ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳುವುದು ಅಂದರೆ ಯಾರಿಗೆ ತಾನೇ ಇಷ್ಟ ಇರುವುದಿಲ್ಲ. ಅದರಲ್ಲೂ ಮಹಿಳೆಯರಿಗೆ ಮುಖದ ಸೌಂದರ್ಯ ಹೆಚ್ಚಿಸಿ ಕೊಳ್ಳುವುದೆಂದರೆ ಬಹಳ ಇಷ್ಟ ಹಾಗಂತ ಪುರುಷರು ಇದಕ್ಕೆ ಕಡಿಮೆ ಇಲ್ಲ. ಮನೆಯಲ್ಲೇ ಸಿಗುವ ಸಾಮಗ್ರಿಗಳನ್ನು ಉಪಯೋಗಿಸಿಕೊಂಡು ಪೇಸ್ಟ್ ತಯಾರಿಸಿ ಮುಖಕ್ಕೆ ಅಪ್ಲೈ ಮಾಡಬಹುದಾಗಿದೆ. ಯಾವ ಯಾವ ಸಾಮಗ್ರಿಗಳನ್ನು ಬಳಸಿ ಪೇಸ್ಟ್ ತಯಾರಿಸಿಕೊಳ್ಳಬಹುದು ಮತ್ತು ಹೇಗೆ ಅಪ್ಲೈ ಮಾಡಿಕೊಳ್ಳಬೇಕು ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ನಾಲ್ಕು ಚಮಚ ಕಡಲೆ ಹಿಟ್ಟು, ಎರಡು ಚಮಚ ಹಸಿ ಹಾಲು ಸೇರಿಸಿ ಮಿಶ್ರಣ ಮಾಡಬೇಕು ಹಾಲಿನಲ್ಲಿ ಸ್ವಲ್ಪ ಕೆನೆ ಇದ್ದರೆ ಉತ್ತಮ. ಅದಕ್ಕೆ ಚಿಟಿಕೆಯಷ್ಟು ಅರಿಶಿಣ ಸೇರಿಸಿ ಪೇಸ್ಟ್ ನಂತೆ ಮಾಡಿಕೊಂಡು ಮುಖಕ್ಕೆ ಫೇಸ್ ಪ್ಯಾಕ್ ನಂತೆ ಮಲಗುವ ಮೊದಲು ತಣ್ಣೀರಿನಿಂದ ಮುಖವನ್ನು ತೊಳೆದು ವರೆಸಿಕೊಂಡು ಮುಖಕ್ಕೆ ತೆಳುವಾಗಿ ಹಚ್ಚಿ ರಾತ್ರಿಯಿಡೀ ಹಾಗೆ ಇದ್ದು ಬೆಳಗ್ಗೆ ಎದ್ದ ತಕ್ಷಣ ತಣ್ಣೀರಿನಿಂದ ಮುಖವನ್ನು ತೊಳೆಯಬೇಕು.
4-6 ಸ್ಟ್ರಾಬೆರಿ ಹಣ್ಣುಗಳ ತಿರುಳನ್ನು ಹಸಿ ಹಾಲಿನೊಂದಿಗೆ ಮಿಕ್ಸಿಯಲ್ಲಿ ರುಬ್ಬಬೇಕು. ಇದಕ್ಕೆ ಒಂದು ಚಮಚ ಕಡಲೆ ಹಿಟ್ಟನ್ನು ಹಾಕಿ ಮಿಶ್ರಣ ಮಾಡಿ ಈ ಫೇಸ್ ಪ್ಯಾಕನ್ನು ಸಹ ತಣ್ಣೀರಿನಿಂದ ಮುಖವನ್ನು ತೊಳೆದು ವರೆಸಿ ಹಚ್ಚಿಕೊಂಡು ಮಲಗಬೇಕು ಬೆಳಗ್ಗೆ ಎದ್ದ ತಕ್ಷಣ ತಣ್ಣೀರಿನಿಂದ ಮುಖವನ್ನು ತೊಳೆಯಬೇಕು. ಸ್ವಲ್ಪ ಓಟ್ಸ್ ರವೆಯನ್ನು ಮಿಕ್ಸಿಯಲ್ಲಿ ನೀರನ್ನು ಹಾಕದೆ ಪುಡಿ ಮಾಡಬೇಕು ಅದಕ್ಕೆ ಒಂದು ಚಮಚ ಮೊಸರು, ಒಂದು ಚಮಚ ಜೇನು, ಅರ್ಧ ಚಿಟಿಕೆ ಅರಿಶಿಣ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಸ್ವಲ್ಪ ನೀರನ್ನು ಸೇರಿಸಬೇಕು.
