ನಮ್ಮ ಎಲ್ಲ ವ್ಯಾಪಾರ ವ್ಯವಹಾರದ ವಹಿವಾಟುಗಳಿಗೆ ಆಧಾರ್ ಕಾರ್ಡ್(Aadhaar Card) ಪಾತ್ರ ಅತಿ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. 10 ವರ್ಷದ ಆಧಾರ್ ಕಾರ್ಡ್ (Aadhaar Card) ಅನ್ನು ಕೂಡ ಉಚಿತವಾಗಿ ಅಪ್ಡೇಟ್ ಮಾಡಿಕೊಳ್ಳಬಹುದು ಮತ್ತು ಅಪ್ಡೇಟ್ ಮಾಡುವುದು ಕೂಡ ಕಡ್ಡಾಯವಾಗಿದೆ
ಉಚಿತ ಆಧಾರ್ ಕಾರ್ಡ್ ನವೀಕರಣದ ಅವಧಿ ಇಂದಿಗೆ ಕೊನೆಗೊಳ್ಳುತ್ತದೆ. ಕೇಂದ್ರ ಸರ್ಕಾರವು ಈಗಾಗಲೇ ಸ್ಪಷ್ಟವಾಗಿ ತಿಳಿಸಿದೆ ಜೂನ್ 14 ರ ಒಳಗೆ ಉಚಿತವಾಗಿ ಆಧಾರ್ ಅಪ್ಡೇಟ್ ಮಾಡಲು ನವೀಕರಿಸಲು ಗಡುವು ನೀಡಿತ್ತು. ಮುಖ್ಯವಾಗಿ ಆಧಾರ್ ಕಾರ್ಡ್ ಮಾಡಿಸಿ 10 ವರ್ಷಗಳಾಗಿದ್ದರು ಕೂಡ ಅಪ್ಡೇಟ್ ಮಾಡದೇ ಇದ್ದಾರೆ ಕೂಡಲೇ ಮಾಡಿಸಿ ಎಂದು (UIDAI) ಇತ್ತೀಚಿಗೆ ತಿಳಿಸಿದೆ. ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ಹೆಸರು, ವಿಳಾಸ ಹಾಗು ಇತರೆ ಮಾಹಿತಿಯನ್ನು ತಿಳಿಸಿದ ಸಮಯಕ್ಕೆ ಅಪ್ಡೇಟ್ ಮಾಡಿಸುವುದು ಮುಖ್ಯವಾಗಿದೆ. ಆಧಾರ್ ಕಾರ್ಡ್ ಅನ್ನು ಬಹುಬೇಗನೆ ನೀವು ಆನ್ಲೈನ್ ಮುಂಖಾಂತರ ಕೂಡ ಮಾಡಬಹುದಾಗಿದೆ.
ಮೈ ಆಧಾರ್ ಪೋರ್ಟಲ್ನಲ್ಲಿ ಉಚಿತವಾಗಿ ಅಪ್ಡೇಟ್ ಮಾಡುವ ಸದವಕಾಶ ನಿಮಗೆ ದೊರೆತಿದೆ. ಮಾರ್ಚ್ 15,,2023 ರಿಂದ ಜೂನ್ 14,2023 ರ ವರೆಗೆ ಈ UIDAI ನ ಉಚಿತ ಸೇವೆಯೂ ಲಭ್ಯವಿದೆ ಅಂದರೆ ಇಂದೇ ಕೊನೆ ದಿನಾಂಕವಾಗಿದೆ.ಆಧಾರ್ ಕಾರ್ಡ್ ಅಪ್ಡೇಟ್ ಮಾಡುವುದು ಹೇಗೆ ಎಂಬುದನ್ನು ಈ ಕೆಳಗಿಂನಂತೆ ತಿಳಿಯೋಣ.
ನಿಮ್ಮ್ ಮೊಬೈಲ್ ನ ಗೂಗಲ್ ಕ್ರೋಮ್ ನಲ್ಲಿ ಹೋಗಿ ಸೆಲ್ಫ್ ಸರ್ವಿಸ್ ಅಪ್ಡೇಟ್ ಪೋರ್ಟಲ್ ಎಂದು ಕ್ಲಿಕ್ ಮಾಡಿ ಆಗ ಅಲ್ಲಿ ಕಾಣುವ UIDAI ನ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ, ಮೈ ಆಧಾರ್ (my Adhar )ಮೇಲೆ ಕ್ಲಿಕ್ ಮಾಡಿದರೆ, ಅಲ್ಲಿ “update your Adhar”ಎಂದು ತೋರುತ್ತದೆ ಆಗ ಅದರ ಮೇಲೆ ಕ್ಲಿಕ್ ಮಾಡಿ “proceed to update your Adhar” ಎಂದು ತೋರುತ್ತದೆ ಅದನ್ನು ಆಯ್ಕೆ ಮಾಡಿ ಆಧಾರ್ ಕಾರ್ಡ್ ನಂಬರ್ ಅನ್ನು ದಾಖಲಿಸಿ.
ನಂತರ ಕ್ಯಾಪ್ಟ ವೆರಿಫಿಕೇಶನ್ ಅನ್ನು ಮಾಡಿ send OTP ಮೇಲೆ ಕ್ಲಿಕ್ ಮಾಡಿ ನಂತರ (update Demographics Data) ಮೇಲೆ ಒತ್ತಿ, ನವೀಕರಿಸಲು ಅಂದರೆ ಅಪ್ಡೇಟ್ ಮಾಡಲು ವಿವರಗಳನ್ನು ಆಯ್ಕೆ ಮಾಡಿ, ನೀಡಬಹುದಾದ ಹೊಸ ವಿವರಗಳನ್ನು ನಮೂದಿಸಿದ ನಂತರ ದಾಖಲೆಗಳ ಪ್ರತಿಗಳನ್ನು ಸ್ಕ್ಯಾನ್ ಮಾಡಿದ ದಾಖಲಾತಿಗಳನ್ನು ಅಪ್ಲೋಡ್ ಮಾಡಿ, ಮತ್ತು ನಮೂದಿಸಿದ ಮಾಹಿತಿಯು ಸರಿಯಾಗಿದೆಯೇ ಎಂದು ಪರಿಶೀಲಿಸಿ OTP ಹಾಕಿದರೆ ಅಪ್ಡೇಟ್ ಪ್ರಕ್ರಿಯೆ ಮುಕ್ತಾಯವಾಗುತ್ತದೆ.. ಈ ರೀತಿಯಾಗಿ ಆಧಾರ್ ಕಾರ್ಡ್ ಅನ್ನು ಸುಲಭವಾಗಿ ಅಪ್ಡೇಟ್ ಮಾಡಿ ಕೊಳ್ಳಬಹುದು. ಇದನ್ನೂ ಓದಿ ATM Card New Rules: ಎಟಿಎಂ ಕಾರ್ಡ್ ಇದ್ದವರಿಗೆ ಹೊಸ ನಿಯಮ ಜಾರಿ, ಎಟಿಎಂ ನಲ್ಲಿ ಹಣ ತೆಗೆಯುವ ಮುನ್ನ ಈ ಕೆಲಸ ಮಾಡಿ.