ಅಭಿನಯ ಚಕ್ರವರ್ತಿ ಎಂದು ಸುದೀಪ್ ಅವರನ್ನು ಕರೆಯಲಾಗುತ್ತದೆ. ಭಾರತೀಯ ಚಿತ್ರರಂಗದಲ್ಲಿ ಹೆಸರು ಮಾಡಿದ ನಟರಲ್ಲಿ ಸುದೀಪ್ ಅವರು ಕೂಡ ಒಬ್ಬರು. ಇವರ ನಟನೆ ಎಲ್ಲರಿಗೂ ಇಷ್ಟವಾಗುತ್ತದೆ. ಇವರ ನಟನೆ ನೋಡಿದ ಮೇಲೆ ಎಲ್ಲರೂ ಅಭಿಮಾನಿಗಳಾಗಲೇ ಬೇಕು. ಕಿಚ್ಚ ಸುದೀಪ್ ಹೆಸರು ಕೇಳಿದರೆ ಮೈ ನಡಗುತ್ತದೆ. ಸಾಮಾನ್ಯ ವ್ಯಕ್ತಿಯಾಗಿದ್ದರೂ ಈಗ ಸ್ಟಾರ್ ನಟನಾಗಿ ಬೆಳೆದದ್ದು ಒಂದು ಆಶ್ಚರ್ಯಕರ ಸಂಗತಿ. ಆದ್ದರಿಂದ ನಾವು ಇಲ್ಲಿ ಸುದೀಪ್ ಅವರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಸುದೀಪ್ ಅವರು ಕೇವಲ ನಟ ಮಾತ್ರ ಅಲ್ಲ. ಗಾಯಕ ಕೂಡ ಆಗಿದ್ದಾರೆ. ಹಾಗೆಯೇ ನಿರ್ದೇಶಕ ಮತ್ತು ನಿರ್ಮಾಹಕ ನಿರ್ಮಾಪಕ ಕೂಡ ಆಗಿದ್ದಾರೆ. ಇವರು ಇಂತಹ ದೊಡ್ಡ ಸ್ಟಾರ್ ಆಗಲು ಅನೇಕ ನೋವುಗಳನ್ನು ಅನುಭವಿಸಿದ್ದಾರೆ. ಇವರು 1973ರಲ್ಲಿ ಶಿವಮೊಗ್ಗದಲ್ಲಿ ಜನಿಸಿದ್ದಾರೆ. ಇವರ ತಂದೆ ಸಂಜೀವ್ ಸರೋವರ್. ಅವರ ತಾಯಿ ಸರೋಜಾ ಸಂಜೀವ್. ಇವರ ಪತ್ನಿ ಹೆಸರು ಪ್ರಿಯ ರಾಧಾಕೃಷ್ಣನ್. ಸುದೀಪ್ ಅವರು 2003ರಲ್ಲಿ ಪ್ರಿಯ ಅವರನ್ನು ವಿವಾಹವಾದರು. ಹಾಗೆಯೇ ಇವರಿಗೆ ಸಾನ್ವಿ ಎನ್ನುವ ಮಗಳಿದ್ದಾಳೆ.
ಇವರು ಅನೇಕ ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ. ಇವರು ಮೊದಲು ನಟಿಸಿದ ಕನ್ನಡ ಸಿನಿಮಾ ಎಂದರೆ ಅದು ತಾಯವ್ವ. ಇದರ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಕೇವಲ ಕನ್ನಡ ಮಾತ್ರವಲ್ಲದೆ ಹಿಂದಿ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಕೂಡ ಇವರ ನಟನೆ ಮಾಡಿದ್ದಾರೆ. ಇವರ ಕೆಲವು ಸಿನಿಮಾಗಳಿಗೆ ಹಲವಾರು ಪ್ರಶಸ್ತಿಗಳು ಸಂದಿವೆ. ಹುಚ್ಚಾ, ನಂದಿ ಮತ್ತು ಸ್ವಾತಿ ಮುತ್ತು ಚಿತ್ರಗಳಿಗಾಗಿ ಸತತ ಮೂರು ವರ್ಷಗಳ ಕಾಲ ಕನ್ನಡದ ಅತ್ಯುತ್ತಮ ನಟನಿಗಾಗಿ ಫಿಲ್ಮ್‌ಫೇರ್ ಪ್ರಶಸ್ತಿ ಪಡೆದರು. 2013 ರಿಂದ ಅವರು ಟೆಲಿವಿಷನ್ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡದ ನಿರೂಪಕರಾಗಿದ್ದಾರೆ.
ಬಿಗ್ ಬಾಸ್ ಶೋವನ್ನು ಸುದೀಪ್ ಅವರು ಬಹಳ ಚೆನ್ನಾಗಿ ನಿರೂಪಣೆ ಮಾಡಿಕೊಡುತ್ತಾರೆ. ಈಗ ಸುಮಾರು 7 ಶೋಗಳು ನಡೆದಿದೆ. ನಡೆದ 7ಶೋಗಳನ್ನು ಸುದೀಪ್ ಅವರು ಬಹಳ ಅದ್ಭುತವಾಗಿ ಅಂದರೆ ಆ ನಿರೂಪಕನ ಸ್ಥಾನದಲ್ಲಿ ಮತ್ತೆ ಯಾರನ್ನು ವೀಕ್ಷಕರು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಈಗ ಬಿಗ್ಬಾಸ್ ಸೀಸನ್8 ರ ನಿರೂಪಣೆ ಕೂಡ ಅವರದೇ ಆಗಿದೆ. ತಮ್ಮ ಅಭಿನಯ ಮತ್ತು ಪ್ರಯತ್ನದ ಮೂಲಕ ಇವರು ಸುಮಾರು 25ವರ್ಷಗಳಲ್ಲಿ ಅದ್ಭುತ ಸಾಧನೆಗಳನ್ನು ಮಾಡಿ ಯಶಸ್ಸು ಗಳಿಸಿದ್ದಾರೆ.