ಇದನ್ನು ಸಹ ಮಲಗುವ ಮುನ್ನ ಮುಖವನ್ನು ತೊಳೆದು ವರೆಸಿ ಮುಖಕ್ಕೆ ತೆಳುವಾಗಿ ಹಚ್ಚಿ ಮಲಗಬೇಕು. ಬೆಳಗ್ಗೆ ಎದ್ದ ತಕ್ಷಣ ತಣ್ಣೀರಿನಿಂದ ಮುಖವನ್ನು ತೊಳೆಯಬೇಕು. ಗಂಧದ ಕೊರಡನ್ನು ನೀರಿನಲ್ಲಿ ತೇಯ್ದು ಅದರ ಲೇಪನ ಮಾಡಿಕೊಳ್ಳಬೇಕು ಮೊಡವೆ ಇದ್ದರೆ ನೀರಿನ ಬದಲು ಹಾಲನ್ನು ಉಪಯೋಗಿಸಬೇಕು. ಗಂಧದ ಲೇಪನವನ್ನು ಮಲಗುವ ಮೊದಲು ತೊಳೆದ ಮುಖಕ್ಕೆ ಹಚ್ಚಿ ಬೆಳಿಗ್ಗೆ ಎದ್ದ ತಕ್ಷಣ ತಣ್ಣೀರಿನಿಂದ ಮುಖ ತೊಳೆಯಬೇಕು.
ಗಂಧ ಸಿಗದೇ ಇದ್ದಲ್ಲಿ ಉತ್ತಮ ಗುಣಮಟ್ಟದ ಚಂದನದ ಪುಡಿಯನ್ನು ಉಪಯೋಗಿಸಬಹುದು. ಈ ಪುಡಿಗೆ 1 ಚಮಚ ಹಾಲು, ಸ್ವಲ್ಪ ಲ್ಯಾವೆಂಡರ್ ಎಣ್ಣೆ, ಒಂದು ಚಮಚ ಕಡಲೆಹಿಟ್ಟನ್ನು ಸೇರಿಸಿ ಮಿಶ್ರಣ ಮಾಡಿ ಅದನ್ನು ರಾತ್ರಿ ಮುಖಕ್ಕೆ ಹಚ್ಚಿಕೊಳ್ಳಬಹುದು. ಇದರಿಂದ ಮೊಡವೆಗಳು ಕೂಡ ವಾಸಿಯಾಗಿ ಮುಖ ಕಾಂತಿಯುತವಾಗುತ್ತದೆ. ಗೊಂಡೆ ಹೂವಿನಲ್ಲಿ ಬ್ಯಾಕ್ಟೀರಿಯಾ ನಿವಾರಕ ಗುಣಗಳು ಇರುತ್ತವೆ ಈ ಹೂವಿನ ಎಸಳನ್ನು ಅರೆದು ತಯಾರಿಸಿದ ಮುಖ ಲೇಪನವನ್ನು ರಾತ್ರಿ ಮಲಗುವಾಗ ಹಚ್ಚಿಕೊಂಡು ಬೆಳಗ್ಗೆ ತಣ್ಣೀರಿನಿಂದ ತೊಳೆದರೆ ಚರ್ಮ ಕೋಮಲವಾಗುತ್ತದೆ.
