ದೇಶದ ಬೆನ್ನೆಲುಬು ಎಂದು ರೈತರನ್ನು ಕರೆಯುತ್ತಾರೆ ಆದರೆ ದೇಶಕ್ಕೆ ಅನ್ನ ನೀಡುವ ರೈತರು ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪುತ್ತಿದ್ದಾರೆ. ರೈತರ ಸಾವಿಗೆ ಅವರು ಅನುಭವಿಸುತ್ತಿರುವ ಸಮಸ್ಯೆಗಳೇ ಕಾರಣ. ರೈತರ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಡಾಕ್ಟರ್ ನಾಗರಾಜ್ ಸಿ ಅವರು ಒಂದು ಯಂತ್ರವನ್ನು ಆವಿಷ್ಕಾರ ಮಾಡಿದ್ದಾರೆ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ರೈತರಿಗೆ ಹಲವು ಸಮಸ್ಯೆಗಳು ಎದುರಾಗುತ್ತವೆ ಕಳೆ ತೆಗೆಯುವುದು, ಉಳುಮೆ ಮಾಡುವುದು, ಕೆಲಸ ಮಾಡಿಸುವುದು ಇತ್ಯಾದಿ ಸಮಸ್ಯೆಗಳು. ಡಾಕ್ಟರ್ ನಾಗರಾಜ್ ಸಿ ಅವರು ಮಾರುತಿ ಕೃಷಿ ಉದ್ಯೋಗ ಸಂಸ್ಥೆಯ ಸ್ಥಾಪಕರು ಆಗಿದ್ದಾರೆ ಅವರು ರೈತರ ಸಮಸ್ಯೆಗಳಿಗೆ ಪರಿಹಾರ ಸಿಗಲಿ ಎಂದು 35 ವರ್ಷಗಳ ಸತತ ಪ್ರಯತ್ನದಿಂದ ಒಂದು ಮಷೀನ್ ಅನ್ನು ಕಂಡುಹಿಡಿದಿದ್ದಾರೆ ಇದಕ್ಕೆ ಅವರು ಬಹಳ ಹಣ ಖರ್ಚು ಮಾಡಿದ್ದಾರೆ. ಈ ಯಂತ್ರದಿಂದ ರೈತರು ಎಲ್ಲಾ ಕೆಲಸಗಳನ್ನು ಮಾಡಿಕೊಳ್ಳುವಂತೆ ಆವಿಷ್ಕಾರ ಮಾಡಲಾಗಿದೆ. ರೈತರ ಪ್ರಮುಖ ಸಮಸ್ಯೆಗಳಾದ ಕಳೆ ತೆಗೆಯುವುದು, ಉಳುಮೆ ಮಾಡುವುದು, ಬಿತ್ತನೆ ಮಾಡುವುದು, ನೀರೆತ್ತುವುದು, ಸ್ಪ್ರೇ ಮಾಡುವುದು, ಹಾಲು ಹಿಂಡುವುದು ಇಷ್ಟೆಲ್ಲಾ ಕೆಲಸಗಳನ್ನು ಒಂದೇ ಯಂತ್ರದ ಸಹಾಯದಿಂದ ಮಾಡಬಹುದು.
ಈ ಯಂತ್ರಕ್ಕೆ ಸೆಂಟ್ರಲ್ ಗೌರ್ನಮೆಂಟ್ ಕೃಷಿ ಸಂಸ್ಥೆಯಿಂದ ಟೆಸ್ಟ್ ರಿಪೋರ್ಟ್ ಕೂಡ ಆಗಿದೆ. ಬಹಳಷ್ಟು ರೈತರು ಈ ಯಂತ್ರವನ್ನು ಖರೀದಿಸಿ ತಮ್ಮ ಕೆಲಸಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಅಂಗವಿಕಲರು, ಮಹಿಳೆಯರು ಸಹ ಈ ಮಷೀನ್ ಅನ್ನು ಆಪರೇಟ್ ಮಾಡಬಹುದಾಗಿದೆ. ಟ್ರ್ಯಾಕ್ಟರ್ ಇಂದ ಉಳುಮೆ ಮಾಡಿದರೆ ಭೂಮಿಯಲ್ಲಿರುವ ಸತ್ವ ಹಾಳಾಗುತ್ತದೆ ಆದರೆ ಈ ಮಷೀನ್ ಆರ್ಗಾನಿಕ್ ಟಿಲ್ಲಿಂಗ್ ಇರುವುದರಿಂದ ಭೂಮಿಯ ಸತ್ವ ಹಾಳಾಗದಂತೆ ನೋಡಿಕೊಳ್ಳುತ್ತದೆ. ಪ್ರಪಂಚದಲ್ಲೇ ಮೊದಲ ಬಾರಿಗೆ ಆರ್ಗಾನಿಕ್ ಟಿಲ್ಲಿಂಗ್ ಬಳಸಿ ಯಂತ್ರವನ್ನು ತಯಾರು ಮಾಡಲಾಗಿದೆ.
ಈ ಮಷೀನ್ ಬಳಸುವುದರಿಂದ ಕಡಿಮೆ ಖರ್ಚಿನಲ್ಲಿ ಇಳುವರಿ ಹೆಚ್ಚು ಬರುತ್ತದೆ. ಈ ಮಷೀನ್ ಬೆಲೆ 86,000 ರೂಪಾಯಿಗಳು. ಈ ಮಷೀನನ್ನು ಖರೀದಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಸಹಾಯಧನವನ್ನು ನೀಡುತ್ತದೆ. ಯಂತ್ರವು ಸಂಪೂರ್ಣ ಸ್ವದೇಶಿ ಯಂತ್ರವಾಗಿದೆ. ಈ ಮಷೀನ್ ನಿಂದ ಉಳುಮೆ ಮಾಡುವುದರಿಂದ ಬಹಳಷ್ಟು ಪ್ರಯೋಜನಕಾರಿ ಇದೆ ಇದು ಭೂಮಿಯಲ್ಲಿ ನೀರು ಹೆಚ್ಚು ಇಂಗುವಂತೆ ಮಾಡುತ್ತದೆ. ಈ ಮಷೀನ್ ಆವಿಷ್ಕಾರದಿಂದ ಅವರಿಗೆ ಡಾಕ್ಟರೇಟ್ ದೊರೆತಿದೆ. ರೈತರ ಸಮಸ್ಯೆಗಳನ್ನು ತಮ್ಮ ಸಮಸ್ಯೆ ಎಂದು ತಿಳಿದು ಅವರಿಗಾಗಿ ಒಂದು ಮಷೀನ್ ಅನ್ನು ಆವಿಷ್ಕಾರ ಮಾಡಿ ರೈತರ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಕೆಲಸವನ್ನು ಮಾಡಿರುವ ಡಾಕ್ಟರ್ ನಾಗರಾಜ್ ಸಿ ಅವರಿಗೆ ಈ ಮೂಲಕ ಧನ್ಯವಾದ ತಿಳಿಸೋಣ.