ಮನೆ ಮನೆಯಲ್ಲಿಯೂ ಸಂಜೆ ಆರು ಗಂಟೆಯಿಂದ ಧಾರಾವಾಹಿಯ ಹಾವಳಿ ಪ್ರಾರಂಭವಾಗುತ್ತದೆ. ಹೆಂಗಸರಂತೂ ಧಾರಾವಾಹಿಗಳ ದೊಡ್ಡ ಅಭಿಮಾನಿಗಳು. ಇಂತಹದೆ ಜನಪ್ರಿಯ ಧಾರಾವಾಹಿಗಳಲ್ಲಿ ಮಗಳು ಜಾನಕಿ ಕೂಡ ಒಂದು. ಅದರಲ್ಲಿ ಜಾನಕಿ ಪಾತ್ರದಲ್ಲಿ ನಟಿಸಿದ ಗಾನವಿ ಲಕ್ಷ್ಮಣ ಅವರನ್ನು ನ್ಯೂಸ್ ಫಸ್ಟ್ ಚಾನೆಲ್ ಅವರು ಸಂದರ್ಶನ ಮಾಡಿದಾಗ ಅವರಾಡಿದ ಮಾತುಗಳೇನು ಎಂಬುದನ್ನು ನಾವು ತಿಳಿಯೋಣ.

ಮಗಳು ಜಾನಕಿ ಖ್ಯಾತಿಯ ಗಾನವಿ ಅವರನ್ನು ಜನರು ಗಾನವಿಗಿಂತ ಜಾನಕಿ ಅಥವಾ ಜಾನ್ಹವಿಯಾಗಿಯೆ ಹೆಚ್ಚು ಗುರುತಿಸುತ್ತಾರೆ. ಲಾಕ್ಡೌನ್ ಸಮಯದಲ್ಲಿ ಜಾನಕಿ ಅವರು ತಮ್ಮ ಊರಾದ ಹೊಸಳ್ಳಿ ಚಿಕ್ಕಮಗಳೂರಿಗೆ ಹೋಗಿದ್ದರು. ಮೂರು ತಿಂಗಳುಗಳ ಕಾಲ ಅಲ್ಲಿಯೆ ಇದ್ದರು. ಕಿರುತೆರೆಯಿಂದ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ರಿಷಬ್ ಶೆಟ್ಟಿ ಅವರ ಹೀರೊ ಸಿನಿಮಾದ ಮೂಲಕ. ಲಾಕ್ಡೌನ್ ಸಮಯ ಬೇಸರ ಆಯಿತು ಅನ್ನುವಾಗ ಸರ್ಪ್ರೈಸ್ ಅನ್ನುವಂತೆ ರಿಷಬ್ ಶೆಟ್ಟಿಯವರ ಆಫಿಸ್ ನಿಂದ ಕಾಲ್ ಬಂತು ಅವರ ಜೊತೆಗೆ ಕೆಲಸ ಮಾಡುವ ಆಸಕ್ತಿ ಹೊಂದಿದ್ದ ಗಾನವಿ ಒಪ್ಪಿಕೊಳ್ಳುತ್ತಾರೆ‌.