ಹೀಗೆ ವಾರಕ್ಕೆ ಎರಡು ಬಾರಿ ಮಾಡಬೇಕು. ಹೆಸರು ಕಾಳುಗಳನ್ನು ರಾತ್ರಿ ನೆನೆಹಾಕಿ ಬೆಳಗ್ಗೆ ಪೇಸ್ಟ್ ಮಾಡಿಕೊಂಡು ಅದಕ್ಕೆ ಎರಡು ಸ್ಪೂನ್ ತುಪ್ಪ ಸೇರಿಸಿ ಮಿಕ್ಸ್ ಮಾಡಬೇಕು ಈ ಮಿಶ್ರಣವನ್ನು ಚರ್ಮದ ಮೇಲಭಾಗವಾಗಿ ಮಸಾಜ್ ಮಾಡಬೇಕು ಹೀಗೆ ವಾರಕ್ಕೆ ಮೂರು ಬಾರಿ ಮಾಡುವುದರಿಂದ ಮೊಡವೆಗಳು ನಿವಾರಣೆಯಾಗಿ ಮುಖದ ಸೌಂದರ್ಯ ಹೆಚ್ಚುತ್ತದೆ. ಕಣ್ಣಿನ ಸುತ್ತ ಡಾರ್ಕ್ ಸರ್ಕಲ್ ಮೂಡಿದರೆ ಮುಖದ ಸೌಂದರ್ಯ ಹಾಳಾಗುತ್ತದೆ ಅದಕ್ಕಾಗಿ ಹಲಸಿನಹಣ್ಣಿನ ತುಂಡುಗಳನ್ನು ತೆಗೆದುಕೊಂಡು ಅದಕ್ಕೆ ಹಾಲನ್ನು ಸೇರಿಸಿ ಪೇಸ್ಟ್ ರೀತಿ ಮಾಡಿಕೊಂಡು ರಾತ್ರಿ ಮಲಗುವಾಗ ಕಣ್ಣಿನ ಸುತ್ತ ಅಪ್ಲೈ ಮಾಡಬೇಕು.
ಹೀಗೆ ಮಾಡುವುದರಿಂದ ಕಣ್ಣಿಗೆ ತಂಪಾಗುವ ಜೊತೆಗೆ ಸರ್ಕಲ್ಸ್ ನಿವಾರಣೆಯಾಗುತ್ತದೆ. ಒಂದು ಚಮಚ ಕಡಲೆಹಿಟ್ಟು ಮತ್ತು ಒಂದು ಚಮಚ ಅರಿಶಿಣವನ್ನು ನೀರು ಅಥವಾ ಹಾಲಿನೊಂದಿಗೆ ಸೇರಿಸಿ ಮಿಕ್ಸ್ ಮಾಡಿ ರಾತ್ರಿ ಮಲಗುವಾಗ ಮುಖ ತೊಳೆದು ಅಪ್ಲೈ ಮಾಡಿಕೊಂಡು ಬೆಳಗ್ಗೆ ತಣ್ಣೀರಿನಿಂದ ಮುಖ ತೊಳೆಯಬೇಕು. ಇವುಗಳಲ್ಲಿ ಯಾವುದೇ ಪೇಸ್ಟನ್ನು ತಯಾರಿಸಿ ಮುಖಕ್ಕೆ ಅಪ್ಲೈ ಮಾಡಿಕೊಳ್ಳುವುದರಿಂದ ಮುಖದ ಮೇಲಿನ ಡಾರ್ಕ್ ಸರ್ಕಲ್ಸ್, ಮೊಡವೆ, ಕಲೆಗಳು ನಿವಾರಣೆಯಾಗಿ ಮುಖದ ಸೌಂದರ್ಯ ಹೆಚ್ಚುತ್ತದೆ ಈ ಮಾಹಿತಿಯನ್ನು ಎಲ್ಲರಿಗೂ ತಿಳಿಸಿ.