ರೈತರಿಗೆ ಸುಲಭವಾಗಿ ಸಾಲ ಒದಗಿಸುವ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಪಡೆಯಲು ರೈತರ ವಲಯದಲ್ಲಿ ಅಷ್ಟಾಗಿ ಉತ್ಸುಕತೆ ಕಂಡುಬಂದಿಲ್ಲ. ಇದುವರೆಗೆ ಕೇವಲ 50%ಗಿಂತ ಕಡಿಮೆ ರೈತರು ಮಾತ್ರ ಕಾರ್ಡ್‌ ಪಡೆದಿದ್ದಾರೆ. ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯಲು ಈ ರೀತಿ ಅರ್ಜಿ ಸಲ್ಲಿಸಿ. ಕೆಸಿಸಿಗೆ ಈ ರೀತಿ ಅರ್ಜಿ ಸಲ್ಲಿಸಿ, ಅಗ್ಗದ ಬಡ್ಡಿ ದರದಲ್ಲಿ ಪಡೆಯಿರಿ ಕೃಷಿ ಸಾಲ

ಗ್ರಾಮೀಣ ಭಾಗದ ರೈತರು ಕೃಷಿ ಹಾಗೂ ಇತರೆ ಉಪಕಸುಬುಗಳನ್ನು ನಡೆಸಲು ಅಗತ್ಯವಿರುವ ಸಾಲವನ್ನು ಏಕಗವಾಕ್ಷಿ ಪದ್ಧತಿಯ ಮೂಲಕ ಒದಗಿಸುವುದು ಯೋಜನೆಯ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಯೋಜನೆ ಉದ್ದೇಶವಾಗಿದ್ದು, ಕಾರ್ಡ್‌ ಮೂಲಕ ರೈತರಿಗೆ ಸುಲಭವಾಗಿ ಮೂರು ಲಕ್ಷದವರೆಗೆ ಸಾಲ ಸೌಲಭ್ಯ ದೊರೆಯಲಿದೆ.

ರಾಜ್ಯದ ಹೆಚ್ಚಿನ ರೈತರಿಗೆ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಕುರಿತು ಮಾಹಿತಿ ದೊರೆಯದ ಹಿನ್ನೆಲೆಯಲ್ಲಿ ಶೇ.50ರಷ್ಟು ರೈತರು ಕಿಸಾನ್‌ ಕ್ರೆಡಿಟ್‌ ಕಾರ್ಡ್‌ನ ಉಪಯೋಗ ಪಡೆದುಕೊಂಡಿಲ್ಲದಿರುವುದು ಅಂಕಿ-ಅಂಶಗಳಿಂದ ತಿಳಿದುಬಂದಿದೆ. ಪಿಎಂ ಕಿಸಾನ್ (PM Kisan) ಯೋಜನೆಯಡಿ ರೈತರಿಗೆ ನೀಡಲಾಗುವ 2000 ರೂಪಾಯಿಗಳ 7 ನೇ ಕಂತನ್ನು  ಡಿಸೆಂಬರ್ 25 ರಂದು ಸರ್ಕಾರ ಬಿಡುಗಡೆ ಮಾಡಿದೆ. ಇದರೊಂದಿಗೆ ಆತ್ಮನಿರ್ಭಾರ ಭಾರತ್ ಯೋಜನೆ ಅಡಿಯಲ್ಲಿ 2.5 ಕೋಟಿ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ) ಅಡಿಯಲ್ಲಿ ಸಾಲ ನೀಡುವುದಾಗಿ ಘೋಷಿಸಲಾಗಿದೆ. ಸಾಲ ಪಡೆಯುವ ರೈತರಿಗಾಗಿ ಕೆಸಿಸಿ ಯೋಜನೆಯನ್ನು ಪ್ರಧಾನ್ ಮಂತ್ರಿ ಕಿಸಾನ್ ಸಮ್ಮನ್ ನಿಧಿ ಯೋಜನೆ (ಪಿಎಂಎಸ್‌ವೈಎಂ) ಗೆ ಜೋಡಿಸಲಾಗಿದೆ. ಇದರೊಂದಿಗೆ ರೈತರಿಗೆ ಸುಲಭ ಕಂತು ಮತ್ತು ಕಡಿಮೆ ಬಡ್ಡಿ ದರದಲ್ಲಿ ಸಾಲ ದೊರೆಯುತ್ತದೆ.

ಪಿಎಂ ಕಿಸಾನ್ (PM Kisan) ಯೋಜನೆಯ ವೆಬ್‌ಸೈಟ್‌ನಲ್ಲಿ ಕೆಸಿಸಿ ಫಾರ್ಮ್ ನೀಡಲಾಗಿದೆ. ಇದರಲ್ಲಿ ಬ್ಯಾಂಕುಗಳು ಕೇವಲ 3 ದಾಖಲೆಗಳನ್ನು ತೆಗೆದುಕೊಂಡು ಸಾಲವನ್ನು ಅದರ ಆಧಾರದ ಮೇಲೆ ಮಾತ್ರ ನೀಡಬೇಕು ಎಂಬ ಸ್ಪಷ್ಟ ಸೂಚನೆ ಇದೆ. ಕೆಸಿಸಿ ಮಾಡಲು ಆಧಾರ್ ಕಾರ್ಡ್, ಪ್ಯಾನ್ ಮತ್ತು ಫೋಟೋ ತೆಗೆದುಕೊಳ್ಳಲಾಗುವುದು. ಅಲ್ಲದೆ ಅಫಿಡವಿಟ್ ನೀಡಬೇಕಾಗಿರುತ್ತದೆ. ಅದರಲ್ಲಿ ನೀವು ಬೇರೆ ಯಾವುದೇ ಬ್ಯಾಂಕಿನಿಂದ ಸಾಲ ತೆಗೆದುಕೊಂಡಿಲ್ಲ ಎಂದು ಹೇಳಬೇಕು.

