ನಿಮ್ಮ ಶತ್ರುವನ್ನೇ ನಿಮ್ಮ ದಾರಿಗೆ ತಂದುಕೊಳ್ಳಬಹುದು ಎಂದು ಚಾಣಕ್ಯ ಹೇಳಿದ ಅಂಶಗಳನ್ನು ನಾವು ಇಲ್ಲಿ ತಿಳಿಯೋಣ. ಆಚಾರ್ಯ ಚಾಣಕ್ಯ ಹೇಳಿದ ಈ ಹಿಪ್ನೋಟಿಸಮ್ ಟಿಪ್ಸ್ ಪಾಲಿಸುವ ಮೂಲಕ ನಿಮ್ಮ ಶತ್ರುವನ್ನು ನಿಮ್ಮ ದಾರಿಗೆ ತಂದುಕೊಳ್ಳಬಹುದಂತೆ. ಜಗತ್ತಿನಲ್ಲಿ ಇಬ್ಬರ ಪರಿಸ್ಥಿತಿಗಳು ಒಂದೇ ಆಗಿರುವುದಿಲ್ಲ. ಎಲ್ಲರೂ ವ್ಯೆಯಕ್ತಿಕ ವಿಭಿನತೆಗಳನ್ನು ಹೊಂದಿರುತ್ತಾರೆ.ಇಂತಹ ಸಮಯದಲ್ಲಿ ಬೇರೊಬ್ಬರನ್ನು ನಮ್ಮ ದಾರಿಗೆ ತಂದುಕೊಳ್ಳುವುದು ಬಹಳ ಕಷ್ಟ ಸಾಧ್ಯ.
ಆದರೆ ಚಾಣಕ್ಯ ಹೇಳಿದ ಕೆಲವು ನಿರ್ದಿಷ್ಟ ವ್ಯಕ್ತಿತ್ವ ಹೊಂದಿರುವವರನ್ನು ಮಾತ್ರ ತಮ್ಮ ದಾರಿಗೆ ತಂದುಕೊಳ್ಳಬಹುದಂತೆ. ಅದಕ್ಕಾಗಿ ಚಾಣಕ್ಯ ಅವರು ಕೆಲವು ವಿಚಾರಗಳನ್ನು ತಿಳಿಸಿದ್ದಾರೆ. ಅವೇನೆಂದರೆ ತೀವ್ರ ಕೋಪದಲ್ಲಿರುವವರಿಗೆ, ಇಂತಹ ಮನಸ್ಥಿತಿ ಹೊಂದಿರುವವರ ಎದುರು ತುಂಬಾ ಮರ್ಯಾದೆಯಿಂದ ಪ್ರಶಾಂತವಾಗಿ ನಡೆದುಕೊಳ್ಳಬೇಕು. ಕೋಪವನ್ನು ಹೆಚ್ಚಾಗಿ ತೋರ್ಪಡಿಸಬಾರದು.
ಮೂರ್ಖರಾದರೆ ಮೂರ್ಖಸ್ವಭಾವ ಹೊಂದಿರುವವರನ್ನು ಯಾವಾಗಲೂ ಹೋಗಳುತ್ತಿರಬೇಕು. ಅವರನ್ನೇ ಯಾವಾಗಲೂ ಫಾಲೋ ಆಗಬೇಕಂತೆ. ಇದರಿಂದ ಅವರನ್ನು ತಮ್ಮ ದಾರಿಗೆ ತಂದುಕೊಳ್ಳಬಹುದು.
