಎಂದು ನಿರ್ಧರಿಸಿದೆ’ ಎಂದು ತುಂಡುಡುಗೆ ಹಾದಕೆ ಇರಲು ಕಾರಣ ರಿವೀಲ್ ಮಾಡಿದ್ದಾರೆ.

ಆ ಘಟನೆ ಬಳಿಕ ನನಗೆ ಸಣ್ಣ ಉಡುಗೆಗಳನ್ನಾಗಲಿ, ಗ್ಲಾಮರಸ್ ಆದ ಉಡುಗೆಗಳನ್ನು ಧರಿಸಲು ಆಗಲೇ ಇಲ್ಲ. ಆ ರೀತಿಯ ಉಡುಗೆಗಳ ವಿರುದ್ಧ ಜಾಗೃತೆಯೊಂದು ತನ್ನಂತಾನೆ ನನ್ನ ಮನದಲ್ಲಿ ಮನೆ ಮಾಡಿಬಿಟ್ಟಿತು. ಈಗಲೂ ನಾನು ಸಾಮಾನ್ಯ ಉಡುಪು ಧರಿಸಿದರೂ ಅಪ್ರಯತ್ನ ಪೂರ್ವವಾಗಿ ನಾನು ಎಚ್ಚರವಾಗಿರುವಂತೆ ಆಗಿದೆ ಎಂದು ನಗುತ್ತಲೇ ವಿವರಿಸಿದ್ದಾರೆ ಸಾಯಿ ಪಲ್ಲವಿ.

ಸಾಯಿ ಪಲ್ಲವಿ ನಟಿಸಿರುವ ವಿರಾಟ ಪರ್ವಂ ಸಿನಿಮಾ ಜೂನ್ 17 ರಂದು ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ವೆನ್ನೆಲ ಹೆಸರಿನ ಯುವತಿಯ ಪಾತ್ರದಲ್ಲಿ ಸಾಯಿ ಪಲ್ಲವಿ ನಟಿಸಿದ್ದಾರೆ. ಸಿನಿಮಾದಲ್ಲಿ ಸಾಯಿ ಪಲ್ಲವಿ ಜೊತೆಗೆ ರಾಣಾ ದಗ್ಗುಬಾಟಿ, ಪ್ರಿಯಾಮಣಿ ಇನ್ನೂ ಹಲವರಿದ್ದಾರೆ. ಇದರ ಹೊರತಾಗಿ ಕಮಲ್ ಹಾಸನ್ ನಿರ್ಮಾಣದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಸಾಯಿ ಪಲ್ಲವಿ, ಜೊತೆಗೆ ಗಾರ್ಗಿ ಹೆಸರಿನ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ತಮಿಳಿನ ಸ್ಟಾರ್ ನಟರೊಬ್ಬರ ಸಿನಿಮಾಕ್ಕೆ ಸಾಯಿ ಪಲ್ಲವಿ ಸಹಿ ಮಾಡಿದ್ದಾರೆ ಎನ್ನಲಾಗುತ್ತಿದೆ.

Leave A Reply

Your email address will not be published.