ಇತ್ತೀಚಿನ ಜೀವನ ಶೈಲಿ, ಆಹಾರ ಪದ್ಧತಿ, ಒತ್ತಡದಿಂದ ಬಹಳಷ್ಟು ಜನರು ದಪ್ಪ ಆಗಿ ಕೆಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ವೇಟ್ ಲಾಸ್ ಮಾಡಿಕೊಳ್ಳಲು ಟ್ಯಾಬ್ಲೆಟ್ಸ್ ಮೊರೆಹೋಗಿ ಬೇರೆ ಸಮಸ್ಯೆಗಳನ್ನು ಎದುರಿಸುತ್ತಾರೆ. ಮನೆಯಲ್ಲೇ ಸಿಗುವ ಕೆಲವು ಸಾಮಾಗ್ರಿಗಳಿಂದ ಆರೋಗ್ಯಕರವಾಗಿ ವೇಟ್ ಲಾಸ್ ಮಾಡಿಕೊಳ್ಳಬಹುದು. ವೇಟ್ ಲಾಸ್ ಮಾಡಿಕೊಳ್ಳುವ ಉತ್ತಮ ಮನೆ ಮದ್ದನ್ನು ಹೇಗೆ ಮಾಡಿಕೊಳ್ಳುವುದು ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಬಹಳಷ್ಟು ಜನರು ಎದುರಿಸುತ್ತಿರುವ ಸಮಸ್ಯೆ ಎಂದರೆ ದಪ್ಪ ಆಗುವುದು. ಇದ್ದಕಿದ್ದ ಹಾಗೆ ಕೈ, ಕಾಲು, ಕುತ್ತಿಗೆ ದಪ್ಪ ಆಗುತ್ತದೆ. ದಪ್ಪ ಆಗುವುದರಿಂದ ಮುಖದಲ್ಲಿ ಹೊಳಪು ಇರುವುದಿಲ್ಲ. ಆಹಾರ ಪದ್ಧತಿಯಿಂದ ದಪ್ಪ ಆಗುತ್ತಾರೆ. ಟೆನ್ಶನ್ ಮಾಡಿಕೊಂಡು ರಾತ್ರಿ ನಿದ್ದೆ ಮಾಡದೆ ಇರುವುದರಿಂದಲೂ ಕೆಲವರು ದಪ್ಪ ಆಗುತ್ತಾರೆ. ದಪ್ಪ ಆದವರು ವೇಟ್ ಲಾಸ್ ಮಾಡಿಕೊಳ್ಳಲು ಟ್ಯಾಬ್ಲೆಟ್ಸ್ ತೆಗೆದುಕೊಳ್ಳುತ್ತಾರೆ ಇದರಿಂದ ದೇಹದಲ್ಲಿ ನೀರಿನಂಶ ಕಡಿಮೆ ಆಗುತ್ತದೆ ಹೊರತು ವೇಟ್ ಲಾಸ್ ಆಗುವುದಿಲ್ಲ. ವೇಟ್ ಲಾಸ್ ಮಾಡಿಕೊಳ್ಳಲು ಸುಲಭವಾದ ಮನೆ ಮದ್ದು ಇದೆ. ಅಗಸೆ ಬೀಜ ಇದು ಹಸಿವನ್ನು ಕಡಿಮೆ ಮಾಡುತ್ತದೆ, ರಕ್ತ ಸಂಚಾರ ಸರಿಯಾಗಿ ಆಗುತ್ತದೆ, ಹೃದಯಕ್ಕೆ ಒಳ್ಳೆಯದು. ಅಗಸೆ ಬೀಜ ನಮ್ಮ ಕೂದಲು, ಸ್ಕಿನ್ ಗೆ ಒಳ್ಳೆಯದು. ಅಜವಾನ ಇದು ನಾವು ತಿಂದ ಆಹಾರವನ್ನು ಸರಿಯಾಗಿ ಜೀರ್ಣ ಮಾಡುತ್ತದೆ, ಮೆಟಬಾಲಿಕ್ ರೇಟ್ ಹೆಚ್ಚಾಗುತ್ತದೆ, ಇದರಿಂದ ಬೊಜ್ಜು ಕಡಿಮೆಯಾಗುತ್ತದೆ. ಸೋಂಪಾ ಕಾಳು ಇದು ದೇಹಕ್ಕೆ ಒಳ್ಳೆಯದು, ಜೀರ್ಣ ಕ್ರಿಯೆಗೆ ಉತ್ತಮ. ಸೋಂಪಾ ಕಾಳು ತಿನ್ನುವುದರಿಂದ ಟೆನ್ಶನ್ ಕಡಿಮೆಯಾಗುತ್ತದೆ ಮತ್ತು ಮನಸ್ಸು ಚಂಚಲವಾಗಿ ಬಹಳ ತಿನ್ನಬೇಕು ಎನಿಸುತ್ತದೆ ಅದು ಕಡಿಮೆಯಾಗುತ್ತದೆ.
