ಎಬಿಡಿ ಎಂದ ಕೂಡಲೆ ಇವರ ಪರಿಚಯವಾದಂತೆಯೆ ಸರಿ. ಮೈದಾನದ ಮೂನ್ನೂರಾ ಅರವತ್ತು ಡಿಗ್ರಿಯಲ್ಲಿ ಹೇಗೆ ಬೇಕೋ ಹಾಗೆ ಸಿಕ್ಸರ್ ಹಾಗೂ ಬೌಂಡರಿ ಬಾರಿಸುವ ಕ್ರಿಕೆಟ್ ವಿಶ್ವದ ಏಕೈಕ ಸರದಾರ. ಸಿಡಿದೆದ್ದರೆ ಸಿಕ್ಸರ್ ಗಳದ್ದೆ ಸುರಿಮಳೆ ಸುರಿಸುವ ಕ್ರಿಕೆಟ್ ಆಟದ ಮಿಂಚು. ಎಬಿಡಿಗೆ ಎಬಿಡಿ ವಿಲಿಯರ್ಸ್ ಮಾತ್ರ ಸರಿಸಾಟಿ ಅಂತಹ ಉತ್ತಮ ಮನರಂಜನೆಯ ಕಿಂಗ್ ಎಬಿಡಿ ವಿಲಿಯರ್ಸ್. ಎಬಿಡಿ ವಿಲಿಯರ್ಸ್ ಒಬ್ಬ ಕ್ರಿಕೆಟ್ ಆಟಗಾರನಾಗಿ ಮಾತ್ರ ನಮಗೆ ಪರಿಚಯ ಹಾಗಾದರೆ ಅಸಲಿಗೆ ಎಬಿಡಿ ಯಾರು? ಹೇಗೆ ಕ್ರಿಕೆಟ್ ಗೆ ಆಯ್ಕೆ ಆದರೂ ಎಂಬ ವಿಚಾರಗಳನ್ನು ನಾವು ತಿಳಿಯೋಣ.

ಎಬಿಡಿ ವಿಲಿಯರ್ಸ್ ಅವರ ಬಗ್ಗೆ ಗೊತ್ತಿಲ್ಲದ ಹಲವು ಸಂಗತಿಗಳು ಇವೆ. ಅದನ್ನು ತಿಳಿದರೆ ಸ್ಪೂರ್ತಿಯ ಕಿರಣ ಎಲ್ಲರಿಗೂ ಸಿಗುವುದು ಖಚಿತ. ಸಾಧಿಸುವ ಛಲದ ರೋಮಾಂಚನದ ಅನುಭವ ಆಗುತ್ತದೆ. ಎಬಿಡಿಯ ಪೂರ್ಣ ಹೆಸರು ಅಬ್ರಾಹಿಂ ಬೆಂಜಮಿನ್ ಡಿ ವಿಲಿಯರ್ಸ್. ದಕ್ಷಿಣ ಆಪ್ರಿಕಾದ ಪ್ರಿಟೋರಿಯಾದಲ್ಲಿ ಫೆಬ್ರವರಿ 17, 1984 ರಂದು ಜನಿಸಿದರು. ಪ್ರಿಟೋರಿಯಾದಲ್ಲೆ ಪ್ರಾಥಮಿಕ ಶಿಕ್ಷಣ ಮುಗಿಸಿದರು ಎಬಿಡಿ. ಹೈಸ್ಕೂಲ್ ಶಿಕ್ಷಣವನ್ನು ಆಫ್ರಿಕಾ ಬಾಯ್ಸ್ ಹೈಸ್ಕೂಲ್ ನಲ್ಲಿ ಮುಗಿಸಿದರು. ಕ್ರಿಕೆಟ್ ಎಂದರೆ ಬಾಲ್ಯದಿಂದಲೂ ಪ್ರಾಣ ಎಬಿಡಿಗೆ. ಕ್ರಿಕೆಟ್ ಅನ್ನು ಬಿಟ್ಟು ಟೆನ್ನಿಸ್, ಗಾಲ್ಫ್, ಸ್ವಿಮ್ಮಿಂಗ್, ಇನ್ನೂ ಮುಂತಾದ ಕ್ರೀಡೆಯಲ್ಲಿ ಸಕ್ರಿಯವಾಗಿದ್ದರು. ಕ್ರಿಕೆಟ್ ನಲ್ಲಿ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ನಿರ್ಧಾರ ಮಾಡಿದ ಎಬಿಡಿ ಟೈಟಾನಿಕ್ ಕ್ರಿಕೆಟ್ ಕ್ಲಬ್ ನಲ್ಲಿ 2003 ರಲ್ಲಿ ಆಡಲು ಪ್ರಾರಂಭಿಸುತ್ತಾರೆ. ಎಬಿಡಿ ಬೇರೆ ಕ್ಲಬ್ ಗಳಲ್ಲಿಯೂ ಕ್ರಿಕೆಟ್ ಆಡುತ್ತಾರೆ. ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಇವರ ಬ್ಯಾಟಿಂಗ್ ವೈಖರಿಗೆ ಇವರತ್ತ ಬಂದಿತ್ತು. ಸೌತ್ ಆಫ್ರಿಕಾದ ಅಂತರಾಷ್ಟ್ರೀಯ ಕ್ರಿಕೆಟ್ ತಂಡದಲ್ಲಿ 2004 ರಲ್ಲಿ ಆಡಲು ಅವಕಾಶ ಸಿಗುತ್ತದೆ. 2007 ರಲ್ಲಿ ನಡೆದ ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಎಬಿಡಿ ಸರಿಯಾಗಿ ಆಡಲಿಲ್ಲ. ಸುಲಭದಲ್ಲಿ ಸೋಲೊಪ್ಪಲು ತಯಾರಿಲ್ಲದ ಎಬಿಡಿ ಮುಂದಿನ ವರ್ಷದಲ್ಲಿ ನೆಡೆದ ಟೆಸ್ಟ್ ಕ್ರಿಕೆಟ್ ನಲ್ಲಿ ಡಬ್ಬಲ್ ಸೆಂಚುರಿ ಹೊಡೆಯುತ್ತಾರೆ.

ಕ್ರಿಕೆಟ್ ಲೋಕದಲ್ಲಿ ಮ್ಯಾಜಿಕ್ ಸೃಷ್ಟಿಸುವ ಇವರು ಮತ್ತೆಂದು ಹಿಂದೆ ತಿರುಗಿ ನೋಡುವುದಿಲ್ಲ. ಐಸಿಸಿ ಪ್ಲೇಯರ್ ಆಫ್ ದಿ ಇಯರ್ ಪ್ರಶಸ್ತಿಯನ್ನು 2010 ರಲ್ಲಿ ತನ್ನ ಮುಡಿಗೇರಿಸಿಕೊಳ್ಳುತ್ತಾರೆ. ಎಬಿಡಿ ವಿಶ್ವಕಪ್ 2011 ರಲ್ಲೂ ಭಾರಿ ಬ್ಯಾಟಿಂಗ್ ಪ್ರದರ್ಶನ ಮಾಡುತ್ತಾರೆ. ನಾಯಕತ್ವ ನಿಭಾಯಿಸುವ ಜವಾಬ್ದಾರಿ ಹೇಗಲೇರಿದರೂ 2014 ಮತ್ತು 2015 ರಲ್ಲೂ ಐಸಿಸಿ ಪ್ರಶಸ್ತಿ ತಮ್ಮದಾಗಿಸಿಕೊಳ್ಳುತ್ತಾರೆ. ಎಬಿಡಿ ಕ್ರಿಕೆಟ್ ನ ಮೂರು ಫಾರ್ಮೆಟ್ ಗಳಾದ ಅತಿವೇಗದ ಅರ್ಧ ಶತಕ, ಅತಿವೇಗದ ಶತಕ, ಅತಿ ವೇಗದ ನೂರೈವತ್ತು ರನ್ ಗಳಿಸಿದ ಕೀರ್ತಿ ಹೊಂದಿದ್ದಾರೆ. ಅರ್ಧ ಶತಕವನ್ನು 16 ಎಸೆತಗಳಿಂದ ಪಡೆದಿದ್ದರೆ. 