ಟಿವಿಯಲ್ಲಿ ಬರುವ ಜಾಹೀರಾತುಗಳನ್ನು ಎಲ್ಲರೂ ನೋಡಿರುತ್ತೇವೆ ಅದರಲ್ಲಿ ಒಂದು ಬಂಗಾರದ ದೊಡ್ಡ ಸಂಸ್ಥೆಯ ಚೇರಮನ್ ಒಬ್ಬರು ತಾವೇ ಸ್ವತಃ ತಮ್ಮ ಜ್ಯೂವೆಲರಿ ಬಗ್ಗೆ ಜಾಹೀರಾತು ಮಾಡುತ್ತಾರೆ ಅವರ ಮಾತುಗಳು ನಿಜವೇ ಎಂದು ಭಾಸವಾಗುತ್ತದೆ ಅಲ್ಲದೆ ಅವರ ಮಾತುಗಳು ಹಲವು ಟ್ರೋಲ್ ಗೆ ಕಾರಣವಾಗಿದೆ ಆದರೆ ಇಂದು ಕೋಟಿ ಒಡೆಯರಾದ ಅವರ ಹಿಂದಿನ ಜೀವನದ ಕಥೆಯನ್ನು ಈ ಲೇಖನದ ಮೂಲಕ ತಿಳಿಯೋಣ.
ಸಾಕಷ್ಟು ಜ್ಯೂವೆಲರಿ ಶಾಪ್ ಇವೆ ಅವುಗಳ ಮಧ್ಯ ಹೊಸಬನಾಗಿ ಗುರುತಿಸಿಕೊಂಡ ಲಲಿತಾ ಜ್ಯೂವೆಲರಿ ಎಂ.ಡಿ ಹಾಗೂ ಚೇರ್ಮನ್ ಕಿರಣ್ ಕುಮಾರ್ ಅವರ ಪೂರ್ವಿಕರು ರಾಜಸ್ಥಾನ್ ಮೂಲದವರು ಅವರು ವ್ಯಾಪಾರಕ್ಕೆ ಆಂಧ್ರ ಪ್ರದೇಶಕ್ಕೆ ವಲಸೆ ಬಂದರು. ಕಿರಣ್ ಕುಮಾರ್ ಅವರ ಬಾಲ್ಯ ಕಷ್ಟದಲ್ಲಿ ಕಳೆದರು. ಅವರಿಗೆ ವಿದ್ಯಾಭ್ಯಾಸ ಸಿಗಲಿಲ್ಲ, ಸ್ವಂತ ಉದ್ಯೋಗ ಮಾಡಲು ಬಂಡವಾಳ ಇರಲಿಲ್ಲ. ಮನಸಿಲ್ಲದಿದ್ದರು ಸಣ್ಣ ಪುಟ್ಟ ಕೆಲಸ ಮಾಡುತ್ತಿದ್ದರು. ಅವರ ತಾಯಿ ತಮ್ಮಲ್ಲಿದ್ದ ಬಂಗಾರವನ್ನು ಮಾರಿ ಬಂದ ಹಣದಲ್ಲಿ ಒಂದು ಬಂಗಾರದ ಅಂಗಡಿ ಮಾಡಲು ಹೇಳಿದರು ಅದರಂತೆ ಚೆನ್ನೈನಲ್ಲಿ ಒಂದು ಬಂಗಾರದ ಅಂಗಡಿ ಇಟ್ಟರು. ತಾವೇ ಬಂಗಾರದ ಡಿಸೈನ್ ಮಾಡುತ್ತಿದ್ದರು ಇದು ಚೆನ್ನೈನಲ್ಲಿರುವ ಲಲಿತಾ ಜ್ಯೂವೆಲರಿ ಮೂಲ ಮಾಲೀಕರ ಮನಸೆಳೆಯಿತು ಅವರ ಆರ್ಡರ್ ಹೆಚ್ಚಾಯಿತು