ಕಾಳುಜೀರಿಗೆ ಇದನ್ನು ತಿನ್ನುವುದರಿಂದ ಫ್ಯಾಟ್ ಕಡಿಮೆಯಾಗುತ್ತದೆ. ದೇಹದ ಕೊಬ್ಬು ಕಡಿಮೆಯಾಗಲು ಇದು ಸಹಾಯಕಾರಿಯಾಗಿದೆ. ಇದು ಶುಗರ್ ಇರುವ ರೋಗಿಗಳಿಗೆ ಉಪಯುಕ್ತ. ಅಗಸೆ ಬೀಜ, ಅಜವಾನ, ಸೋಂಪಾಕಾಳು, ಕಾಳುಜೀರಿಗೆ ಇವುಗಳನ್ನು ಫ್ರೈ ಮಾಡಿಕೊಳ್ಳಬೇಕು ತಣ್ಣಗಾದ ನಂತರ ನೈಸ್ ಆಗಿ ಪೌಡರ್ ಮಾಡಿಕೊಳ್ಳಬೇಕು. ಇದನ್ನು ಒಂದು ಡಬ್ಬಿಯಲ್ಲಿ ಸ್ಟೋರ್ ಮಾಡಬಹುದು. ಬೆಳಗ್ಗೆ ಎದ್ದ ತಕ್ಷಣ ಒಂದು ಲೋಟ ಬಿಸಿ ನೀರಿಗೆ ಒಂದು ಸ್ಪೂನ್ ಪೌಡರ್ ಹಾಕಿ ಮಿಕ್ಸ್ ಮಾಡಿ ಅರ್ಧ ನಿಂಬು ರಸ ಸೇರಿಸಿ ಕುಡಿಯಬೇಕು. ಅಸಿಡಿಟಿ ಇದ್ದವರು ನಿಂಬೆರಸವನ್ನು ಸೇರಿಸಿ ಕುಡಿಯಬಾರದು, ಜೇನುತುಪ್ಪವನ್ನು ಸೇರಿಸಿ ಕುಡಿಯಬಹುದು. ಮಧ್ಯಾಹ್ನ ಊಟದ 1 ಗಂಟೆಯ ನಂತರ ಕುಡಿಯಬೇಕು ಹೀಗೆ ಒಂದು ತಿಂಗಳು ಮಾಡಿದರೆ ವೇಟ್ ಲಾಸ್ ಆಗುತ್ತದೆ. ಒಂದು ತಿಂಗಳ ನಂತರ ಬಿಡಬೇಕು ಅಥವಾ ಸ್ವಲ್ಪ ದಿನ ಬಿಟ್ಟು ನಂತರ ಪ್ರಾರಂಭಿಸಬೇಕು. ಇದರ ಜೊತೆಗೆ ವ್ಯಾಯಾಮ, ಯೋಗ, ಧ್ಯಾನ ಕೂಡ ಮಾಡಿದಲ್ಲಿ ಖಂಡಿತಾ ವೇಟ್ ಲಾಸ್ ಸಾಧ್ಯವಾಗುತ್ತದೆ. ಈ ಮಾಹಿತಿಯನ್ನು ತಪ್ಪದೇ ಎಲ್ಲರಿಗೂ ತಿಳಿಸಿ ಆರೋಗ್ಯಕರವಾಗಿ ವೇಟ್ ಲಾಸ್ ಮಾಡಿಕೊಳ್ಳಿ.