ಸಂಕ್ರಾಂತಿ ಹಬ್ಬ ಎಳ್ಳು- ಬೆಲ್ಲದಂತೆ ಕಿಚ್ಚಿನ ಹಬ್ಬವೂ ಹೌದು. ಚಾಲೆಂಜಿಂಗ್ ಸ್ಟಾರ್ ದರ್ಶನ್ ತೋಟದ ಮನೆಯಲ್ಲಿ ಪ್ರತಿವರ್ಷ ಸಂಕ್ರಾಂತಿ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡುತ್ತಾರೆ. ತೋಟದ ಮನೆಯಲ್ಲಿರುವ ದರ್ಶನ್ ಮುದ್ದಿನ ಪ್ರಾಣಿಗಳಿಗೆ ಸಿಂಗರಿಸಿ, ಕಿಚ್ಚು ಹಾಯಿಸಿ ಸಂಭ್ರಮಿಸುತ್ತಾರೆ. ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಸಂಕ್ರಾಂತಿ ಸಂಭ್ರಮ ಜೋರಾಗಿದೆ. ತಮ್ಮ ಫಾರ್ಮ್​ಹೌಸ್​ನಲ್ಲಿ ಮುದ್ದಿನ ಪ್ರಾಣಿಗಳೊಂದಿಗೆ ಅವರು ಈ ಹಬ್ಬ ಆಚರಿಸಿದ್ದಾರೆ. ಅಲ್ಲದೇ ಸಂಕ್ರಾಂತಿ ಸಂಪ್ರಾದಾಯಿಕ ಹಬ್ಬವಾದ ಕಿಚ್ಚನ್ನು ಹಾಯಿಸಿ ಕೂಡ ಅವರು ಖುಷಿ ಪಟ್ಟಿದ್ದಾರೆ. ತಮ್ಮ ನೆಚ್ಚಿನ ಕುದುರೆಯೊಂದಿಗೆ ಅವರು ಕಿಚ್ಚು ಹಾಯಿಸಿರುವುದು ವಿಶೇಷ.

ಪ್ರತಿವರ್ಷ ನಟ ದರ್ಶನ್​ ತಮ್ಮ ಫಾರ್ಮ್​ಹೌಸ್​ನಲ್ಲಿ ಸಂಕ್ರಾಂತಿ ಹಬ್ಬ ಆಚರಿಸುತ್ತಾರೆ. ಈ ವರ್ಷ ಸಹ ಮೈಸೂರಿನ ತೋಟದ ಮನೆಯಲ್ಲಿ ಸಂಕ್ರಾಂತಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ್ದಾರೆ. ತೋಟದ ಮನೆಯಲ್ಲಿರುವ ಹಸು, ಕುದುರೆಗಳಿಗೆ ವಿಶೇಷವಾಗಿ ಸಿಂಗರಿಸಿ, ಅವುಗಳಿಗೆ ಪೂಜೆ ಮಾಡಿದ್ದಾರೆ. ಎಲ್ಲಾ ಪ್ರಾಣಿಗಳಿಗೂ ಸ್ವತಃ ದರ್ಶನ್ ಅವರೇ ಕೈತುತ್ತು ತಿನಿಸಿದ್ದಾರೆ. ಬಿಳಿ ಕುದುರೆ ಕಿಚ್ಚು ಹಾಯಿಸಿದ ದರ್ಶನ್ ಪ್ರಾಣಿಗಳಿಗೆ ಆರತಿ ಮಾಡಿ, ಸಂಕ್ರಾಂತಿ ಹಬ್ಬದ ವಿಶೇಷ ಕಿಚ್ಚು ಹಾಯಿಸಿದ್ದಾರೆ. ದರ್ಶನ್ ಸ್ನೇಹಿತರು ಮತ್ತು ತೋಟದ ಮನೆಲ್ಲಿರುವವರೆಲ್ಲ ದರ್ಶನ್ ಜೊತೆ ಕಿಚ್ಚು ಹಾಯಿಸಿ ಸಂಭ್ರಮಿಸಿದ್ದಾರೆ. ದರ್ಶನ್ ತನ್ನ ನೆಚ್ಚಿನ ಬಿಳಿ ಕುದುರೆಯನ್ನು ಕಿಚ್ಚು ಹಾಯಿಸಿ ಸಂತಸ ಪಟ್ಟಿದ್ದಾರೆ.

ಹಸು ಮತ್ತು ಎತ್ತುಗಳಗೆ ವಿಶೇಷವಾಗಿ ಸಿಂಗಾರ ಮಾಡಿರುವುದು ಗಮನ ಸೆಳೆಯುತ್ತಿತ್ತು. ಎತ್ತುಗಳ ಮೇಲೆ ಡಿ ಬಾಸ್, ರಾಬರ್ಟ್ ಎಂದು ಬರೆದು ದರ್ಶನ್ ಸ್ನೆಹಿತರು ಸಂತಸ ಪಟ್ಟಿದ್ದಾರೆ. ದರ್ಶನ್ ತೋಟದ ಮನೆಯ ಸಂಕ್ರಾಂತಿ ಸಂಭ್ರಮದ ವಿಡಿಯೋವನ್ನು ಡಿ ಬಾಸ್ ಅಭಿಮಾನಿ ಬಳಗ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಭಿಮಾನಿಗಳು ವಿಡಿಯೋ ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ದರ್ಶನ್ ಸದ್ಯ ರಾಬರ್ಟ್ ಸಿನಿಮಾದ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಬಹುನಿರೀಕ್ಷೆಯ ರಾಬರ್ಟ್ ಮಾರ್ಚ್ 11ರಂದು ರಿಲೀಸ್ ಆಗುತ್ತಿದೆ. ವರ್ಷದಿಂದ ಕಾಯುತ್ತಿರುವ ಅಭಿಮಾನಿಗಳು ಮಾರ್ಚ್ 11ರಂದು ರಾಬರ್ಟ್ ಅನ್ನು ಅದ್ದೂರಿಯಾಗಿ ಸ್ವಾಗತಿಸಲು ಸಜ್ಜಾಗಿದ್ದಾರೆ. ಲಾಕ್ ಡೌನ್ ಬಳಿಕ ದರ್ಶನ್ ಯಾವುದೇ ಸಿನಿಮಾದ ಚಿತ್ರೀಕರಣ ಪ್ರಾರಂಭ ಮಾಡಿಲ್ಲ. ಲಾಕ್ ಡೌನ್ ಸಮಯದಲ್ಲಿ ಬಹುತೇಕ ತೋಟದ ಮನೆಯಲ್ಲೇ ದರ್ಶನ್ ಸಮಯ ಕಳೆದಿದ್ದಾರೆ. ಮುದ್ದಿನ ಪ್ರಾಣಿ ಪಕ್ಷಿಗಳ ಜೊತೆ ಹೆಚ್ಚು ಕಾಲ ಕಳೆಯುತ್ತಿರುವ ದರ್ಶನ್ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲ ಸಹ ಅಭಿಮಾನಿಗಳಲ್ಲಿ ಇದೆ. ಈಗಾಗಲೇ ಸಾಲು ಸಾಲು ಸಿನಿಮಾಗಳು ದರ್ಶನ್ ಬಳಿ ಇದೆ. ಯಾವ ಸಿನಿಮಾ ಪ್ರಾರಂಭಿಸುತ್ತಾರೆ ಎಂದು ಇನ್ನೇನು ಕೆಲವೇ ದಿನಗಳಲ್ಲಿ ತಿಳಿಯಲಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!