31 ಎಸೆತಕ್ಕೆ ಶತಕ ಭಾರಿಸಿದ್ದರು. ನೂರೈವತ್ತು ರನ್ ಗಳನ್ನು 64 ಎಸೆತಗಳಲ್ಲಿ ಪಡೆದಿದ್ದರು. ಇವೆಲ್ಲ ದಾಖಲೆಗಳು ಎಬಿಡಿ ಹೆಸರು ಹೊಂದಿದ್ದಾರೆ. ಬ್ಯಾಟಿಂಗ್ ಒಂದೆ ಅಲ್ಲದೆ ವಿಕೆಟ್ ಕೀಪಿಂಗ್, ಅತ್ಯುತ್ತಮ ಫೀಲ್ಡರ್ ಕೂಡ. ಕ್ಯಾಚ್ ಗಳನ್ನು ಹಕ್ಕಿಗಳು ಹಾರಾಡುವ ರೀತಿಯಲ್ಲಿ ಹಾರಿ ಹಿಡಿಯುತ್ತಾರೆ ಎಬಿಡಿ. ಫೀಲ್ಡಿಂಗ್ ಇಂದಲೂ ಹಲವು ಪಂದ್ಯಗಳ ಗೆಲುವಿಗೆ ಕಾರಣರಾದ ಎಬಿಡಿಯನ್ನು ಸೂಪರ್ ಮ್ಯಾನ್ ಎನ್ನುತ್ತಾರೆ.

ಈಗ ಆರ್.ಸಿ.ಬಿಯಲ್ಲಿ ಆಡುತ್ತಿರುವ ಇವರು ಮೊದಲು ಡೆಲ್ಲಿ ಪರವಾಗಿ ಆಡುತ್ತಿದ್ದರು. ಹಲವು ವರ್ಷಗಳಿಂದ ಆರ್.ಸಿ.ಬಿಯಲ್ಲಿ ಆಡುತ್ತಿರುವ ಎಬಿಡಿ ಈಗ ಆರ್.ಸಿ.ಬಿಯ ಮನೆ ಮಗ. ಪ್ರತಿಯೊಂದು ಪಂದ್ಯಗಳಲ್ಲಿ ಮಿಂಚಿದ್ದಾರೆ. ಎಬಿಡಿಯಲ್ಲಿ ಅದೇನು ತಾಕತ್ತು ಇದೆಯೊ ಅವರು ಆಟಕ್ಕೆ ಇಳಿದರೆ ಆಟದ ರೂಪವೇ ಬದಲಾಗುತ್ತದೆ. ಡ್ಯಾನಿಯಲ್ ಜೊತೆಯಲ್ಲಿ 2011 ರಲ್ಲಿ ದಾಂಪತ್ಯಕ್ಕೆ ಕಾಲಿಡುತ್ತಾರೆ. ಈ ದಂಪತಿಗಳಿಗೆ ಎರಡು ಮಕ್ಕಳು. ಪುಟ್ಬಾಲ್ ಆಟ ಎಂದರೆ ಎಬಿಡಿಗೆ ತುಂಬಾ ಇಷ್ಟ. ಎಬಿಡಿಯವರ ಇತರ ದಾಖಲೆಗಳು ಇಂತಿವೆ. ನೂರು ಮೀಟರ್ ಓಟದಲ್ಲಿ ಜೂನಿಯರ್ ಅಥ್ಲೆಟ್ ನಲ್ಲಿ ದಾಖಲೆ ಮಾಡಿದ್ದಾರೆ. ಬ್ಯಾಡ್ಮಿಂಟನ್ ತಂಡದಲ್ಲಿ 19 ವರ್ಷದೊಳಗಿನ ಆಟಗಾರರಾಗಿದ್ದರು. ಆರು