ಸ್ಯಾಂಡಲ್ ವುಡ್ ನ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ಪ್ರೇರಣಾ ದಂಪತಿ ಇಂದು ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಕಳೆದ ವರ್ಷ ನವೆಂಬರ್ 24ರಂದು ಧ್ರುವ ಸರ್ಜಾ, ಬಹುಕಾಲದ ಗೆಳತಿ ಪ್ರೇರಣಾ ಕೊರಳಿಗೆ ಮಾಂಗಲ್ಯ ಧಾರಣೆ ಮಾಡುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಯ ವಾರ್ಷಿಕೋತ್ಸವದ ಅಂಗವಾಗಿ ಪತ್ನಿಗೆ ವಿಶೇಷ ಉಡುಗೊರೆ ನೀಡಿದ್ದಾರೆ.
ಧೃವ ಸರ್ಜಾ ಹಾಗೂ ಪ್ರೇರಣಾ ಕಳೆದ ವರ್ಷ ನವೆಂಬರ್ 24 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಬಾಲ್ಯದ ಗೆಳತಿಯಾಗಿದ್ದ ಪ್ರೇರಣಾ ಶಂಕರ್ ಅವರನ್ನು ಮಡದಿಯಾಗಿ ಸ್ವೀಕರಿಸಿದರು. ಬಹಳಷ್ಟು ವರ್ಷಗಳಿಂದ ಪ್ರೀತಿಸುತ್ತಿದ್ದ ಧೃವ ಹಾಗೂ ಪ್ರೇರಣಾ ಕಳೆದ ವರ್ಷ ಅದ್ಧೂರಿಯಾಗಿ ನೂತನ ಜೀವನಕ್ಕೆ ಕಾಲಿಟ್ಟಿದ್ದರು. ಸರ್ಜಾ ಕುಟುಂಬದಲ್ಲಿ ಸಂಭ್ರಮ ಮನೆಮಾಡಿತ್ತು. ಎರಡು ದಿನಗಳ ಮದುವೆಯ ನಂತರ ಅಭಿಮಾನಿಗಳಿಗಾಗಿ ಔತಣ ಕೂಟವನ್ನೂ ಸಹ ಆಯೋಜಿಸಿದ್ದು ಎಲ್ಲಾ ಅಭಿಮಾನಿಗಳನ್ನು ವಿಶೇಷವಾಗಿ ಆಹ್ವಾನಿಸಿದ್ದರು. ಸುಮಾರು 20 ಸಾವಿರಕ್ಕೂ ಹೆಚ್ಚು ಜನರು ಭಾಗಿಯಾಗಿ ಆಕ್ಷನ್ ಪ್ರಿನ್ಸ್ ಜೋಡಿಗೆ ಶುಭ ಹಾರೈಸಿದ್ದರು.

ಧ್ರುವ ಸರ್ಜಾ ಮದುವೆಗೆ ಇಡೀ ಸ್ಯಾಂಡಲ್ ವುಡ್ ಸಾಕ್ಷಿಯಾಗಿತ್ತು. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಯಶ್, ಕಿಚ್ಚ ಸುದೀಪ್, ರಿಯಲ್ ಸ್ಟಾರ್ ಉಪೇಂದ್ರ ಸೇರಿದಂತೆ ಅನೇಕ ಗಣ್ಯರು ಮದುವೆಯಲ್ಲಿ ಭಾಗಿಯಾಗಿ ಧ್ರುವ ಸರ್ಜಾ ದಂಪತಿಗೆ ಶುಭಹಾರೈಸಿದ್ದರು. ಅತ್ತ ಪೊಗರು ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದ ಧೃವ ಸರ್ಜಾ ಮದುವೆಯಲ್ಲಿಯೂ ಸಹ ಅದೇ ಲುಕ್ ನಲ್ಲಿ ಕಾಣಿಸಿಕೊಂಡಿದ್ದರು. ಸಿನಿಮಾನೇ ನಮ್ಮ ಜೀವನ ಎಂದಿದ್ದ ಆ ಜೋಡಿ ನೂತನ ಜೀವನಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಅಭಿಮಾನಿಗಳಿಗೆ ಹಾರೈಸುವಂತೆ ಮನವಿ ಮಾಡಿಕೊಂಡಿತ್ತು.
ನಟ ಧ್ರುವ ಸರ್ಜಾ ಮತ್ತು ಪ್ರೇರಣಾ ಶಂಕರ್ ಅವರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. 15 ವರ್ಷಗಳಿಂದ ಇವರಿಬ್ಬರು ಪರಸ್ಪರ ಪ್ರೀತಿ ಮಾಡುತ್ತಿದ್ದರು. ಶಾಲಾ ದಿನಗಳಿಂದಲೇ ಪ್ರೇರಣಾ ಮೇಲೆ ಧ್ರುವ ಹೃದಯದಲ್ಲಿ ಪ್ರೀತಿ ಮೊಳಕೆಯೊಡೆದಿತ್ತು. ತಮ್ಮ ಪ್ರೇಮ ಕಹಾನಿಯನ್ನ ಕುಟುಂಬದವರಿಗೆ ತಿಳಿಸಿ, ಎಲ್ಲರ ಸಮ್ಮತಿ ಪಡೆದು ಧ್ರುವ ಸರ್ಜಾ-ಪ್ರೇರಣಾ ಮದುವೆ ಆಗಿದ್ದಾರೆ. ಒಗ್ಗಟ್ಟಿನಿಂದ ಇದ್ದ ಕುಟುಂಬಕ್ಕೆ ಪ್ರೇರಣಾ ಸರ್ಜಾ ಮೊದಲಿನಿಂದಲೂ ಪರಿಚಿತರಾದ್ದರಿಂದ ಆ ಕುಟುಂಬದಲ್ಲಿ ಮತ್ತಷ್ಟು ಸಂಭ್ರಮ ಹೆಚ್ಚಾಗಿತ್ತು. ಎಲ್ಲರೂ ಸ್ನೇಹಿತರಂತೆ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಕುಟುಂಬದ ಫೋಟೋ ಗಳನ್ನು ಹಂಚಿಕೊಳ್ಳುತ್ತಿದ್ದರು. ಒಂದು ರೀತಿ ಜೇನು ಗೂಡಿನಂತೆ ಆ ಕುಟುಂಬವಿತ್ತು ಎನ್ನಬಹುದು.
ಆದರೆ ಈ ವರ್ಷ ಸರ್ಜಾ ಕುಟುಂಬದಲ್ಲಿ ನಡೆದ ಚಿರು ಸರ್ಜಾ ಅವರ ಘಟನೆಯಿಂದಾಗಿ ಕುಟುಂಬದಲ್ಲಿ ಯಾವುದೇ ಸಮಾರಂಭಗಳು ನೆರವೇರಲಿಲ್ಲ.. ಯಾವುದೇ ಸಂತೋಷವನ್ನು ಆಚರಿಸದೇ ಪುಟ್ಟ ಚಿರುವಿನ ಆಗಮನದ ನಿರೀಕ್ಷೆಯಲ್ಲಿದ್ದರು. ಇದೀಗ ಪುಟ್ಟ ಕಂದನ ಆಗಮನವಾಗಿದ್ದು ಚಿರುವೇ ಮತ್ತೆ ಹುಟ್ಟಿ ಬಂದರೆಂದು ಭಾವಿಸಿದ್ದು ಎರಡೂ ಕುಟುಂಬದಲ್ಲಿ ಸಂತೋಷ ಮನೆ ಮಾಡಿದೆ. ಪುಟ್ಟ ಕಂದನ ಆಗಮನ ಕುಟುಂಬದ ಸಂಭ್ರಮಾಚರಣೆಗಳು ಮರುಕಳಿಸುವಂತೆ ಮಾಡಿದೆ. ಇನ್ನು ಪೊಗರು ಸಿನಿಮಾದ ಸಂಪೂರ್ಣ ಚಿತ್ರೀಕರಣ ಮುಕ್ತಾಯಗೊಂಡಿದ್ದು ಧೃವ ಸರ್ಜಾ ಕೂಡ ತಮ್ಮ ಲುಕ್ ಬದಲಿಸಿಕೊಂಡಿದ್ದಾರೆ.
ಹೊಸ ಸಿನಿಮಾ ದುಬಾರಿ ಸಿನಿಮಾದ ಚಿತ್ರೀಕರಣಕ್ಕೆ ಸಿದ್ಧರಾಗಿದ್ದಾರೆ. ಇನ್ನು ಈ ನಡುವೆ ಧೃವ ಸರ್ಜಾ ಹಾಗೂ ಪ್ರೇರಣಾರ ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವದ ದಿನ ಬಂದಿದ್ದು. ಪತ್ನಿಗೆ ವಿಶೇಷ ಉಡುಗೊರೆ ನೀಡಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ಮುದ್ದು ಕಂದನ ಆಗಮನದ ಸಂತೋಷದಲ್ಲಿದ್ದ ಧೃವ ಸರ್ಜಾ ಇದೀಗ ಮದುವೆ ವಾರ್ಷಿಕೋತ್ಸವದ ದಿನದ ಅಂಗವಾಗಿ ಪತ್ನಿಯ ಜೊತೆ ಪ್ರವಾಸ ಕೈಗೊಳ್ಳುವ ಮೂಲಕ ಬಹಳಷ್ಟು ತಿಂಗಳ ನಂತರ ಕೆಲಸದಿಂದ ಬಿಡುವು ಮಾಡಿಕೊಂಡಿದ್ದಾರೆ.
ಮದುವೆಯಾದ ಸಮಯದಿಂದಲೂ ಸಿನಿಮಾ ಹಾಗೂ ಇನ್ನಿತರ ಕೆಲಸಗಳಲ್ಲಿ ಬ್ಯುಸಿ ಆಗಿದ್ದ ಧೃವ ಸರ್ಜಾ ಇದೀಗ ಮಡದಿಯೊಂದಿಗೆ ಗೋವಾಗೆ ತೆರಳಿದ್ದು ಸರ್ಪ್ರೈಸ್ ನೀಡಿದ್ದಾರೆ. ಹೌದು ಮೂರು ದಿನಗಳ ಪ್ರವಾಸಕ್ಕೆ ಪ್ಲಾನ್ ಮಾಡಿದ್ದ ಧೃವ ಸರ್ಜಾ ಮದುವೆ ವಾರ್ಷಿಕೋತ್ಸವವನ್ನು ಗೋವಾದಲ್ಲಿಯೇ ಆಚರಿಸಿಕೊಂಡಿದ್ದಾರೆ. ಅತ್ತ ಪ್ರೇರಣಾ ಕೂಡ ಲಾಕ್ ಡೌನ್ ಸಡಿಲಗೊಂಡ ಬಳಿಕ ತಮ್ಮ ಕೆಲಸದಲ್ಲಿ ತೊಡಗಿಕೊಂಡಿದ್ದು ಸದ್ಯ ಬಿಡುವು ಮಾಡಿಕೊಂ