ಅಬಕಾರಿ ಇಲಾಖೆ ನೇಮಕಾತಿ (ಹೊಸ ನೇಮಕಾತಿ ಪುರುಷ ಮತ್ತು ಮಹಿಳೆಯರಿಗೆ 1755 ಹುದ್ದೆಗಳು) 10th,12th,ಡಿಗ್ರಿ ಅನುಬಂಧ ಒಂದರಲ್ಲಿ ಖಾಲಿ ಇರುವ ಹುದ್ದೆಗಳ ಸಂಖ್ಯೆ, ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳ ಸಂಖ್ಯೆ, ವೇತನದ ಬಗ್ಗೆ ಮಾಹಿತಿ ಕೊಡಲಾಗಿದೆ. ಗುಂಪು ಗುಂಪು “ಎ” ಮಂಜೂರು ಉದ್ಯೋಗಗಳು 148 ಹಾಗೂ ಖಾಲಿ ಹುದ್ದೆಗಳು 60.
ಗುಂಪು “ಬಿ” ಮಂಜೂರು ಉದ್ಯೋಗಗಳು 129 ಹಾಗೂ ಖಾಲಿ ಇರುವ ಹುದ್ದೆಗಳು 28.
ಗುಂಪು “ಸಿ” ಮಂಜೂರು ಉದ್ಯೋಗಗಳು 5422 ಹಾಗೂ ಖಾಲಿ ಹುದ್ದೆಗಳು 1633.
ಗುಂಪು “ಡಿ” ಮಂಜೂರು ಉದ್ಯೋಗಗಳು 113 ಹಾಗೂ ಖಾಲಿ ಹುದ್ದೆಗಳು 34.
ಒಟ್ಟು ಮಂಜೂರು ಉದ್ಯೋಗಗಳು 5812 ಹಾಗೂ ಒಟ್ಟು ಖಾಲಿ ಹುದ್ದೆಗಳು 1755.
ಗ್ರೂಪ್ ಡಿ ಯಲ್ಲಿ ಬರುವ ಚಾಲಕರ ಹುದ್ದೆಗೆ ಹಿರಿಯ ವಾಹನ ಚಾಲಕರ 14 ಹುದ್ದೆಗಳು, ಅಬಕಾರಿ ಕಾನ್ಸ್ಟೇಬಲ್ 573 ಹುದ್ದೆಗಳು, ಮುಖ್ಯ ಪೇದೆ 165 ಹುದ್ದೆಗಳು, ಬೆರಳಚ್ಚುಗಾರರ 46 ಹುದ್ದೆಗಳು, ದ್ವಿತೀಯ ದರ್ಜೆ ಸಹಾಯಕರು 137 ಹುದ್ದೆಗಳು, ಶೀಘ್ರಲಿಪಿಗಾರರು 34 ಹುದ್ದೆಗಳು, ಪ್ರಥಮ ದರ್ಜೆ ಸಹಾಯಕರು 136 ಹುದ್ದೆಗಳು ಖಾಲಿ ಇದೆ, ಅಬಕಾರಿ ಉಪ ನಿರೀಕ್ಷಕರು 353 ಹುದ್ದೆಗಳು, ಅಬಕಾರಿ ನಿರೀಕ್ಷಕರು 60 ಹುದ್ದೆಗಳು ಲ್ಯಾಬ್ ಸಹಾಯಕ ಎರಡು ಹುದ್ದೆಗಳು ಖಾಲಿ ಇದೆ. ಈ ಮೇಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ನೇರ ನೇಮಕಾತಿ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಕೆ,ಪಿ,ಎಸ್,ಸಿ ಇಂದ 2022 ರಲ್ಲಿ ಜನವರಿಯಿಂದ ಎಪ್ರಿಲ್ ತಿಂಗಳಿನ ಒಳಗೆ ಅರ್ಜಿ ಆಹ್ವಾನಿಸುವ ಸಾಧ್ಯತೆಗಳಿವೆ.
ವಯೋಮಿತಿ : ಕನಿಷ್ಟ ವಯಸ್ಸಿನ ಮಿತಿ 18 ವರ್ಷಗಳು.
ಗರಿಷ್ಠ ವಯಸ್ಸಿನ ಮಿತಿ 40 ವರ್ಷಗಳು.
ವೇತನ : 21,400 – 42,000 /- ಪ್ರತಿ ತಿಂಗಳು.
ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಯಾವಾಗ ಭರ್ತಿ ಮಾಡಲಾಗುತ್ತದೆ ಎಂಬುದಕ್ಕೆ ಉತ್ತರ ಸಿಕ್ಕಿಲ್ಲ.