ರಾಷ್ಟ್ರೀಯ ದಾಖಲೆಗಳನ್ನು ಶಾಲಾ ಮಟ್ಟದ ಸ್ವಿಮ್ಮಿಂಗ್ ಸ್ಪರ್ಧೆಯಲ್ಲಿ ಗಳಿಸಿದ್ದಾರೆ. ಟೆನ್ನಿಸ್ ನಲ್ಲಿ ಡೇವಿಸ್ ಕಪ್ ನಲ್ಲಿ ಕಿರಿಯರ ವಿಭಾಗದಲ್ಲಿ ಆಯ್ಕೆ ಆಗಿದ್ದರು. ದಕ್ಷಿಣ ಆಫ್ರಿಕಾ ಕಿರಿಯರ ತಂಡಕ್ಕೆ ಹಾಕಿ, ಪುಟ್ಬಾಲ್ ಆಟದಲ್ಲಿ ಆಯ್ಕೆ ಆಗಿದ್ದರು. ಎಲ್ಲಾ ರಾಷ್ಟ್ರೀಯ ತಂಡಗಳಿಗೂ ಆಯ್ಕೆ ಆಗುವ ವ್ಯಕ್ತಿಯ ಸಾಮರ್ಥ್ಯ ಹೇಗಿರಬಹುದು. ಸಂಗೀತದ ಸಾಮ್ರಾಟ ಎನ್ನುವಷ್ಟು ಸಂಗೀತದಲ್ಲಿ ಸಾಧಿಸಿದ್ದಾರೆ. ಗೀಟಾರ್ ಹಾಗೂ ಗಾಯನದಲ್ಲಿ ಒಂದು ಬ್ಯಾಂಡ್ ನಡೆಸುತ್ತಾರೆ ಎಬಿಡಿ. ವಿಜ್ಞಾನದ ಪ್ರಾಜೆಕ್ಟ್ ಗೆ ಪದಕವೊಂದನ್ನು ದಕ್ಷಿಣ ಆಫ್ರಿಕಾ ಮಾಜಿ ಪ್ರಧಾನಿ ನೆಲ್ಸನ್ ಮಂಡೇಲಾ ಅವರಿಂದ ಪಡೆದಿದ್ದಾರೆ. ಕ್ರಿಕೆಟ್ ಅಥವಾ ಯಾವುದೇ ಆಟದಲ್ಲಿ ಇರಬಹುದು ಇವರಂಥ ಪ್ರತಿಭೆ ಮತ್ತೊಬ್ಬರು ಇರಲು ಕಷ್ಟ ಸಾಧ್ಯ. ತಮ್ಮ ಮೇಲೆ ನಂಬಿಕೆ ಇಟ್ಟು ಮುಂದೆ ನಡೆದವರು ಎಬಿಡಿ ಒಂದು ಅದ್ಭುತ ವ್ಯಕ್ತಿತ್ವ.

ಆಡು ಮುಟ್ಟದ ಸೊಪ್ಪಿಲ್ಲ ಅನ್ನುವ ಗಾದೆಯಂತೆ ಎಬಿಡಿ ಕೂಡ ದಾಖಲೆ ಬರೆಯದ ಕ್ಷೇತ್ರವಿಲ್ಲ ಎನ್ನಬಹುದು. ಮನಸ್ಸಿನಲ್ಲಿ ಸಾಧಿಸುವ ಛಲವೊಂದಿದ್ದರೆ ಏನನ್ನಾದರೂ ಸಾಧಿಸಬಹುದು ಎನ್ನುವುದಕ್ಕೆ ಒಂದು ಉದಾಹರಣೆ ಎಬಿಡಿ. ಆಟದಲ್ಲಿ ಸೋತರೆ ಮತ್ತೆ ಗೆಲ್ಲಬಹುದು. ಜೀವನದಲ್ಲಿ ಸೋತರೆ ಮತ್ತೆಂದು ಗೆಲ್ಲುವುದು ಅಸಾಧ್ಯದಂತೆ ಕಾಣಿಸುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!