ಸೌಂದರ್ಯ ಎನ್ನುವುದು ಪುರುಷರಿಗೂ ಮುಖ್ಯ, ಮಹಿಳೆಯರಿಗೂ ಮುಖ್ಯ. ನಾರುಣ್ಣೆ ಎನ್ನುವುದು ಚರ್ಮದ ಖಾಯಿಲೆಯಾಗಿದೆ. ನಮ್ಮ ದೇಹದ ಎಲ್ಲಾ ಅಣುಗಳಿಗೂ ಇಂತಿಷ್ಟು ಸಮಯ ಅಂತಿರುತ್ತದೆ ಆ ಸಮಯದ ನಂತರ ಅದು ಸತ್ತುಹೋಗುತ್ತದೆ ನಂತರ ಹೊಸ ಸೆಲ್ ಉತ್ಪತ್ತಿಯಾಗುತ್ತದೆ ಇದು ಪ್ರಕೃತಿಯ ನಿಯಮ. ಸ್ಕಿನ್ ಸೆಲ್ಸ್ ಸತ್ತುಹೋದ ನಂತರ ಹೊರಗಡೆ ಹೋಗುವುದಿಲ್ಲ ಅದು ಅಲ್ಲಿಯೇ ಇರುತ್ತದೆ ಆಗ ಡೆಡ್ ಟಿಶ್ಯೂ ಅಕ್ಯುಮುಲೇಟ್ ಆಗಿ ಆಗಿ ನಾರುಳ್ಳೆ ಆಗುವ ಸಾಧ್ಯತೆಗಳಿರುತ್ತದೆ. ಇದು ಹೋಗುವಂತೆ ನೈಸರ್ಗಿಕ ವಿಧಾನಗಳನ್ನು ಬಳಸಿದರೆ ಬಹಳ ಉತ್ತಮ. ಮನೆಮದ್ದಿನ ಮೂಲಕ ನಾರುಳ್ಳೆಯನ್ನು ಹೋಗಲಾಡಿಸಬಹುದು. ಈ ಮನೆಮದ್ದು ತಯಾರಿಸಲು ಮನೆಯಲ್ಲಿ ದಿನನಿತ್ಯ ಬಳಸುವ ಸಾಮಗ್ರಿಗಳು ಬೇಕಾಗುತ್ತದೆ.
ಸ್ವಲ್ಪ ಸುಣ್ಣಕ್ಕೆ ಎರಡು ಸ್ಪೂನ್ ನಿಂಬೆ ರಸ ಹಾಕಿ ಊದಿನ ಕಡ್ಡಿಯ ಹಿಂಭಾಗವನ್ನು ಅದ್ದಿ ನಾರುಳ್ಳೆಗೆ ಟಚ್ ಮಾಡಬೇಕು ಪಕ್ಕದ ಚರ್ಮಕ್ಕೆ ಟಚ್ ಆಗಬಾರದು ಹೀಗೆ ಸತತವಾಗಿ 7 ದಿನ ಮಾಡಬೇಕು. ಹೀಗೆ ಮಾಡುವುದರಿಂದ ನಾರುಳ್ಳೆ ತನ್ನಿಂತಾನೇ ಬಿದ್ದು ಹೋಗುತ್ತದೆ. ಈ ಮನೆಮದ್ದು ಮಾಡಿದರೂ ವಾಸಿಯಾಗದೆ ಇದ್ದರೆ ಆಯುರ್ವೇದದಲ್ಲಿ ಕ್ಷಾರ ಚಿಕಿತ್ಸೆ ಮಾಡುವ ಮೂಲಕ ನಾರುಳ್ಳೆಯನ್ನು ವಾಸಿ ಮಾಡಬಹುದು ಹೀಗಾಗಿ ಹತ್ತಿರದ ಆಯುರ್ವೇದ ಆಸ್ಪತ್ರೆಗೆ ಹೋಗುವುದು ಉತ್ತಮ. ಈ ಮಾಹಿತಿಯನ್ನು ತಪ್ಪದೇ ಎಲ್ಲರಿಗೂ ತಿಳಿಸಿ ಉಪಯುಕ್ತವಾಗಿದೆ.