ಚಿಕ್ಕ ಚಿಕ್ಕ ಮಕ್ಕಳು ನೋಡಲು ಸುಂದರ ಮತ್ತು ಮುಗ್ಧವಾಗಿರುತ್ತವೆ. ಆದ್ದರಿಂದ ಚಿಕ್ಕ ಮಕ್ಕಳಿಗೆ ದೃಷ್ಟಿ ಬೀಳಬಾರದು ಎಂದು ಕಾಡಿಗೆಯನ್ನು ಹಚ್ಚಿರುತ್ತಾರೆ. ಅದರಲ್ಲೂ ಬೆಳ್ಳಗೆ ಇದ್ದರೆ ಚಿಕ್ಕ ಮಕ್ಕಳಿಗೆ ದೃಷ್ಟಿ ಬಿದ್ದೇ ಬೀಳುತ್ತದೆ. ದೃಷ್ಟಿ ಬಿದ್ದರೆ ಮಕ್ಕಳಿಗೆ ಕೆಟ್ಟದಾಗಿ ಪರಿಣಾಮಗಳು ಉಂಟಾಗುತ್ತವೆ. ಆದರೆ ಇದರ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಕಾಡಿಗೆಯು ಕಣ್ಣಿನ ಅಂದವನ್ನು ಹೆಚ್ಚಿಸುತ್ತದೆ. ಮಹಿಳೆಯರು ಹೆಚ್ಚಾಗಿ ಕಾಡಿಗೆಯನ್ನು ಹಚ್ಚಿಕೊಳ್ಳುತ್ತಾರೆ. ಹಾಗೆಯೇ ಮಕ್ಕಳಿಗೂ ಸಹ ಹಚ್ಚುತ್ತಾರೆ. ಇದಕ್ಕೆ ಕಾರಣ ದೃಷ್ಟಿ ಬೀಳಬಾರದು ಎನ್ನುವುದು. ಆದರೆ ಕಾಡಿಗೆ ಹಚ್ಚುವಾಗ ಮಕ್ಕಳ ಕಣ್ಣಿಗೆ ತಾಗುತ್ತದೆ. ಇದರಿಂದ ಅವರಿಗೆ ನೋವಾಗುತ್ತದೆ. ಆದ್ದರಿಂದ ಮಕ್ಕಳ ಕಣ್ಣಿಗೆ ಕಾಡಿಗೆ ಹಚ್ಚದೇ ಇದ್ದರೆ ಒಳ್ಳೆಯದು. ಮಕ್ಕಳಿಗೆ ಕಣ್ಣಿಗೆ ಕಾಡಿಗೆ ಹಚ್ಚಿದರೆ ಕಣ್ಣಿನಿಂದ ನೀರು ಬರುತ್ತದೆ. ಇದರಿಂದ ಸೋಂಕು ಉಂಟಾಗುವ ಸಂಭವ ಹೆಚ್ಚು.
ಹಾಗೆಯೇ ಪ್ರತಿದಿನ ಮಕ್ಕಳ ಕಣ್ಣಿಗೆ ಕಾಡಿಗೆ ಹಚ್ಚಬಾರದು. ಇದರಿಂದ ಸ್ವಲ್ಪ ಪ್ರಮಾಣದ ಕಾಡಿಗೆ ಕಣ್ಣಿನಲ್ಲಿ ಉಳಿಯುತ್ತದೆ. ಇದು ಅಲರ್ಜಿಗೆ ಕಾರಣವಾಗುತ್ತದೆ. ತುರಿಕೆ ಉಂಟಾಗಿ ಅಸ್ಪ್ರಶ್ಯತೆ ಸಮಸ್ಯೆ ಕೂಡ ಸಂಭವ ಆಗುವ ಸಾಧ್ಯತೆ ಇದೆ. ಹಾಗೆಯೇ ಕಾಡಿಗೆಗೆ ಸೀಸವನ್ನು ಸೇರಿಸಿರುತ್ತಾರೆ. ಇದು ಅತಿಯಾದ ಪ್ರಮಾಣದಲ್ಲಿ ಇದ್ದರೆ ಮಕ್ಕಳ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಮೆದುಳಿನ ಬೆಳವಣಿಗೆ ಕುಂಠಿತವಾಗುತ್ತದೆ.
ಆದ್ದರಿಂದ ಕೊನೆಯದಾಗಿ ಹೇಳುವುದೇನೆಂದರೆ ಮಕ್ಕಳಿಗೆ ಮನೆಯಲ್ಲಿ ತಯಾರಿಸಿದ ಕಾಡಿಗೆಯನ್ನು ಹಚ್ಚಬೇಕು. ಸ್ವಚ್ಛತೆಯ ಬಗ್ಗೆ ಹೆಚ್ಚಿನ ಗಮನ ನೀಡಬೇಕು. ಕಾಡಿಗೆ ಹಚ್ಚಿದ ತಕ್ಷಣ ಮಕ್ಕಳು ಕಣ್ಣಿಗೆ ಕೈ ಹಾಕಿದರೆ ತುರಿಕೆ ಉಂಟಾಗಿದೆ ಎಂದು ತಿಳಿಯಬಹುದು. ಹಾಗಾಗಿ ತಕ್ಷಣ ಮಗುವಿನ ಕಾಡಿಗೆಯನ್ನು ಅಳಿಸಬೇಕು. ಚಿಕ್ಕ ಮಕ್ಕಳಿಗೆ ಕೆನ್ನೆಗೆ ಮತ್ತು ಗಲ್ಲಕ್ಕೆ ಹಚ್ಚಿದರೆ ಸಾಕಾಗುತ್ತದೆ. ಕಣ್ಣಿಗೆ ಹಚ್ಚುವ ಅವಶ್ಯಕತೆ ಇರುವುದಿಲ್ಲ.