ಪ್ರತಿಭಾವಂತರಾದರೆ, ಒಂದುವೇಳೆ ನಮ್ಮ ಎದುರು ಪ್ರತಿಭಾವಂತ ವ್ಯಕ್ತಿಗಳಿದ್ದರೆ ಅವರ ಮುಂದೆ ಯಾವಾಗಲೂ ಸತ್ಯವನ್ನೇ ಮಾತನಾಡಬೇಕಂತೆ. ಹೀಗೆ ಮಾಡುವುದರಿಂದ ಅವರು ನಮ್ಮ ಬಗ್ಗೆ ಆಸಕ್ತಿ ತೋರುತ್ತಾರೆ. ನಮ್ಮ ದಾರಿಗೆ ಬರುತ್ತಾರೆ.ಇಗೋ ಹೊಂದಿರುವವರಾದರೆ,ತುಂಬಾ ಇಗೋ ಮನಸ್ಥಿತಿ ಹೊಂದಿರುವವರಾದರೆ ನಮ್ಮ ದಾರಿಗೆ ಅವರನ್ನು ತಂದುಕೊಳ್ಳಲು ಅವರಂತೆ ವರ್ತಿಸಬೇಕು. ಅವರೊಂದಿಗೆ ಮರ್ಯಾದೆಯಿಂದ ನಡೆದುಕೊಳ್ಳಬೇಕು.
ಸ್ವಾರ್ಥಿಗಳು, ಅತಿಯಾಸೆ ಹೊಂದಿದವರು ಇಂಥವರನ್ನು ಸುಲಭವಾಗಿ ನಮ್ಮ ದಾರಿಗೆ ತಂದುಕೊಳ್ಳಬಹುದು. ವರಿಗೆ ಸ್ವಲ್ಪ ದುಡ್ಡಿನ ಆಸೆ ತೋರಿಸಿದರೆ ನಮ್ಮ ದಾರಿಗೆ ಬರುತ್ತಾರೆ.
ಮಕ್ಕಳು, ಸಣ್ಣ ಮಕ್ಕಳಿಗೆ ಪ್ರೀತಿ ಆತ್ಮೀಯತೆ ತೋರಿಸುವುದರಿಂದ ಪೋಷಕರು ಅವರ ಮಕ್ಕಳನ್ನು ತಮ್ಮ ದಾರಿಗೆ ತಂದುಕೊಳ್ಳಬಹುದು. 5 ವರ್ಷದೊಳಗಿನ ಮಕ್ಕಳನ್ನು ಅತಿಯಾದ ಪ್ರೀತಿಯಿಂದ ಬೆಳೆಸಬೇಕು.ಹತ್ತು ವರ್ಷದೊಳಗಿನ ಮಕ್ಕಳ ಆದರೆ ಅವರ ಜೊತೆ ಕೋಪಿಷ್ಠ ಆಗಿ ವರ್ತಿಸಬಾರದು.16 ವರ್ಷದೊಳಗೆ ಮತ್ತು ಅದರ ಮೇಲಿನವರಾದರೆ ಪೋಷಕರು ಅವರ ಸ್ನೇಹಿತರಂತೆ ವರ್ತಿಸಬೇಕು.ಕಠಿಣ ಪರಿಸ್ಥಿತಿಗಳು ಎದುರಾದಾಗ ಮೇಲೆ ಹೇಳಿದ ಪರಿಸ್ಥಿತಿ ಹೊಂದಿಲ್ಲದವರಲ್ಲದೆ, ಪರಿಸ್ಥಿತಿಗಳಿಗೆ ತಕ್ಕಂತೆ ಹೇಗೆ ವರ್ತಿಸಬೇಕು ಎಂದು ಚಾಣಕ್ಯ ಹೇಳಿದ್ದಾರೆ. ಮುಖ್ಯವಾಗಿ ಕಠಿಣ ಪರಿಸ್ಥಿತಿಗಳು ಎದುರಾದಾಗ ಪ್ರಶಾಂತವಾಗಿರಬೇಕು. ಇದು ಉತ್ತಮ ಫಲಿತಾಂಶ ನೀಡುತ್ತದೆ. ಪ್ರೀತಿಯಮೂ ಸ್ವಭಾವ ತಿಳಿಯಬೇಕೆಂದರೆ ಅವರ ನಡೆನುಡಿ ವರ್ತನೆ ಆಧಾರದಿಂದ ನಿರ್ಧರಿಸಬೇಕು.