Aadhaar updates: ಆಧಾರ್ ಕಾರ್ಡ್ ನಮ್ಮೆಲ್ಲರ ಬಳಿ ಇರಬೇಕಾದ ಪ್ರಮುಖವಾದ ಗುರುತಿನ ದಾಖಲೆ. ಆಧಾರ್ ಕಾರ್ಡ್ ಇಲ್ಲದೆ ಹೋದರೆ ನಾವು ಯಾವುದೇ ಕೆಲಸ ಮಾಡಲು ಆಗುವುದಿಲ್ಲ. ಶಾಲೆಗೆ ಅಡ್ಮಿಷನ್ ಆಗುವುದಕ್ಕೆ, ಬ್ಯಾಂಕ್ ಕೆಲಸಕ್ಕೆ, ಸರ್ಕಾರಕ್ಕೆ ಸಂಬಂಧಪಟ್ಟ ಕೆಲಸಕ್ಕೆ ಹೀಗೆ ಸಾಕಷ್ಟು ವಿಷಯಕ್ಕೆ ಆಧಾರ್ ಕಾರ್ಡ್ (Aadhaar Card) ಮುಖ್ಯವಾಗಿ ಬೇಕಾಗುತ್ತದೆ. ಇದೀಗ ಆಧಾರ್ ಕಾರ್ಡ್ ವಿಚಾರಕ್ಕೆ ಒಂದು ಪ್ರಮುಖವಾದ ಮಾಹಿತಿ ನೀಡಿದೆ ಯುಐಡಿಎಐ.
ಯುಐಡಿಎಐ ಈಗ 10 ವರ್ಷ ಅಥವಾ ಅದಕ್ಕಿಂತ ಹಳೆಯ ಆಧಾರ್ ಕಾರ್ಡ್ ಹೊಂದಿರುವವರಿಗೆ ಹೊಸ ನಿಯಮವನ್ನು ತಂದಿದೆ, ಅದೇನು ಎಂದರೆ ಹಳೆಯ ಆಧಾರ್ ಕಾರ್ಡ್ ಗೆ ಸಂಬಂಧಿಸಿದ ಹಾಗೆ ಅಪ್ಡೇಟ್ ಮಾಡುವ ಅವಕಾಶವನ್ನು ನೀಡಲಾಗಿದೆ. ಒಂದು ವೇಳೆ ನೀವು 3 ವರ್ಷಕ್ಕಿಂತ ಹೆಚ್ಚಿನ ಸಮಯದಿಂದ ನೀವು ಅಡ್ರೆಸ್ ಅಪ್ಡೇಟ್ ಮಾಡಿಲ್ಲ ಎಂದರೆ, ಈಗ ಬೇರೆ ಅಡ್ರೆಸ್ ಗೆ ಶಿಫ್ಟ್ ಆಗಿದ್ದರೆ ಅಡ್ರೆಸ್ ಚೇಂಜ್ ಮಾಡಬಹುದು.
ಅಡ್ರೆಸ್ ಚೇಂಜ್ ಮಾಡುವುದು ಕಡ್ಡಾಯ ಅಲ್ಲ, ನಿಮ್ಮ ಬೇರೆ ದಾಖಲೆಗಳು ಕರೆಂಟ್ ಬಿಲ್ ಹಾಗೂ ಇನ್ನಿತರ ದಾಖಲೆಗಳಲ್ಲಿ ಈಗಿನ ಅಡ್ರೆಸ್ ಬರುವ ಕಾರಣ ಯಾವುದೇ ಸಮಸ್ಯೆ ಆಗುವುದಿಲ್ಲ. ಹಾಗೆಯೇ ಆಧಾರ್ ಕಾರ್ಡ್ ನಲ್ಲಿ ನೀವು ಫೋಟೋ ಅಪ್ಡೇಟ್ ಮಾಡುವ ಅವಕಾಶ ಸಹ ಹೊಂದಿರುತ್ತೀರಿ. ಹಳೆಯ ಫೋಟೋಗಿಂತ ಹೊಸ ಫೋಟೋ ಅಪ್ಡೇಟ್ ಮಾಡಿ ಅದನ್ನು ಬಳಸುವುದು ಒಳ್ಳೆಯದು.
ಹಾಗಾಗಿ ಯುಐಡಿಎಐ ಈ ಅವಕಾಶ ನೀಡಿದೆ. ನೀವು ಇದರ ಸದುಪಯೋಗ ಪಡಿಸಿಕೊಳ್ಳಬಹುದು. ಇದೆಲ್ಲವನ್ನು ನೀವು ಅಪ್ಡೇಟ್ ಮಾಡಿಸಲೇಬೇಕು ಎಂದು ಕಡ್ಡಾಯ ಇಲ್ಲದೆ ಹೋದರು ಸಹ ಮಾಡಿಸಿದರೆ ಒಳ್ಳೆಯದು ಎಂದು ಹೇಳಲಾಗುತ್ತಿದೆ. ಡಿಸೆಂಬರ್ 31ರವರೆಗು ಉಚಿತವಾಗಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸುವುದಕ್ಕೆ ಸಮಯ ಇದ್ದು, ಅಷ್ಟರ ಒಳಗೆ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಬಹುದು.