Abhishek Ambareesh ಕನ್ನಡ ಚಿತ್ರರಂಗದಲ್ಲಿ ಈಗ ಮತ್ತೊಂದು ಲವ್ ಸ್ಟೋರಿ ನಿಜ ಆಗೋಕೆ ಹೊರಟಿದ್ದು ಅಭಿಷೇಕ್ ಅಂಬರೀಶ್(Abhishek Ambareesh) ಅವರು ಫ್ಯಾಷನ್ ಲೋಕದ ಖ್ಯಾತ ನಾಮ ಹೆಸರಾಗಿರುವಂತಹ ಅವಿವಾ(Aviva Bidapa) ಅವರನ್ನು ಮದುವೆಯಾಗಲು ಹೊರಟಿದ್ದು ಇನ್ನೇನು ಕ್ಷಣಗಣನೆ ಆರಂಭವಾಗಿದ್ದು ಎಲ್ಲಾ ಕಡೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ ಈ ಗ್ರಾಂಡ್ ಮದುವೆ.
ಅಭಿಷೇಕ್ ಅಂಬರೀಶ್ ಅವರು ಹೇಳಿರುವಂತೆ ತಮ್ಮ ಕಾಮನ್ ಫ್ರೆಂಡ್ ಮುಖಾಂತರ ಅವಿವ ಅವರನ್ನು ಮೀಟ್ ಆಗುವಂತಹ ಅಭಿಷೇಕ್ ಅಂಬರೀಶ್ ರವರು ನಂತರ ಇಬ್ಬರೂ ಕೂಡ ಸ್ನೇಹಿತರಾಗಿ ಸ್ನೇಹಿತರು ಪ್ರೇಮಿಗಳಾಗಿ ಈಗ ಮನೆಯವರ ಒಪ್ಪಿಗೆಯ ಮೇರೆಗೆ ಗಂಡ ಹೆಂಡತಿ ಆಗಲು ಹೊರಟಿದ್ದಾರೆ.
ತಮ್ಮ ಮಗನ ಮದುವೆಯನ್ನು ಸ್ವತಃ ತಾಯಿ ಆಗಿರುವಂತಹ ಸುಮಲತಾ ಅಂಬರೀಶ್(Sumalatha Ambareesh) ಅವರೇ ಖುದ್ದಾಗಿ ಮುಂದೆ ನಿಂತು ಮಾಡಿಸುತ್ತಿದ್ದು ಇದು ಎಲ್ಲಾ ಕಡೆ ವೈರಲ್ ಆಗಿದೆ. ಇದೇ ಸಂದರ್ಭದಲ್ಲಿ ಅವಿವಾ ಅವರ ಮೊದಲನೇ ಸುದ್ದಿ ಕೂಡ ಮತ್ತೆ ರಂಗೇರಿದ್ದು ಅವರ ಮೊದಲನೇ ಗಂಡನ ಹೆಸರು ಕೂಡ ತಿಳಿದು ಬಂದಿದೆ.
ಹೌದು ಮಿತ್ರರೇ ಅವಿವಾ ಅವರು ವಿಕ್ರಂ ಮೆಹ್ತಾ ಎನ್ನುವಂತಹ ಬಿಸಿನೆಸ್ ಮ್ಯಾನ್ ಅನ್ನು ಮದುವೆಯಾಗಿದ್ದರೂ ಆದರೆ 2016ರಲ್ಲಿ ಅವರಿಗೆ ಡಿವೋರ್ಸ್ ನೀಡಿ ಬೇರೆಯಾಗಿದ್ದರು. ಇದು ಸಾಕಷ್ಟು ಜನರಿಗೆ ತಿಳಿಯದೆ ಇರುವಂತಹ ವಿಚಾರವಾಗಿದೆ. ಅದೇನೆ ಇರಲಿ ಈ ದಿನ ಅಭಿಷೇಕ್ ಅಂಬರೀಶ್ ಜೊತೆ ಮದುವೆ ಆಗಿರುವ ಅವೀವಾ ಬಿದ್ದಪ್ಪ ಅಂಬಿ ಮನೆ ಸೊಸೆ ಆಗಿದ್ದಾರೆ, ಇವರ ಮುಂದಿನ ಜೀವನ ಉತ್ತಮವಾಗಿರಲಿ ಅನ್ನೋದೇ ಕನ್ನಡಿಗರ ಆಶಯವಾಗಿದೆ.