ಇತ್ತೀಚೆಗೆ ಅವ್ಯವಸ್ಥಿತ ಆಹಾರ ಪದ್ಧತಿಯಿಂದ ಅಜೀರ್ಣ, ಇನ್ನಿತರ ಹೊಟ್ಟೆ ಸಮಸ್ಯೆ ಕಂಡುಬರುತ್ತದೆ. ಇದಕ್ಕೆ ವೈದ್ಯರ ಬಳಿ ಹೋದರೆ ಟ್ಯಾಬ್ಲೆಟ್ ಕೊಡುತ್ತಾರೆ ಮತ್ತು ಕಿರಿ ಕಿರಿ ಆಗುತ್ತದೆ ಆದ್ದರಿಂದ ಮನೆಯಲ್ಲೇ ಸಿಗುವ ಸಾಮಗ್ರಿಗಳನ್ನು ಬಳಸಿ, ಯಾವುದೇ ರೀತಿಯ ಖರ್ಚು ಇಲ್ಲದೆ ಮನೆ ಮದ್ದನ್ನು ತಯಾರಿಸಬಹುದು. ಮನೆ ಮದ್ದನ್ನು ತಯಾರಿಸಲು ಯಾವ ಸಾಮಗ್ರಿ ಬೇಕು ಹಾಗೂ ಹೇಗೆ ಮಾಡಬೇಕು ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಪದೇ ಪದೇ ಅಜೀರ್ಣ, ಹೊಟ್ಟೆ ಉಬ್ಬರ ಕಾಣಿಸಿಕೊಂಡರೆ ಇದಕ್ಕೆ ಕಾರಣ ಆಹಾರದಲ್ಲಿ ಹೆಚ್ಚು ಕಡಿಮೆ ಆಗಿರುವುದು ಇದರ ಸಲುವಾಗಿ ವೈದ್ಯರ ಬಳಿ ಹೋಗಿ ಟ್ಯಾಬ್ಲೆಟ್ ತೆಗೆದುಕೊಳ್ಳುವ ಬದಲು ಮನೆಯಲ್ಲೇ ಸುಲಭವಾಗಿ ಮನೆ ಮದ್ದನ್ನು ತಯಾರಿಸಿ ಈ ಸಮಸ್ಯೆಯನ್ನು ಉಪಶಮನ ಮಾಡಿಕೊಳ್ಳಬಹುದು.
ಈ ಮನೆ ಮದ್ದು ತಯಾರಿಸಲು ಬೇಕಾಗುವ ಸಾಮಗ್ರಿಗಳು ಜೀರಿಗೆ, ನೀರು, ನಿಂಬು. ಮೊದಲು ರಾತ್ರಿ ಎರಡು ಚಮಚ ಜೀರಿಗೆಯನ್ನು ಒಂದು ಕಪ್ ನೀರಿನಲ್ಲಿ ನೆನೆಸಿಡಬೇಕು ಬೆಳಗ್ಗೆ ಸೋಸಿ ಅದಕ್ಕೆ ಅರ್ಧ ಲಿಂಬೆಯ ರಸ ಸೇರಿಸಿ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ನಿಂಬೆಯಲ್ಲಿ ವಿಟಮಿನ್ ಸಿ ಇದ್ದು ದೇಹದಿಂದ ವಿಷವನ್ನು ಹೊರಹಾಕುವ ಆಂಟಿ ಆಕ್ಸಿಡೆಂಟ್ ನಂತೆ ನಿಂಬು ಕೆಲಸ ಮಾಡುತ್ತದೆ. ಜೀರಿಗೆ ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ ಅಲ್ಲದೇ ತೂಕವನ್ನು ಇಳಿಸಲು ಸಹಾಯಕಾರಿಯಾಗಿದೆ.
ಜೀರಿಗೆ ನೀರು ಕುಡಿಯುವುದರಿಂದ ಹೊಟ್ಟೆ ತುಂಬಿದ ಅನುಭವ ಕೊಡುತ್ತದೆ. ಇತ್ತೀಚಿನ ಮಕ್ಕಳ ಸಮಸ್ಯೆಯಾದ ಅನಾರೋಗ್ಯಕರ ಜಂಕ್ ಫುಡ್ ಸೇವಿಸುವುದನ್ನು ತಪ್ಪಿಸಬಹುದು. ಜೀರಿಗೆ ನೀರನ್ನು ಸರಿಯಾದ ಪ್ರಮಾಣದಲ್ಲಿ ಕುಡಿದರೆ ಗ್ಯಾಸ್ ಸಮಸ್ಯೆಯನ್ನು ಕೂಡ ನಿವಾರಿಸುತ್ತದೆ.
ಜೀರಿಗೆ ನೀರನ್ನು ಕುಡಿಯುವುದರಿಂದ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವನ್ನು ತಗ್ಗಿಸಿ ಒಳ್ಳೆಯ ಕೊಲೆಸ್ಟ್ರಾಲ್ ಅನ್ನು ದೇಹದಲ್ಲಿ ಉಳಿಸಿ ಅಪಧಮನಿ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಜೀರಿಗೆ ನೀರು ತ್ವಚೆಯ ಸಮಸ್ಯೆಯನ್ನು ಕೂಡ ಕಡಿಮೆ ಮಾಡುತ್ತದೆ.
ತ್ವಚೆಯ ಸಮಸ್ಯೆಯನ್ನು ನಿವಾರಿಸಿ ತ್ವಚೆ ಕಾಂತಿಯುತವಾಗಿ, ಯೌವ್ವನದಂತೆ ಕಾಣಬಹುದು. ಜೀರಿಗೆ ನೀರನ್ನು ಕುಡಿಯುವುದರಿಂದ ದೇಹಕ್ಕೆ ಸಾಕಷ್ಟು ರೀತಿಯಲ್ಲಿ ಸಹಾಯಕವಾಗುತ್ತದೆ. ಊಟದ ನಂತರ ಸ್ವಲ್ಪ ಜೀರಿಗೆ ತಿಂದು ನೀರನ್ನು ಕುಡಿಯುವುದರಿಂದ ಅಜೀರ್ಣ ಸಮಸ್ಯೆ ನಿವಾರಣೆಯಾಗುತ್ತದೆ. ಒಟ್ಟಿನಲ್ಲಿ ಜೀರಿಗೆಯಿಂದ ದೇಹಕ್ಕೆ ಸಾಕಷ್ಟು ಒಳ್ಳೆಯ ಆರೋಗ್ಯಕರ ಪ್ರಯೋಜನವಿದೆ. ಈ ಮಾಹಿತಿಯನ್ನು ತಪ್ಪದೇ ಎಲ್ಲರಿಗೂ ತಿಳಿಸಿ.