ಟಿಎನ್ ಸೀತಾರಾಮ್ ಅವರು ಹಾಗೂ ರಿಷಬ್ ಶೆಟ್ಟಿಯವರ ನಿರ್ದೇಶನದ ಶೈಲಿ ಬೇರೆಯಾದರೂ ನಟರನ್ನು ತಿದ್ದುವ, ಗೌರವಿಸುವ ಶೈಲಿ ಒಂದೆ ತರ ಇದೆ. ದಾರಾವಾಹಿ ನಿಂತರೆ ಅದೃಷ್ಟ ದುರಾದೃಷ್ಟ ಅನ್ನುವ ಮಾತುಗಳು ಕೇಳಿಬರುವುದು ಸಹಜ ಆದರೆ ಅದೃಷ್ಟ ದುರಾದೃಷ್ಟ ಅಂತ ಅಲ್ಲ ಆದರೆ ಎಂತಹದೆ ಕಠಿಣ ಪರಿಸ್ಥಿತಿಯನ್ನು ನಾನು ನಿಭಾಯಿಸಬಲ್ಲೆ, ಪಾರು ಮಾಡಬಲ್ಲೆ ಎಂಬ ಆತ್ಮವಿಶ್ವಾಸ ಇತ್ತು. ಇದರಿಂದ ಕಿರುತೆರೆ ಹಾಗೂ ಬೆಳ್ಳಿತೆರೆ ಎರಡರಲ್ಲೂ ಒಳ್ಳೆಯ ಟೀಂ ಸಿಕ್ಕಿದೆ ಎನ್ನುವ ಖುಷಿ ಇದೆ ಎನ್ನುತ್ತಾರೆ. ರಿಷಬ್ ಶೆಟ್ಟಿಯವರ ಹೀರೊ ಸಿನಿಮಾದ ಸ್ಟೋರಿಯ ಕುರಿತು ಜನರೆ ಸುಮಾರು ಕಥೆಗಳನ್ನು ಹೆಣೆದಿದ್ದಾರೆ. ಹೀರೊ ಸಿಮಾಗೆ ಗಾನವಿ ಸೆಲೆಕ್ಟ್ ಆಗಲು ಕಾರಣ ಕಿರಿಕ್ ಪಾರ್ಟಿಯ ಆಡಿಷನ್ ನಲ್ಲಿ ಗಾನವಿ ಅವರು ನಟಿಸಿದ್ದು. ಗಾನವಿ ಮತ್ತೆ ರಿಷಬ್ ಶೆಟ್ಟಿಯವರಿಗೆ ಕಾಲ್ ಮಾಡಿ ಸೆಲೆಕ್ಟ್ ಮಾಡಿದ್ದಕ್ಕೆ ಕಾರಣ ಕೇಳಿದ್ದರು ಕೂಡ. ಲಾಕ್ಡೌನ್ ಕಾರಣದಿಂದಾಗಿ ಮಗಳು ಜಾನಕಿ ಧಾರಾವಾಹಿ ನಿಂತಾಗ ಹೀರೊ, ಹೀರೊಯಿನ್ ಅನ್ ಲಕ್ಕಿ ಎನ್ನು ಮಾತುಗಳು ಬಂದವು, ಆದರೆ ಸೋತವರು ಗೆದ್ದಿದ್ದಾರೆ ಹಾಗಾಗಿ ಲಕ್ಕಿ ಮತ್ತು ಅನ್ ಲಕ್ಕಿಯ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ.

ಮಗಳು ಜಾನಕಿ ಧಾರಾವಾಹಿ ಮುಗಿದಾಗ ಗಾನವಿಯವರ ತಂದೆಯು ಅತ್ತಿದ್ದರು. ಜೊತೆಗೆ ಹಲವಾರು ಕಾಲ್ ಗಳು ಬಮದಿದ್ದು ಬೇಸರದಿಂದ ಕೂಡಿದ್ದವು. ಮಗಳು ಜಾನಕಿ ಧಾರಾವಾಹಿ ಅರ್ಧಕ್ಕೆ ನಿಂತಿದ್ದು ಬೇಸರವಾಗಿತ್ತು. ಆದರೆ ಕಠಿಣ ಸಂದರ್ಭದ ಕಾರಣದಿಂದ ನಿಲ್ಲಿಸಲೆ ಬೇಕಿತ್ತು. ನಿಜವಾದ ತಂದೆಯ ಯಾರು ಎಂಬುದು ತಿಳಿದಾಗ ಜಾನಕಿ ಹೇಗೆ ಪ್ರತಿಕ್ರಿಯೆ ನೀಡುತ್ತಿದ್ದಳು ಎಂಬುದನ್ನು ಅಭಿನಯಿಸುವ ಕಾತುರತೆ ಇತ್ತು. ಆದರೆ ಅದು ಸಾಧ್ಯವಾಗಲಿಲ್ಲ ಎನ್ನುತ್ತಾರೆ ಗಾನವಿ. ಮಗಳು ಜಾನಕಿ ಭಾಗ ಎರಡು ಈ ರೀತಿಯಲ್ಲಿ ಬರುತ್ತದೆಯೊ ಇಲ್ಲವೊ ತಿಳಿದಿಲ್ಲ. ಟಿಎನ್ ಸೀತಾರಾಮ್ ಅವರು ತುಂಬಾ ಬೇಸರವಾಗಿರುತ್ತದೆ. ಕಿರುತೆರೆಯಿಂದ ಬೆಳ್ಳಿತೆರೆಗೆ ಬರಲು ಕಾರಣ ನನ್ನ ನಟನೆ ಕಲಿಯುವ ಹಸಿವು. ಕಿರುತೆರೆಯಿಂದ ಜೀವನ ಕಟ್ಟಿಕೊಂಡವರು ಹಾಗೂ ಹೆಸರು ಮಾಡಿದವರು ತುಂಬಾ ಜನ ಇದ್ದಾರೆ. ಎಲ್ಲರಿಗೂ ನಂತರ ತಮ್ಮನ್ನು ಎಲ್ಲಿ ಗುರುತಿಸಿಕೊಳ್ಳಬೇಕು ಎಂಬ ಪ್ಲಾನ್ ಇರಬೇಕು. ಹಾಗೆಯೆ ನಾನು ನನ್ನನ್ನು ಬೇರೆಯ ಲೆವೆಲ್ ನಲ್ಲಿ ನೋಡಲು ಇಷ್ಟ ಪಡುತ್ತಿದ್ದೆನೆ ಎನ್ನುತ್ತಾರೆ.