ಅವರ ಪ್ರೋತ್ಸಾಹದಿಂದ ಕಿರಣ್ ಅವರು ಹೊಸ ಹೊಸ ಡಿಸೈನ್ ಮಾಡಿದರು. ನಂತರ 1984 ರಲ್ಲಿ ತಮ್ಮ ಕನಸಿನ ಬಂಗಾರದ ಅಂಗಡಿಯನ್ನು ತೆರೆದು ತಮ್ಮ ಬಂಗಾರವನ್ನು ಲಲಿತಾ ಸಂಸ್ಥೆಗೆ ಮಾರುತ್ತಿದ್ದರು. ಕೆಲವು ದಿನಗಳ ನಂತರ ಲಲಿತಾ ಜ್ಯೂವೆಲರಿ ನಷ್ಟ ಅನುಭವಿಸಿತು ತಮಗೆ ಸಹಾಯ ಮಾಡಿದ ಸಂಸ್ಥೆಯ ನಷ್ಟವನ್ನು ನೋಡಿದ ಕಿರಣ್ ಕುಮಾರ್ ತಾವೇ ಅದರ ಒಡೆತನವನ್ನು ಪಡೆದರು ಅವರಿಂದ ಲಲಿತಾ ಜ್ಯೂವೆಲರಿ ಚೇತರಿಸಿಕೊಂಡಿತು.
ಇಂದು ಲಲಿತಾ ಜ್ಯೂವೆಲರಿ ಅಧಿಕ ಲಾಭವನ್ನು ಗಳಿಸುತ್ತಿದೆ ಇದಕ್ಕೆ ಕಾರಣ ಕಿರಣ್ ಕುಮಾರ್ ಅವರ ಜನ ಸ್ನೇಹಿ ವ್ಯವಹಾರ. ಸಾಮಾನ್ಯವಾಗಿ ಬಂಗಾರದ ಅಂಗಡಿ ಇಡುವವರು ಅದೇ ಫೀಲ್ಡ್ ನಲ್ಲಿ ಮೊದಲಿನಿಂದ ಇದ್ದವರಾಗಿದ್ದು ಅವರಿಗೆ ಬಡವರ ಕಷ್ಟ ಗೊತ್ತಿರುವುದಿಲ್ಲ ಗ್ರಾಹಕರಿಂದ ಲಾಭ ಪಡೆಯುತ್ತಾರೆ. ಕಿರಣ್ ಕುಮಾರ್ ಅವರು ಬಡತನದಿಂದ ಬಂದವರು, ಅವರು ಬಡವರ ಹಣವನ್ನು ಸ್ವಾರ್ಥಕ್ಕೆ ಬಳಸುವುದಿಲ್ಲ, ಪ್ರತಿಯೊಬ್ಬ ಸಾಮಾನ್ಯ ವ್ಯಕ್ತಿಗೂ ಚಿನ್ನ ಸುಲಭವಾದ ಬೆಲೆಗೆ ಸಿಗಬೇಕು ಅದೇ ರೀತಿಯಲ್ಲಿ ದರ ನಿಗದಿ ಮಾಡಿದ್ದಾರೆ. ಇವರು ತಮ್ಮ ಸ್ವಂತ ಗಳಿಕೆಯಲ್ಲಿ ರಾಜಸ್ಥಾನದಲ್ಲಿ ಆಸ್ಪತ್ರೆ, ಶಾಲೆಗಳನ್ನು ತೆರೆದಿದ್ದಾರೆ. ಒಟ್ಟಿನಲ್ಲಿ ಕಷ್ಟದಿಂದ ಮೇಲೆ ಬಂದ ಕಿರಣ್ ಕುಮಾರ ಅವರ ಜೀವನ ನಮ್ಮೆಲ್ಲರಿಗೂ ಸ್ಫೂರ್ತಿದಾಯಕವಾಗಿದೆ.