ಪ್ರಸ್ತುತ ಸುಮಾರು 6.67 ಕೋಟಿ ಸಕ್ರಿಯ ಕೆಸಿಸಿ ಖಾತೆಗಳಿವೆ. ಸಹಕಾರಿ ಬ್ಯಾಂಕ್, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್, ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಶನ್ ಆಫ್ ಇಂಡಿಯಾ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India), ಬ್ಯಾಂಕ್ ಆಫ್ ಇಂಡಿಯಾ ಮತ್ತು ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯಾ ಕೆಸಿಸಿಯನ್ನು ರೂಪಿಸುತ್ತವೆ. ಕೆಸಿಸಿ ಫಾರ್ಮ್ ಡೌನ್‌ಲೋಡ್ ಮಾಡಲು ಅಧಿಕೃತ ವೆಬ್‌ಸೈಟ್ pmkisan.gov.in ಗೆ ಭೇಟಿ ನೀಡಿ. ವೆಬ್‌ಸೈಟ್‌ನಲ್ಲಿನ ಹಿಂದಿನ ಟ್ಯಾಬ್‌ನ ಬಲಭಾಗದಲ್ಲಿ ಡೌನ್‌ಲೋಡ್ ಕಿಸಾನ್ ಕ್ರೆಡಿಟ್ ಫಾರ್ಮ್ (ಡೌನ್‌ಲೋಡ್ ಕೆಸಿಸಿ ಫಾರ್ಮ್) ಆಯ್ಕೆಯನ್ನು ನೀಡಲಾಗಿದೆ. ಇಲ್ಲಿಂದ ಫಾರ್ಮ್ ಅನ್ನು ಮುದ್ರಿಸಿ ಅದನ್ನು ಭರ್ತಿ ಮಾಡಿ ಹತ್ತಿರದ ಬ್ಯಾಂಕಿಗೆ ಹೋಗಿ ಸಲ್ಲಿಸಿ. ಕಾರ್ಡ್‌ನ ಮಾನ್ಯತೆ ಐದು ವರ್ಷಗಳು. 

ಕೆಸಿಸಿ (KCC)ಯಿಂದ ರೈತರಿಗೆ 3 ಲಕ್ಷ ರೂ.ವರೆಗೆ ಸಾಲ ನೀಡಲಾಗುತ್ತದೆ. ಸಾಲದ ಮೇಲಿನ ಬಡ್ಡಿದರವು ಶೇಕಡಾ 9 ರಷ್ಟಿದ್ದರೂ, ಕೆಸಿಸಿಯಲ್ಲಿ ಸರ್ಕಾರವು ಎರಡು ಶೇಕಡಾ ಸಬ್ಸಿಡಿ ನೀಡುತ್ತದೆ. ಈ ರೀತಿಯಾಗಿ ರೈತನು ಕೆಸಿಸಿಯಲ್ಲಿ ಶೇಕಡಾ 7ರ ದರದಲ್ಲಿ ಸಾಲ ಪಡೆಯುತ್ತಾನೆ. ರೈತರು ಸಮಯಕ್ಕೆ ಮುಂಚಿತವಾಗಿ ಸಾಲವನ್ನು ಮರುಪಾವತಿಸಿದರೆ ನಂತರ ಅವರು ಬಡ್ಡಿಗೆ 3 ಪ್ರತಿಶತದಷ್ಟು ರಿಯಾಯಿತಿ ಪಡೆಯುತ್ತಾರೆ.

ಅಂದರೆ ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿಸುವುದರಿಂದ ರೈತರು ಶೇಕಡಾ 4 ರಷ್ಟು ಬಡ್ಡಿ ದರದಲ್ಲಿ ಸಾಲ ಪಡೆಯಬಹುದು. ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಸಂಪೂರ್ಣವಾಗಿ ಭರ್ತಿ ಮಾಡಿದ ಅರ್ಜಿ, ಆಧಾರ್‌, ಪಾನ್‌ಕಾರ್ಡ್‌ ಜತೆಗೆ ವಾಸಸ್ಥಳ ದೃಢೀಕರಣ ಪತ್ರ, ಭೂಪತ್ರ, ರೈತ ಎಂದು ಸಾಬೀತುಪಡಿಸುವ ಪತ್ರ ಹಾಗೂ ಎರಡು ಪಾಸ್‌ಪೋರ್ಟ್‌ ಅಳತೆಯ ಫೋಟೋಗಳು.

Leave a Reply

Your email address will not be published. Required fields are marked *