ಬಹಳಷ್ಟು ಮಹಿಳೆಯರು ಹೊರಗಡೆ ಕೆಲಸ ಮಾಡುವುದರಿಂದ ಬಿಸಿಲಿಗೆ ಕೈ, ಕಾಲು, ಮುಖ ಸುಟ್ಟು ಹೋಗುತ್ತದೆ. ಧೂಳಿನಿಂದ ಮುಖ ಡ್ರೈ ಆಗಿರುತ್ತದೆ ಈ ಎಲ್ಲ ಸಮಸ್ಯೆಗಳಿಗೆ ಮನೆಯಲ್ಲೇ ಸುಲಭವಾಗಿ ಪರಿಹಾರ ಕಂಡು ಕೊಳ್ಳಬಹುದು. ಅದು ಹೇಗೆಂದು ಈ ಲೇಖನದ ಮೂಲಕ ತಿಳಿಯೋಣ.
ಬಿಸಿಲಿಗೆ ಕಾಲು, ಕೈ, ಮುಖ ಕಪ್ಪಗಾಗುತ್ತದೆ ಹಾಗೂ ಸ್ಕಿನ್ ಡ್ರೈ ಆಗಿರುತ್ತದೆ, ಮುಖದ ಮೇಲೆ ಕಲೆ, ಮೊಡವೆಗಳು ಆಗುತ್ತದೆ. ಇವುಗಳನ್ನು ಕಡಿಮೆ ಮಾಡಬೇಕಾದರೆ ಸ್ಕ್ರಬ್ ಹಾಗೂ ಮಾಸ್ಕ್ ಮಾಡಿಕೊಳ್ಳಬೇಕಾಗುತ್ತದೆ. ಮನೆಯಲ್ಲೇ ಸುಲಭವಾಗಿ ಮಾಡಿಕೊಳ್ಳುವುದು ಹೇಗೆಂದರೆ ಸ್ಕ್ರಬ್ ಮಾಡಲು ಕಡಲೆ ಹಿಟ್ಟು, ಸಕ್ಕರೆ, ಟೊಮೆಟೊ ಬೇಕಾಗುತ್ತದೆ. ಮೊದಲು ಒಂದು ಬೌಲ್ ನಲ್ಲಿ ಎರಡು ಸ್ಪೂನ್ ಕಡಲೆ ಹಿಟ್ಟು, ಒಂದು ಸ್ಪೂನ್ ಸಕ್ಕರೆ ಹಾಕಿ ಮಿಕ್ಸ್ ಮಾಡಬೇಕು. ನಂತರ ಅರ್ಧ ಟೊಮೆಟೋ ಹಣ್ಣನ್ನು ತೆಗೆದುಕೊಂಡು ಆ ಮಿಶ್ರಣಕ್ಕೆ ಹಿಂಡಿದಾಗ ರಸ ಬರುತ್ತದೆ ಹಾಗೂ ಟೊಮೆಟೊವನ್ನು ಮಿಶ್ರಣದಲ್ಲಿ ಅದ್ದಿ ಬ್ಲಾಕ್ ಆದ ಜಾಗಕ್ಕೆ 2-3 ಮಿನಿಟ್ಸ್ ಸ್ಕ್ರಬ್ ಮಾಡಬೇಕು ನಂತರ ನೀರಿನಿಂದ ವಾಷ್ ಮಾಡಬೇಕು. ಟೊಮೆಟೊ ಕೈ, ಕಾಲು ಬಿಸಿಲಿನಿಂದ ಸುಟ್ಟು ಹೋಗಿರುವುದನ್ನು ಕಡಿಮೆ ಮಾಡುತ್ತದೆ. ಸಕ್ಕರೆ ಬ್ಲಾಕ್ ಹೆಡ್ಸ್ ಮತ್ತು ವೈಟ್ ಹೆಡ್ಸ್ ಗಳನ್ನು ಕಡಿಮೆ ಮಾಡುತ್ತದೆ. ಕಡಲೆ ಹಿಟ್ಟು ಮುಖದ ಮೇಲಿನ ಕಲೆಗಳನ್ನು ಕಡಿಮೆ ಮಾಡುತ್ತದೆ.
ಸ್ಕಿನ್ ವೈಟ್ನಿಂಗ್ ಮಾಸ್ಕ್ ಮಾಡಲು ಅಕ್ಕಿ ಹಿಟ್ಟು, ಆಲೂಗಡ್ಡೆ, ಹನಿ, ನಿಂಬೂ ಬೇಕಾಗುತ್ತದೆ. ಮೊದಲು ಒಂದು ಬೌಲ್ ನಲ್ಲಿ ಒಂದು ಸ್ಪೂನ್ ಅಕ್ಕಿ ಹಿಟ್ಟು, ಅದಕ್ಕೆ ಸ್ವಲ್ಪ ಆಲೂಗಡ್ಡೆ ಜ್ಯೂಸ್, ಅರ್ಧ ಸ್ಪೂನ್ ಹನಿ, ನಿಂಬೂ ರಸ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಬೇಕು. ಅದನ್ನು ಮುಖ ಅಥವಾ ಕಾಲಿಗೆ ಅಪ್ಲೈ ಮಾಡಬೇಕು ನಂತರ 20 ಮಿನಿಟ್ಸ್ ಹಾಗೆ ಬಿಟ್ಟು ಮಸಾಜ್ ಮಾಡಿ ವಾಷ್ ಮಾಡಬೇಕು. ಹೀಗೆ ವಾರದಲ್ಲಿ 2-3 ಸಲ ಮಾಡಬೇಕು ಹೀಗೆ ಮಾಡುವುದರಿಂದ ರಿಸಲ್ಟ್ ಸಿಗುತ್ತದೆ. ನಿಂಬೂ, ಅಕ್ಕಿ ಹಿಟ್ಟು, ಆಲೂಗಡ್ಡೆಯಲ್ಲಿ ಬ್ಲೀಚಿಂಗ್ ಮತ್ತು ಸ್ಕಿನ್ ವೈಟ್ನಿಂಗ್ ಪ್ರಾಪರ್ಟೀಸ್ ಇರುತ್ತದೆ. ಹನಿ ಒಳ್ಳೆಯ ಮೋಯಷ್ಚರೈಸ್ ಆಗಿ ಕೆಲಸ ಮಾಡುತ್ತದೆ. ಹೀಗೆ ಎಲ್ಲಾ ರೀತಿಯ ಸ್ಕಿನ್ ಅವರು ಮಾಡಬಹುದು. ಯಾವುದೇ ಅಡ್ಡ ಪರಿಣಾಮ ಆಗುವುದಿಲ್ಲ. ಯಾವುದೇ ಖರ್ಚಿಲ್ಲದೆ ಮನೆಯಲ್ಲೇ ತಯಾರಿಸಿಕೊಳ್ಳಬಹುದು. ಈ ಮಾಹಿತಿಯನ್ನು ತಪ್ಪದೇ ಎಲ್ಲರಿಗೂ ತಿಳಿಸಿ.