ಭಾರತೀಯರು ಬಳಸುವಂತಹ ಪ್ರತಿಯೊಂದು ಸಾಂಬಾರ ಪದಾರ್ಥದಲ್ಲೂ ಹಲವಾರು ಆರೋಗ್ಯ ಗುಣಗಳು ಅಡಗಿವೆ. ಹಿಂದಿನವರ ಜೀವನಶೈಲಿ ಮತ್ತು ಆಹಾರ ಕ್ರಮವನ್ನು ನೋಡಿದರೆ ಅವರ ಆರೋಗ್ಯದ ಗುಟ್ಟು ತಿಳಿದುಬರುತ್ತದೆ. ಆದರೆ ಇಂದಿನ ಯುವಜನರು ಫಿಜ್ಜಾ, ಬರ್ಗರ್ ಎಂದು ಸಿಕ್ಕಿದೆಲ್ಲವನ್ನೂ ತಿಂದು ಯಾವುದೇ ದೈಹಿಕ ಚಟುವಟಿಕೆಗಳನ್ನು ನಡೆಸದೆ ಇರುವ ಪರಿಣಾಮವಾಗಿ ಅನಾರೋಗ್ಯವು ಬೆನ್ನತ್ತಿ ಬರುತ್ತಿದೆ. ಹೀಗಾಗಿ ನಾವು ನಮ್ಮ ಹಿರಿಯರಂತೆ ದೈಹಿಕವಾಗಿ ಫಿಟ್ ಆಗಿರಲು ತುಂಬಾ ಕಷ್ಟಬೇಕಾಗುತ್ತದೆ. ಆದ್ದರಿಂದ ನಾವು ಇಲ್ಲಿ ಬೆಳ್ಳುಳ್ಳಿ ನೀರನ್ನು ಕುಡಿದರೆ ಉಂಟಾಗುವ ಪ್ರಯೋಜನಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಪ್ರತಿನಿತ್ಯವು ನಾವು ಅಡುಗೆಯಲ್ಲಿ ಬಳಸುವಂತಹ ಸಾಂಬಾರ ಪದಾರ್ಥದಲ್ಲಿ ಬೆಳ್ಳುಳ್ಳಿ ಕೂಡ ಒಂದಾಗಿದೆ. ಇದನ್ನು ಒಗ್ಗರಣೆಗೆ ಹಾಕಿದರೆ ಸಾಕು ಅದರ ಪರಿಮಳ ಮೂಗಿಗೆ ಬಂದು ತಾಗುತ್ತದೆ. ಬೆಳ್ಳುಳ್ಳಿ ನೀರನ್ನು ಕುಡಿಯುವುದರಿಂದ ಹಲವಾರು ಪ್ರಯೋಜನಗಳು ಇವೆ. ಮೊದಲು 2 ಬೆಳ್ಳುಳ್ಳಿಯನ್ನು ಜಜ್ಜಿಕೊಂಡು ಅದನ್ನು ನೀರಿಗೆ ಹಾಕಿ ಚೆನ್ನಾಗಿ ಕುದಿಸಬೇಕು. ಇದರಿಂದ ಸಕ್ಕರೆ ಖಾಯಿಲೆ ಇದ್ದವರಿಗೆ ಸಕ್ಕರೆಯ ಗುಣಮಟ್ಟ ಸಮತೋಲನದಲ್ಲಿ ಇರುತ್ತದೆ. ಸಕ್ಕರೆ ಖಾಯಿಲೆ ಇದ್ದಾಗ ಸಕ್ಕರೆಯ ಪ್ರಮಾಣದಲ್ಲಿ ಸಮತೋಲನ ಕಾಯ್ದುಕೊಳ್ಳವುದು ಬಹಳ ಮುಖ್ಯ.
ರಕ್ತ ಒತ್ತಡ ಇರುವವರು ಸಹ ಇದನ್ನು ಕುಡಿದರೆ ಬಹಳ ಒಳ್ಳೆಯದು. ಹಾಗೆಯೇ ಕಿಡ್ನಿಯ ಸಮಸ್ಯೆಗಳಿಗೂ ಇದು ಬಹಳ ಒಳ್ಳೆಯದು. ಬೆಳ್ಳುಳ್ಳಿ ಅನೇಕ ದೇಹಕ್ಕೆ ಅಗತ್ಯವಾದ ಅಂಶಗಳನ್ನು ಒಳಗೊಂಡಿದೆ. ಹಾಗಾಗಿ ಇದನ್ನು ದಿನನಿತ್ಯ ಸೇವನೆ ಮಾಡುವುದರಿಂದ ಕಿಡ್ನಿಯ ಎಲ್ಲಾ ರೀತಿಯ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು. ಹಾಗೆಯೇ ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗೆಯೇ ಬೆಳ್ಳುಳ್ಳಿ ನೀರನ್ನು ಕುಡಿಯುವುದರಿಂದ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಬಹುದು.
ಬಹಳ ತೂಕ ಇರುವವರು ಇದನ್ನು ದಿನನಿತ್ಯ ಸೇವನೆ ಮಾಡಿದರೆ ದೇಹದಲ್ಲಿ ಇರುವ ಅನಗತ್ಯ ಬೊಜ್ಜನ್ನು ಕರಗಿಸಬಹುದು. ಹಾಗೆಯೇ ಬೆಳ್ಳುಳ್ಳಿ ಚಹಾವನ್ನು ಮಾಡಿ ಕುಡಿಯಬೇಕು. 2ಬೆಳ್ಳುಳ್ಳಿಯನ್ನು ತೆಗೆದುಕೊಂಡು ಅದನ್ನು ಜಜ್ಜಬೇಕು. ನಂತರದಲ್ಲಿ ಕುದಿಯುವ ನೀರಿಗೆ ಅದನ್ನು ಹಾಕಬೇಕು. ಸುಮಾರು ಹತ್ತು ನಿಮಿಷಗಳ ಕಾಲ ಚೆನ್ನಾಗಿ ಕುದಿಸಬೇಕು. ನಂತರದಲ್ಲಿ ಅದಕ್ಕೆ ಜೇನುತುಪ್ಪ ಮತ್ತು ನಿಂಬೆಯ ರಸವನ್ನು ಹಾಕಬೇಕು. ಆದ್ದರಿಂದ ಇದನ್ನು ಮಾಡಿ ಕುಡಿದು ಪ್ರಯೋಜನ ಪಡೆದುಕೊಳ್ಳಿ.