ವೋಟಿಂಗ್ ಕಾರ್ಡ್ (Voter ID) ಗೆ ಆಧಾರ್ ಕಾರ್ಡ್ ಲಿಂಕ್ (Aadhaar Card Link) ಮಾಡುವ ಕುರಿತು ಮಾಹಿತಿ ಇದರಲ್ಲಿ ತಿಳಿದುಕೊಳ್ಳಬಹುದು. ದೇಶದ ಪ್ರತಿಯೊಂದು ಪ್ರಜೆಯೂ ಕೂಡ ತಮ್ಮ ವೋಟರ್ ಐಡಿಯನ್ನು ಆಧಾರ್ ಕಾರ್ಡ್ ಗೆ ಲಿಂಕ್ (Aadhaar Card Link) ಮಾಡಬೇಕೆಂದು ಕೇಂದ್ರ ಸರ್ಕಾರ (Central Govt) ಅಧಿಸೂಚನೆಯನ್ನು ಈಗಾಗಲೇ ನೀಡಿದೆ ಹಾಗೂ ವಿಸ್ತರಿಸಿದೆ. ಲಿಂಕ್ ಮಾಡಲು ಯಾವುದೇ ರೀತಿ ಶುಲ್ಕವಿರುವುದಿಲ್ಲ. ಮಾರ್ಚ್ 31.2023ರ ಒಳಗಡೆ ಲಿಂಕ್ ಮಾಡಿಸಬೇಕೆಂದು ಸರ್ಕಾರ ಅಧಿಸೂಚನೆ ನೀಡಿದೆ.
Aadhaar Card Link with Voter ID
ವೋಟರ್ ಐಡಿ (Voter ID) ಆಧಾರ್ ಲಿಂಕ್ (Aadhaar Card Link) ಮಾಡುವುದರಿಂದ ಒಂದಕ್ಕಿಂತ ಹೆಚ್ಚು ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರು ಇದ್ದರೆ ಅದನ್ನು ರದ್ದುಗೊಳಿಸಲು ಸಹಾಯ ಮಾಡುತ್ತದೆ ಎಂದು ಚುನಾವಣಾ ಆಯೋಗ ತಿಳಿಸಿದೆ ಮತ್ತು ನಕಲಿ ಐಡಿಯನ್ನು ಪತ್ತೆಹಚ್ಚಲು ಸಾಧ್ಯವಾಗುತ್ತದೆ.
ಆನ್ಲೈನ್ ವೆಬ್ಸೈಟ್ : http://voterportal.eci.gov.in
ಲಿಂಕ್ ಮಾಡುವ ವಿಧಾನ :
ನಿಮ್ಮ ಮೊಬೈಲ್ ಸಂಖ್ಯೆ ಇಮೇಲ್ ಐಡಿ ಮತ್ತು ವೋಟರ್ ಐಡಿ ಸಂಖ್ಯೆಯನ್ನು ಬಳಸಿಕೊಂಡು ಲಾಗಿನ್ ಆಗಬೇಕು ನಂತರ ಅಲ್ಲಿ ಕೇಳಿರುವಂತಹ ದಾಖಲಾತಿಗಳನ್ನು ನಮೂದಿಸಬೇಕಾಗುತ್ತದೆ. ನಂತರ ‘Feed aadhar number ‘ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
LPG ಗ್ಯಾಸ್ ಹೊಸ ಡೀಲರ್ಶಿಪ್ ಯೋಜನೆಯಿಂದ ಕೈ ತುಂಬಾ ಹಣವೋ ಹಣ, Online ಇಂದೇ ಅರ್ಜಿ ಸಲ್ಲಿಸಿ
ಆಧಾರ್ ಕಾರ್ಡ್ ಆಧಾರ್ ಸಂಖ್ಯೆ ವೋಟರ್ ಐಡಿ ಸಂಖ್ಯೆ ನೊಂದಾಯಿತ ಮೊಬೈಲ್ ಸಂಖ್ಯೆ ಅಥವಾ ಪಾಪ್-ಅಪ್ ನಲ್ಲಿ ನೊಂದಾಯಿತ ಇಮೇಲ್ ವಿಳಾಸದಲ್ಲಿ ಕಾಣುವಂತೆ ಹೆಸರನ್ನು ಭರ್ತಿ ಮಾಡಿ. ನಂತರ ಸಬ್ಮಿಟ್ ಅನ್ನು ಕ್ಲಿಕ್ ಮಾಡಿ. ದೇಶದ ಪ್ರತಿಯೊಬ್ಬ ಪ್ರಜೆಯೂ ಆಧಾರ್ ಕಾರ್ಡ್ ಗೆ ವೋಟಿಂಗ್ ಕಾರ್ಡನ್ನು ಲಿಂಕ್ ಮಾಡಿಸಿಕೊಂಡು ಅದರ ಉಪಯೋಗವನ್ನು ಪಡೆದುಕೊಳ್ಳಿ ಮತ್ತು ಸರ್ಕಾರದ ಅಧಿಸೂಚನೆಯನ್ನು ಗೌರವಿಸಿ.