ದುನಿಯಾ ಸಿನಿಮಾದಿಂದ ಫೇಮಸ್ ಆದ ಬ್ಲಾಕ್ ಕೋಬ್ರ ಅವರ ನಿಜವಾದ ಹೆಸರು ಬಿ.ಆರ್ ವಿಜಯ ಕುಮಾರ್. ಬೆಂಗಳೂರಿನವರಾದ ಇವರು ಸ್ಯಾಂಡಲ್ ವುಡ್ ನಲ್ಲಿ ತಮ್ಮದೇ ಆದ ಸ್ಟೈಲ್ ನಿಂದ ಫೇಮಸ್ ಆಗಿದ್ದಾರೆ. ಇಬ್ಬರು ಪತ್ನಿಯರನ್ನು ಹೊಂದಿದ ಇವರು ಹಲವು ಸಿನಿಮಾಗಳಲ್ಲಿ ನಾಯಕ ನಟನಾಗಿ ನಟಿಸಿದ್ದಾರೆ. ಇವರು ಫಿಟ್ನೆಸ್ ಕಡೆ ಗಮನ ಹರಿಸಿದ್ದರು ಅವರ ಬೊಡಿ ಬಿಲ್ಡ್ ಬಗ್ಗೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಹೇಳಿದ ಮಾತುಗಳನ್ನು ಈ ಲೇಖನದ ಮೂಲಕ ತಿಳಿಯೋಣ.

ದುನಿಯಾ ವಿಜಯ್ ಅವರು ಚಿಕ್ಕ ವಯಸ್ಸಿನಲ್ಲಿರುವಾಗಲೇ ಅವರ ತಂದೆ ಯೋಗ ಮಾಡುತ್ತಿರುವುದರಿಂದ ಅದನ್ನು ನೋಡುತ್ತಾ ವಿಜಯ್ ಅವರಿಗೂ ಬೋಡಿ ಬಿಲ್ಡ್ ಮಾಡುವ ಬಗ್ಗೆ ಆಸಕ್ತಿ ಬಂತು. ಅವರು ಸಾಧಿಸಬೇಕೆಂದರೆ ಎಲ್ಲವೂ ಬೇಕಾಗುತ್ತದೆ ಎಂದು ಅಂದುಕೊಂಡಿದ್ದೆ ಎಂದು ಹೇಳಿದರು. ಅವರು ಬೊಡಿ ಬಿಲ್ಡ್ ಮಾಡಲು ಪ್ರಾರಂಭಿಸಿದರು ಕೆಲವು ಸ್ಪರ್ಧೆ ಗಳಲ್ಲಿ ವಿನ್ ಆದರು, ಮಿಸ್ಟರ್ ಬೆಂಗಳೂರು ಆದರು. ಯೂತ್ ಉತ್ಸವದಲ್ಲಿ ಪಾಲ್ಗೊಂಡು ಗೆದ್ದರು. ನ್ಯಾಷನಲ್ ಲೆವೆಲ್ ನಲ್ಲಿ ಪಾಲ್ಗೊಂಡರು. ನಂತರ ಅವರಿಗೆ ಮೆಂಟೇನ್ ಮಾಡಲು ಆಗಲಿಲ್ಲ ದುಡ್ಡಿನ ಅವಶ್ಯಕತೆ ಇತ್ತು ಅಷ್ಟ್ರಲ್ಲಾಗಲೇ ಅವರ ಬಳಿ ಇರುವ ಬೈಕ್ ನ್ನು ಮಾರಿದ್ದರು.

ಜನ ವಿಜಯ್ ಅವರನ್ನು ನಿಂದಿಸುತ್ತಿದ್ದರು ಬೈಕ್ ಮಾರಿ ಶೋಕಿ ಮಾಡುತ್ತಾನೆ ಎಂದು. ಅವರಿಗಾಗ ಹೆಂಡತಿ ಹಾಗೂ ಮಗಳಿದ್ದಳು. ಬೈಕ್ ಮಾರಿದ ಹಣವನ್ನು ಚಿಕನ್ ಶಾಪ್, ಎಗ್ಗ ಶಾಪ್, ಡ್ರೈ ಫ್ರೂಟ್ಸ್ ಶಾಪ್ ಗೆ ಕೊಟ್ಟು 3-4 ತಿಂಗಳು ಆಹಾರ ತೆಗೆದುಕೊಂಡರು. ಸ್ಟೇಟ್ ಲೆವೆಲ್ ನಲ್ಲಿ ಸೆಕೆಂಡ್ ಬಂತು ಆದರೆ ಅದರಲ್ಲಿ ರಾಜಕೀಯದಿಂದ ಮೋಸ ಆಯಿತು. ವಿಜಯ್ ಅವರು ಫಸ್ಟ್ ಪ್ಲೇಸ್ ಕೊಟ್ಟಿಲ್ಲ ಎಂದು ಸೆಕೆಂಡ್ ಪ್ಲೇಸನ ಸರ್ಟಿಫಿಕೇಟ್ ಅನ್ನು ಹರಿದು ಹಾಕಿದರು ಇನ್ನು ನಾನು ಇದಕ್ಕೆ ಬರುವುದಿಲ್ಲ ಎಂದು ನಿರ್ಧರಿಸಿದರು. ವಿಜಯ್ ಅವರು 6-8 ತಿಂಗಳು ಶ್ರಮ ಪಟ್ಟಿದ್ದರು, ಮನೆಯಲ್ಲಿ ಒಂದು ಕೆಲಸ ಮಾಡಿರಲಿಲ್ಲ ಆದರೆ ಕೊನೆ ಘಳಿಗೆಯಲ್ಲಿ ಕಂಡ ಕನಸು ಈಡೇರಲಿಲ್ಲ. ಇವರ ತಂದೆಯ ಹೆಸರು ರುದ್ರಪ್ಪ ತಾಯಿ ನಾರಾಯಣಮ್ಮ. ಇವರು ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದಿದ್ದಾರೆ ಚಿಕ್ಕ ವಯಸ್ಸಿನಿಂದ ಬಹಳ ಕಷ್ಟ ಪಟ್ಟು ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ. ಬಾಲ್ಯದಲ್ಲಿ ತುಂಟರಾಗಿದ್ದ ಇವರು ಅಪ್ಪನನ್ನು ಕಂಡರೆ ಹೆದರುತ್ತಿದ್ದರು. ಮೊದಲು ಸಿನಿಮಾಗಳಲ್ಲಿ ಚಿಕ್ಕ, ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ದುನಿಯಾ ಚಿತ್ರದ ಹಾಡುಗಳನ್ನು ಈಗಲೂ ಇಷ್ಟಪಡುವವರಿದ್ದಾರೆ. ವಿಜಯ್ ಅವರು ಕನ್ನಡ ಚಿತ್ರರಂಗದಲ್ಲಿ ಹೆಚ್ಚಿನ ಸಿನಿಮಾದಲ್ಲಿ ನಟಿಸಿ ಸಾಧನೆ ಮಾಡಲಿ ಎಂದು ಆಶಿಸೋಣ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!