ಕಥೆಯನ್ನು ಕೇಳುತ್ತಲೂ ಇದ್ದಾರೆ. ಧಾರಾವಾಹಿಯ ನಿಧಾನತೆಯಿಂದ ಸಿನಿಮಾದ ವೇಗಕ್ಕೆ ಹೊಂದಾಣಿಕೆ ಆಗಲು ಕಷ್ಟವಾಗಲಿಲ್ಲ. ಪಾತ್ರದ ಒಳಗೆ ಪ್ರವೇಶ ಮಾಡುವುದು ಒಂದು ತರಹದ ಖುಷಿ ಕೊಡುತ್ತದೆ. ಜೊತೆಗೆ ಮನೆಯಲ್ಲಿ ಹಲವಾರು ರೀತಿಯಲ್ಲಿ ಅಭಿನಯಿಸಿ ಅಭ್ಯಾಸ ಮಾಡುತ್ತಲೆ ಇರುತ್ತೇನೆ ಎಂದರು. ಸಣ್ಣ ವಯಸ್ಸಿನಿಂದಲೂ ಇಂಡಸ್ಟ್ರಿ ಹೆಣ್ಣು ಮಕ್ಕಳಿಗೆ ಅಲ್ಲ ಎನ್ನುವ ಭಾವ ಇತ್ತು. ಹುಡುಗಿಯರಂತೆ ಹುಡುಗರು ಕೂಡ ಹಲವಾರು ತೊಂದರೆ ಅನುಭವಿಸುತ್ತಾರೆ. ಪ್ರತಿಯೊಂದು ಸಂದರ್ಭಗಳಲ್ಲಿ ಪಾಠ ಕಲಿತೆ, ಇದರಿಂದ ನನಗೆ ಖುಷಿ ಇದೆ. ನನ್ನ ವಯಸ್ಸಿನ ಎಷ್ಟೋ ಹುಡುಗಿಯರು ಮದುವೆಯಾಗಿದ್ದಾರೆ, ಆದರೆ ನಾನು ಕಠಿಣ ಪರಿಸ್ಥಿತಿಯನ್ನು ದಾಟಿ ನನ್ನ ಗುರುತಿಸಿಕೊಂಡಿದ್ದು ಖುಷಿಯಾಗಿದೆ ಎಂದು ಗಾನವಿ ಹೇಳುತ್ತಾರೆ‌. ಮನೆಯಲ್ಲಿ ಮದುವೆ ಮಾಡೊಕೆ ಒತ್ತಾಯ ಇತ್ತು, ಆದರೆ ಇನ್ನೊಂದು ಪಾತ್ರದಲ್ಲಿ ಮುಳುಗಿ ನಟಿಸುವ ನಟರನ್ನು ಅರಿತುಕೊಂಡು, ಅವರ ಬದುಕನ್ನು, ಕೆಲಸವನ್ನು ಅರ್ಥಮಾಡಿಕೊಳ್ಳುವ ಸಂಗಾತಿ ಸಿಕ್ಕರೆ ಮದುವೆಯಾಗಬಹುದು ಎನ್ನುತ್ತಾರೆ ಗಾನವಿ ಲಕ್ಷ್ಮಣ್.

ನ್ಯೂಸ್ ಫಸ್ಟ್ ಚಾನೆಲ್ ಸಂದರ್ಶಕರಾದ ಸೋಮಣ್ಣ ಅವರ ಪ್ರತಿಯೊಂದು ಪ್ರಶ್ನೆಗೂ ಗಾನವಿ ಲಕ್ಷ್ಮಣ್ ಅವರು ಉತ್ತರಿಸಿದ್ದು ಹೀಗಿತ್ತು. ಕಿರುತೆರೆಯಿಂದ ಬೆಳ್ಳಿತೆರೆಗೆ ಕಾಲಿಡುತ್ತಿರುವ ಗಾನವಿ ಲಕ್ಷ್ಮಣ್ ಅವರಿಗೆ ಒಳ್ಳೆಯದಾಗಲಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!