ಅನೇಕ ಇಲಾಖೆಗಳು ತಮ್ಮ ಪರಿಧಿಯಲ್ಲಿ ಬರುವ ಹಲವು ವಿಷಯಗಳ ಬಗ್ಗೆ ಹಲವಾರು ಆದೇಶಗಳನ್ನು ಹೊರಡಿಸುತ್ತದೆ. ಅದೇ ರೀತಿ ಸಾರಿಗೆ ಇಲಾಖೆಯು ರಸ್ತೆಯಲ್ಲಿ ಆಗುವ ಅಪಘಾತಗಳನ್ನು ತಡೆಯುವ ಸಲುವಾಗಿ ಪ್ರಮುಖ ಆದೇಶಗಳನ್ನು ಜಾರಿಗೆ ತಂದಿದ್ದಾರೆ. ಅದರಲ್ಲಿ ಒಂದು ಆದೇಶದ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ.
ದ್ವಿ ಚಕ್ರ ವಾಹನಗಳಾದ ಬೈಕ್, ಕಾರು, ಇತರೆ ಯಾವುದೇ ರೀತಿಯ ವಾಹನಗಳನ್ನು ಹೊಂದಿದ್ದರೆ ಕೇಂದ್ರ ಸಾರಿಗೆ ಇಲಾಖೆ ಹೊರಡಿಸಿದ ಆದೇಶಗಳನ್ನು ಪಾಲಿಸಬೇಕು. ಒಂದು ವೇಳೆ ಪಾಲಿಸದೆ ಇದ್ದರೆ 5,500 ರೂಪಾಯಿ ದಂಡ ಹಾಕಲಾಗುತ್ತದೆ. ಮೋಟಾರು ವಾಹನ ನಿಯಮದ ಪ್ರಕಾರ ವಾಹನಗಳಿಗೆ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಕಡ್ಡಾಯಗೊಳಿಸಿದೆ ಒಂದು ವೇಳೆ ಅಳವಡಿಸದೇ ಇದ್ದರೆ 5,500 ರೂಪಾಯಿ ದಂಡ ವಿಧಿಸಲಾಗುತ್ತದೆ.
ಸುಪ್ರೀಂ ಕೋರ್ಟ್ ಎರಡು ವರ್ಷದ ಹಿಂದೆ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಇರಬೇಕು ಎಂದು ಕಡ್ಡಾಯ ಆದೇಶ ಹೊರಡಿಸಿತ್ತು. ಪೊಲೀಸರು ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಹಾಕಿಸಲು ಹಲವು ಗಡುವುಗಳನ್ನು ನೀಡಿದ್ದಾರೆ ಅದರಂತೆ ದೆಹಲಿ ಪೊಲೀಸರು ನಗರದ ಎಲ್ಲ ವಾಹನಗಳ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಕಡ್ಡಾಯಗೊಳಿಸಬೇಕೆಂದು ಈ ಮೊದಲು ಸುತ್ತೋಲೆ ಹೊರಡಿಸಿದ್ದಾರೆ.
ಈಗ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಕಡ್ಡಾಯಗೊಳಿಸಿದೆ. ಈ ನಂಬರ್ ಪ್ಲೇಟ್ ಬೆಂಗಳೂರು, ಕರ್ನಾಟಕ ಸೇರಿದಂತೆ ದೇಶದ ಎಲ್ಲ ಭಾಗಗಳಲ್ಲಿ ಕಡ್ಡಾಯವಾಗಿದೆ. ಒಟ್ಟಿನಲ್ಲಿ ಕೇಂದ್ರ ಸಾರಿಗೆ ಇಲಾಖೆಯು ದೇಶದಲ್ಲಿ ಹೆಚ್ಚುತ್ತಿರುವ ಅಪಘಾತಗಳನ್ನು ತಗ್ಗಿಸಲು ಅನೇಕ ರೀತಿಯ ಪ್ರಯತ್ನ ಮಾಡುತ್ತಿದೆ. ಅದರಂತೆ ಅನೇಕ ಸಾರಿಗೆ ನಿಯಮವನ್ನು ಜಾರಿಗೆ ತರುತ್ತಿದ್ದು ಇದರಿಂದ ವಾಹನಗಳು ಕಳ್ಳತನವಾಗುವುದನ್ನು ತಪ್ಪಿಸಲು ಮತ್ತೊಂದು ಹೊಸ ನಿಯಮವನ್ನು ಜಾರಿಗೆ ತರಲಾಗಿದೆ.
ಕಡ್ಡಾಯವಾಗಿ ಎಲ್ಲರೂ ಕೂಡ ತಮ್ಮ ವಾಹನಗಳಿಗೆ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಬೇಕು. ವಾಹನಗಳಿಗೆ ಸೂಕ್ತವಾದ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಅನ್ನು ತಪ್ಪದೇ ಮಾಡಿಸುವುದು ಉತ್ತಮ. ಇದರಿಂದ ವಾಹನಗಳು ಸುರಕ್ಷಿತವಾಗಿರುತ್ತದೆ. ಈ ಮಾಹಿತಿಯನ್ನು ತಪ್ಪದೇ ಎಲ್ಲರಿಗೂ ತಿಳಿಸಿ.