ಸೀಬೆಹಣ್ಣು ಇದನ್ನು ಪೇರಳೆಹಣ್ಣು ಎಂದೂ ಕೂಡ ಕರೆಯುತ್ತಾರೆ. ಇದು ಸುಮಾರು ಎಲ್ಲಾ ಸಮಯದಲ್ಲೂ ಕೂಡ ಕಾಣ ಸಿಗುತ್ತದೆ. ಇದರಲ್ಲಿ ಒಳಗಡೆ ಹಳದಿಯಾಗಿ ಇರುವುದು ಒಂದು ವಿಧವಾದರೆ ಒಳಗಡೆ ಕೆಂಪು ಇರುವುದು ಇನ್ನೊಂದು ವಿಧವಾಗಿದೆ. ಇದು ತಿನ್ನಲು ಬಹಳ ರುಚಿಕರವಾಗಿರುತ್ತದೆ. ಇದರಿಂದ ಹಲವಾರು ಪ್ರಯೋಜನಗಳು ಇವೆ. ಆದ್ದರಿಂದ ನಾವು ಇಲ್ಲಿ ಸೀಬೆಹಣ್ಣಿನ ಮತ್ತು ಅದರ ಎಲೆಯ ಪ್ರಯೋಜನಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಸೀಬೆಹಣ್ಣು ಇದು ನೋಡಲು ಹಸಿರು ಬಣ್ಣವನ್ನು ಹೊಂದಿರುತ್ತದೆ. ಹಾಗೆಯೇ ಒಂದು ರೀತಿಯ ಪರಿಮಳವನ್ನು ಹೊಂದಿರುತ್ತದೆ. ಇದರಿಂದ ಅನೇಕ ಪ್ರಯೋಜನಗಳು ಇವೆ. ಸೀಬೆಹಣ್ಣಿನ ಕಷಾಯವನ್ನು ಮಾಡಿ ಕುಡಿಯಬೇಕು. ಇದರಿಂದ ಕಾಮಾಲೆ ರೋಗ ದೂರವಾಗುತ್ತದೆ. ಹಾಗೆಯೇ ನಾಲ್ಕರಿಂದ ಐದು ಸೀಬೆಯ ಎಲೆಯನ್ನು ಕೊಯ್ದು ತಂದು ಸ್ವಲ್ಪ ಬಿಸಿನೀರಿನಲ್ಲಿ ಬಿಸಿ ಮಾಡಿ ಬೆಲ್ಲವನ್ನು ಸೇರಿಸಿದರೂ ಕೂಡ ಕಾಮಾಲೆ ರೋಗ ನಿವಾರಣೆ ಆಗುತ್ತದೆ ಎಂದು ಒಂದು ಸಂಶೋಧನೆ ಹೇಳಿದೆ. ಹಾಗೆಯೇ ಕೂದಲುಗಳು ಉದುರುವುದು ಎಲ್ಲರಿಗೂ ಸರ್ವೇ ಸಾಮಾನ್ಯ ಆಗಿದೆ.
ಇದಕ್ಕೆ ಇಲ್ಲಿ ಸುಲಭವಾದ ಪರಿಹಾರವಿದೆ. ಹತ್ತು ಸೀಬೆ ಎಲೆಗಳನ್ನು ತಂದು ಒಂದು ಲೀಟರ್ ನೀರಿನಲ್ಲಿ ಹಾಕಿ ಕಾಲು ತಾಸುಗಳ ಕಾಲ ಚೆನ್ನಾಗಿ ಕುದಿಸಬೇಕು. ಆ ನೀರನ್ನು ತಲೆಗೆ ಹಚ್ಚಿ 20 ನಿಮಿಷಗಳ ಕಾಲ ಬಿಡಬೇಕು. ನಂತರ ತಲೆಸ್ನಾನ ಮಾಡಬೇಕು. ಇದರಿಂದ ಸಂಪೂರ್ಣವಾಗಿ ಕೂದಲು ಉದುರುವ ಸಮಸ್ಯೆ ದೂರವಾಗುತ್ತದೆ. ಹಾಗೆಯೇ ಕೂದಲು ಸೊಂಪಾಗಿ ಬೆಳೆಯುತ್ತದೆ. ಮುಖಕ್ಕೆ ಮೊಡವೆಗಳು ಆದಾಗ ಈ ಎಲೆಯನ್ನು ನುಣ್ಣಗೆ ಅರೆಯಬೇಕು. ಇದನ್ನು ಮುಖಕ್ಕೆ ಹಚ್ಚಿಕೊಳ್ಳಬೇಕು. ಇದರಿಂದ ಮೊಡವೆಗಳು ಕಡಿಮೆ ಆಗುತ್ತವೆ.
ದೇಹದಲ್ಲಿ ಅಧಿಕ ಉಷ್ಣತೆ ಉಂಟಾದಾಗ ಬಾಯಿಯಲ್ಲಿ ಹುಣ್ಣು ಉಂಟಾಗುತ್ತದೆ. ಆಗ ಸೀಬೆಯ ಎಲೆಯನ್ನು ಅರೆದು ಹುಣ್ಣು ಆದ ಜಾಗದಲ್ಲಿ ಇಟ್ಟುಕೊಳ್ಳಬೇಕು. ಇದರಿಂದ ನೋವು ಬೇಗನೆ ವಾಸಿಯಾಗುತ್ತದೆ. ಹಾಗೆಯೇ ಇದು ಶ್ವಾಸಕೋಶಕ್ಕೆ ಸಂಬಂಧಿಸಿದ ಖಾಯಿಲೆಗಳಿಗೆ ರಾಮಬಾಣವಾಗಿದೆ. ನಂತರದಲ್ಲಿ ಸೀಬೆಯ ಎಲೆಯನ್ನು ಅಗೆದು ತಿನ್ನುವುದರಿಂದ ಹಲ್ಲುನೋವು ಮತ್ತು ಬಾಯಿಯ ದುರ್ವಾಸನೆ ಕಡಿಮೆ ಆಗುತ್ತದೆ. ದಿನಕ್ಕೆ ಎರಡು ಬಾರಿ ಸೀಬೆ ಎಲೆಯ ಕಷಾಯ ಕುಡಿದರೆ ಬೊಜ್ಜು ಕರಗುತ್ತದೆ. ಹಾಗೆಯೇ ಇದು ಸಕ್ಕರೆ ಖಾಯಿಲೆಯನ್ನು ಹತೋಟಿಯಲ್ಲಿ ಇಡುತ್ತದೆ.