ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತದ ಕಛೇರಿಯಲ್ಲಿ ಒಬ್ಬ ವೈದ್ಯಕೀಯ ಸಲಹೆಗಾರರನ್ನು ಭರ್ತಿ ಮಾಡಿಕೊಳ್ಳಲು ಅಧಿಸೂಚನೆಯನ್ನು ಹೊರಡಿಸಲಾಗಿದ್ದು, ಈ ಮೂಲಕ ಹೆಸ್ಕಾಂ ನಲ್ಲಿ ಉದ್ಯೋಗ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನ ಮಾಡಲಾಗುತ್ತಿದೆ. ಆಸಕ್ತರು ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವುದು ಹೇಗೆ? ಯಾವೆಲ್ಲ ಹುದ್ದೆಗಳು ಖಾಲಿ ಇವೆ? ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಎಂಟಿಟು ಏನೆಲ್ಲಾ ದಾಖಲೆಗಳು ಬೇಕು ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತದ (HESCOM) ಕಛೇರಿಯಲ್ಲಿ ಒಬ್ಬ ವೈದ್ಯಕೀಯ ಸಲಹೆಗಾರರನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲು ಉದ್ದೇಶಿಸಲಾಗಿದೆ. ಈ ಹುದ್ದೆಯನ್ನು ಆರಂಭಿಕವಾಗಿ ಒಂದು ವರ್ಷಕ್ಕೆ ನೇಮಿಸಿಕೊಳ್ಳಲಿದ್ದು, ನಂತರ ತೃಪ್ತಿಕರ ಸೇವೆಯ ಆಧಾರದ ಮೇಲೆ ಮುಂದಿನ ಎರಡು ವರ್ಷಗಳ ಸೇವೆಯನ್ನು ಮುಂದುವರೆಸಲಾಗುತ್ತದೆ. ಆಸಕ್ತರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.
ಹುದ್ದೆಯ ಹೆಸರು ವೈದ್ಯಕೀಯ ಸಲಹೆಗಾರ. ಇದಕ್ಕೆ ಒಂದು ಹುದ್ದೆ ಮಾತ್ರ ಖಾಲಿ ಇದ್ದು ಇದಕ್ಕೆ ವಿದ್ಯಾರ್ಹತೆ MBBS ಆಗಿರಬೇಕು ಹಾಗೂ ಅರ್ಜಿದಾರರ ವಯಸ್ಸು ವರ್ಷ ಮೀರಿರಬಾರದು. ಇದಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 06/0/2021 ಆಗಿರುತ್ತದೆ. ಹಾಗೂ ಸಂಭಾವನೆ ಮಾಸಿಕ 25,000 ರೂಪಾಯಿ. ಅನುಭವ ವೈದ್ಯಕೀಯ ಕ್ಷೇತ್ರದಲ್ಲಿ 2 ವರ್ಷ ಸೇವಾನುಭವ. ಅರ್ಜಿ ಸಲ್ಲಿಸಬೇಕಾದ ವಿಲಾಸ ಪ್ರಧಾನ ವ್ಯವಸ್ಥಾಪಕರು (ಆ ಮತ್ತು ಮಾ.ಸಂ.ಅ), ಕಂಪನಿ ಕಛೇರಿ, ಹುವಿಸಕಂನಿ, ಪಿ.ಬಿ. ರಸ್ತೆ, ನವನಗರ, ಹುಬ್ಬಳ್ಳಿ-580025.
ಆಯ್ಕೆಯಾದ ಅರ್ಹ ಅಭ್ಯರ್ಥಿಗಳನ್ನು ಹುವಿಸಕಂನಿ, ಕಂಪನಿ ಕಛೇರಿ, ನವನಗರ ಹುಬ್ಬಳ್ಳಿಗೆ ಸಂದರ್ಶನಕ್ಕೆ ಆಹ್ವಾನಿಸಲಾಗುವುದು. ಸಂದರ್ಶನದಲ್ಲಿನ ಫಲಿತಾಂಶದ ಮೇಲೆ ಅಂತಿಮ ಆಯ್ಕೆಯನ್ನು ಮಾಡಲಾಗುವುದು. ಆಸಕ್ತಿ ಹೊಂದಿದಂತಹ ಅಭ್ಯರ್ಥಿಗಳು ಈ ಪ್ರಕಟಣೆಯ ದಿನಾಂಕದಿಂದ 15 ದಿನಗಳೊಳಗಾಗಿ ತಮ್ಮ ಬಯೋಡೇಟಾವನ್ನು ಅಗತ್ಯ ದಾಖಲಾತಿಗಳೊಂದಿಗೆ ಮೇಲಿನ ವಿಳಾಸಕ್ಕೆ ಕಳುಹಿಸತಕ್ಕದ್ದು.
ಹುದ್ದೆಯ ಹೆಸರು ವೈದ್ಯಕೀಯ ಸಲಹೆಗಾರ ವಿವರ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತದಿಂದ ಅಧಿಸೂಚನೆ. ಪ್ರಕಟಣೆ ದಿನಾಂಕ 2020-12-22 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 6/1/2021. ಉದ್ಯೋಗ ವಿಧ ಗುತ್ತಿಗೆ. ಉದ್ಯೋಗ ಕ್ಷೇತ್ರ ನಿಗಮ. ವೇತನ 25,000 ಪ್ರತೀ ತಿಂಗಳು ನೀಡಲಾಗುವುದು. ಕೌಶಲ ಮತ್ತು ಶೈಕ್ಷಣಿಕ ಅರ್ಹತೆ ನೋಡುವುದಾದರೆ, ವಿದ್ಯಾರ್ಹತೆ MBBS ಹಾಗೂ ಕಾರ್ಯಾನುಭವ 2 ವರ್ಷ ಉದ್ಯೋಗ ಸ್ಥಳ ಹುಬ್ಬಳ್ಳಿ. ಆಸಕ್ತರು ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಮೇಲೆ ಹೇಳಿದ ದಿನಾಂಕದ ಒಳಗೆ ಅರ್ಜಿ ಸಲ್ಲಿಸಬಹುದು.